ಕನ್ನಡದ ‘ದ್ವಿಪಾತ್ರ’ ಸಿನಿಮಾ (Dwipatra Kannada Movie) ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇರುವ ಈ ಸಿನಿಮಾದಲ್ಲಿ ಸೀರಿಯಲ್ ನಟ ಚಂದು ಗೌಡ ನಟಿಸಿದ್ದಾರೆ. ಸತ್ಯ, ಮಾಳವಿಕಾ ಅವಿನಾಶ್, ಪಾಯಲ್ ಚೆಂಗಪ್ಪ ಮುಂತಾದವರು ಕೂಡ ಅಭಿನಯಿಸಿದ್ದಾರೆ. ‘ದ್ವಿಪಾತ್ರ’ ಸಿನಿಮಾಗಾಗಿ ನಿರ್ದೇಶಕರು ಸಾಕಷ್ಟು ಹೋಮ್ ವರ್ಕ್ ಮಾಡಿದ್ದಾರೆ ಎಂದು ಚಂದು ಗೌಡ (Chandu Gowda) ಹೇಳಿದ್ದಾರೆ. ಸದ್ಯದಲ್ಲೇ ಬಿಡುಗಡೆ ಆಗಲಿರುವ ಈ ಸಿನಿಮಾದ ವಿಶೇಷತೆಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.