Nenapirali Prem: ‘ನಾನು ಟ್ರೆಂಡ್​ನಲ್ಲಿ ಇರುವಾಗ ಮಗಳು ಹೀರೋಯಿನ್​ ಆಗಿದ್ದು ಖುಷಿ ನೀಡಿದೆ’: ‘ನೆನಪಿರಲಿ’ ಪ್ರೇಮ್​

Amrutha Prem | Tagaru Palya: ‘ಟಗರು ಪಲ್ಯ’ ಸಿನಿಮಾಗಾಗಿ ಅಮೃತಾ ಪ್ರೇಮ್​ ಅವರು ಮಂಡ್ಯ ಭಾಷೆ ಕಲಿಯುತ್ತಿದ್ದಾರೆ. ತಂದೆಯ ಮಾರ್ಗದರ್ಶನದಲ್ಲಿ ಅವರು ಚಿತ್ರರಂಗದ ಪಯಣ ಆರಂಭಿಸಿದ್ದಾರೆ.

Nenapirali Prem: ‘ನಾನು ಟ್ರೆಂಡ್​ನಲ್ಲಿ ಇರುವಾಗ ಮಗಳು ಹೀರೋಯಿನ್​ ಆಗಿದ್ದು ಖುಷಿ ನೀಡಿದೆ’: ‘ನೆನಪಿರಲಿ’ ಪ್ರೇಮ್​
ಅಮೃತಾ - ಪ್ರೇಮ್
Follow us
| Updated By: ಮದನ್​ ಕುಮಾರ್​

Updated on:Nov 30, 2022 | 2:21 PM

ನಟ ‘ನೆನಪಿರಲಿ’ ಪ್ರೇಮ್​ (Nenapirali Prem) ಅವರ ಪುತ್ರಿ ಅಮೃತಾ ಈಗ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಮೃತಾ ಪ್ರೇಮ್​ ನಟನೆಯ ಚೊಚ್ಚಲ ಸಿನಿಮಾ ‘ಟಗರು ಪಲ್ಯ’ (Tagaru Palya) ಮುಹೂರ್ತ ನೆರವೇರಿದೆ. ಈ ಸಂದರ್ಭದಲ್ಲಿ ಮಗಳ ಸಿನಿಮಾ ಪಯಣದ ಕನಸಿನ ಬಗ್ಗೆ ಪ್ರೇಮ್​ ಮಾತನಾಡಿದ್ದಾರೆ. ಅಮೃತಾ (Amrutha Prem) ಕೂಡ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದ ಜನತೆಗೆ ಮಗಳನ್ನು ಪರಿಚಯಿಸುತ್ತಿರುವುದಕ್ಕೆ ಪ್ರೇಮ್​ ಕುಟುಂಬ ಎಗ್ಸೈಟ್​ ಆಗಿದೆ. ‘ಗಾಂಧಿನಗರಕ್ಕೆ ಮಾತ್ರವಲ್ಲ, ಕರ್ನಾಟಕದ ಜನರ ಹೃದಯದಲ್ಲಿ ಮನೆ ಮಗಳಾಗಿ ಎಂಟ್ರಿ ಆಗುತ್ತಿದ್ದಾಳೆ. ಅದು ಹೆಮ್ಮೆಪಡುವ ವಿಚಾರ’ ಎಂದು ಪ್ರೇಮ್​ ಹೇಳಿದ್ದಾರೆ.

‘ತಂದೆಯಾಗಿ ನನಗೆ ತುಂಬ ಸಂತೋಷ ಆಗುತ್ತಿದೆ. ನಾನು ಟ್ರೆಂಡಿಂಗ್​ನಲ್ಲಿ ಇರುವಾಗಲೇ ಮಗಳನ್ನು ಹೀರೋಯಿನ್​ ಆಗಿ ನೋಡುವ, ಆಕೆಯ ಕಟೌಟ್​ ನೋಡುವ ಸೌಭಾಗ್ಯ ನನಗೆ ಸಿಕ್ಕಿದೆ. ಗೆಳೆಯ ನಿರಂಜನ್​, ಡಾಲಿ ಧನಂಜಯ್​ ಹಾಗೂ ನಿರ್ದೇಶಕ ಉಮೇಶ್​ ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಮೂವರು ಸೇರಿಕೊಂಡು ಅಪ್ಪಟ ಕನ್ನಡನಾಡಿನ ಸ್ಕ್ರಿಪ್ಟ್​ ಮಾಡಿದ್ದಾರೆ. ಆ ಬಗ್ಗೆ ಸಂತೋಷ ಇದೆ’ ಎಂದು ಪ್ರೇಮ್​ ಹೇಳಿದ್ದಾರೆ.

ತಮ್ಮ ಚಿತ್ರರಂಗದ ಎಂಟ್ರಿ ಬಗ್ಗೆ ಅಮೃತಾ ಮಾತನಾಡಿದ್ದಾರೆ. ‘ಚಿತ್ರರಂಗಕ್ಕೆ ಬರುತ್ತೇನೆ ಎಂಬ ಆಲೋಚನೆ ಈ ಮೊದಲು ಇರಲಿಲ್ಲ. ಕಲಿಯಬೇಕು ಎಂಬ ಆಸಕ್ತಿ ಇದೆ. ಈಗ ವರ್ಕ್​ಶಾಪ್​ ನಡೆಯುತ್ತಿದೆ. ಸಾಕಷ್ಟು ವಿಷಯಗಳನ್ನು ಕಲಿಯುತ್ತಿದ್ದೇನೆ. ಅಪ್ಪ ಈ ಕ್ಷೇತ್ರದಲ್ಲಿ ಎಲ್ಲರ ಜೊತೆ ಸ್ನೇಹಮಯವಾಗಿ ಇರುತ್ತಾರೆ. ಅವರ ಆ ಗುಣ ನನಗೆ ಸ್ಫೂರ್ತಿ. ಎಲ್ಲರ ಸಿನಿಮಾವನ್ನೂ ನೋಡಿದ್ದೇನೆ. ಒಂದೊಂದು ವಿಚಾರದಲ್ಲಿ ಒಬ್ಬೊಬ್ಬರು ಸ್ಫೂರ್ತಿ ಆಗಿದ್ದಾರೆ’ ಎಂದು ಅಮೃತಾ ಹೇಳಿದ್ದಾರೆ.

ಇದನ್ನೂ ಓದಿ
Image
Amrutha Prem: ಚಿತ್ರರಂಗಕ್ಕೆ ‘ನೆನಪಿರಲಿ’ ಪ್ರೇಮ್​ ಪುತ್ರಿ ಎಂಟ್ರಿ; ಡಾಲಿ ನಿರ್ಮಾಣದ ಸಿನಿಮಾದಲ್ಲಿ ಅಮೃತಾ ನಟನೆ
Image
‘ನೆನಪಿರಲಿ’ ಪ್ರೇಮ್​ ಜತೆ ನಟಿಸಿದ್ದ ಹೀರೋಯಿನ್​ಗೆ ಮದುವೆ; ವೈರಲ್​ ಆಯ್ತು ಫೋಟೋ
Image
‘ನೆನಪಿರಲಿ’ ಪ್ರೇಮ್​ ಮಗಳ ಜನ್ಮದಿನ; ಮುದ್ದಿನ ಪುತ್ರಿಯ ಫೋಟೋ ಹಂಚಿಕೊಂಡು ಶುಭಕೋರಿದ ನಟ
Image
‘ನೆನಪಿರಲಿ’ ಪ್ರೇಮ್​ ಮುಂದಿನ ಚಿತ್ರಕ್ಕೆ 400 ಕೋಟಿ ರೂ. ಬಜೆಟ್​; ಹಾಲಿವುಡ್​ ಹಾದಿಯತ್ತ ‘ಲವ್ಲಿ ಸ್ಟಾರ್​’

‘ಟಗರು ಪಲ್ಯ’ ಸಿನಿಮಾಗಾಗಿ ಅಮೃತಾ ಪ್ರೇಮ್​ ಅವರು ಮಂಡ್ಯ ಭಾಷೆ ಕಲಿಯುತ್ತಿದ್ದಾರೆ. ‘ನನ್ನದು ಓವರ್​​ ಥಿಂಕಿಂಗ್​ ಜಾಸ್ತಿ. ನನಗೆ ತುಂಬ ಭಯ ಇತ್ತು. ಆದರೆ ಭಯ ಬೇಡ, ಆತ್ಮವಿಶ್ವಾಸದಿಂದ ಇರು ಎಂದು ಅಪ್ಪ-ಅಮ್ಮ ಹೇಳಿದ್ದಾರೆ. ಅವರ ಬೆಂಬಲ ಜಾಸ್ತಿ ಇದೆ’ ಎಂದಿದ್ದಾರೆ ಅಮೃತಾ ಪ್ರೇಮ್.

‘ಯಶ್​ ಅವರು ನನಗೆ ತುಂಬ ಇಷ್ಟ. ಅಪ್ಪು ಸರ್​ ಅವರ ಆಶೀರ್ವಾದದಿಂದಲೇ ನನಗೆ ಈ ಸಿನಿಮಾ ಆಫರ್​ ಬಂದಿದೆ ಅನಿಸುತ್ತದೆ. ಎಲ್ಲ ನಟರ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಇದೆ’ ಎಂದು ಹೇಳಿರುವ ಅಮೃತಾ ಅವರು ಸಿನಿಮಾ ಜೊತೆಗೆ ವಿದ್ಯಾಭ್ಯಾಸವನ್ನೂ ಮುಂದುವರಿಸಿಕೊಂಡು ಹೋಗಲಿದ್ದಾರೆ. ತಂದೆಯ ಮಾರ್ಗದರ್ಶನದಲ್ಲಿ ಅವರು ಚಿತ್ರರಂಗದ ಪಯಣ ಆರಂಭಿಸಿದ್ದಾರೆ. ಅವರಿಗೆ ಅನೇಕ ಸೆಲೆಬ್ರಿಟಿಗಳು ಸ್ವಾಗತ ಕೋರಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. 

Published On - 2:12 pm, Wed, 30 November 22