ಶಾಲಾ ಪ್ರವಾಸಕ್ಕೆ ತೆರಳಿದ್ದ ಕೆಎಸ್​ಆರ್​ಟಿಸಿ ಬಸ್​ ಬ್ರೇಕ್​ ಫೇಲ್​​, ಚಾಲಕನ ಚಾಣಕ್ಷತನದಿಂದ ತಪ್ಪಿದ ಭಾರಿ ಅನಾಹುತ

ಶಾಲಾ ಪ್ರವಾಸಕ್ಕೆ ತೆರಳಿದ್ದ ಕೆಎಸ್​ಆರ್​ಟಿಸಿ ಬಸ್​ ಬ್ರೇಕ್​ ಫೇಲ್​​, ಚಾಲಕನ ಚಾಣಕ್ಷತನದಿಂದ ತಪ್ಪಿದ ಭಾರಿ ಅನಾಹುತ

TV9 Web
| Updated By: ವಿವೇಕ ಬಿರಾದಾರ

Updated on: Nov 29, 2022 | 7:38 PM

ಮಹಾಬಲೇಶ್ವರ ಬಳಿಯ ಸತಾರಾ ರಸ್ತೆಯ ಘಾಟ್‌ನಲ್ಲಿ ಶಾಲಾ‌ ಪ್ರವಾಸಕ್ಕೆಂದು ಹೋಗಿದ್ದ ಸರ್ಕಾರಿ ಬಸ್ ಬ್ರೇಕ್ ಫೇಲ್​​ ಆಗಿದೆ.

ಬೆಳಗಾವಿ: ಮಹಾರಾಷ್ಟ್ರದ ಮಹಾಬಲೇಶ್ವರ ಬಳಿ ತಪ್ಪಿದ ಭಾರಿ ಅನಾಹುತವೊಂದು ತಪ್ಪಿದೆ. ಮಹಾಬಲೇಶ್ವರ ಬಳಿಯ ಸತಾರಾ ರಸ್ತೆಯ ಘಾಟ್‌ನಲ್ಲಿ ಶಾಲಾ‌ ಪ್ರವಾಸಕ್ಕೆಂದು ಹೋಗಿದ್ದ ಸರ್ಕಾರಿ ಬಸ್ ಬ್ರೇಕ್ ಫೇಲ್​​ ಆಗಿದೆ. ಅದೃಷ್ಟವಶಾತ್ ಚಾಲಕನ ಚಾಣಕ್ಷತನದಿಂದ ಭಾರಿ ಅನಾಹುತ ತಪ್ಪಿದ್ದಾರೆ. ಬಸ್​ನಲ್ಲಿದ್ದ 50 ಶಾಲಾ ಮಕ್ಕಳು ಸೇರಿ ನಾಲ್ವರು ಶಿಕ್ಷಕರು ಪಾರಾಗಿದ್ದಾರೆ.

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಸ್.ಡಿ.ಹೈಸ್ಕೂಲ್‌ನ ಮಕ್ಕಳು, ಸಿಬ್ಬಂದಿ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರವಾಸಕ್ಕೆ ಹೋಗಿದ್ದ ವೇಳೆ ಘಾಟ್‌ನಲ್ಲಿ ಬ್ರೇಕ್ ಫೇಲ್ ಆಗಿ ಬಸ್‌ ಪ್ರಪಾತಕ್ಕೆ ಉರುಳುತ್ತಿತ್ತು. ಈ ವೇಳೆ ಚಾಲಕ ಚಾಣಕ್ಷತನದಿಂದ ಕಂದಕಕ್ಕೆ ಉರುಳ್ತಿದ್ದ ಬಸ್‌ನ್ನು ಗುಡ್ಡಕ್ಕೆ ತಾಗಿಸಿ ನಿಲ್ಲಿಸಿದ್ದಾನೆ. ಇದರಿಂದ ಭಾರಿ ಅನಾಹುತ ತಪ್ಪಿದೆ.