Thalapathy Vijay: ‘ವಾರಿಸು’ ಸಿನಿಮಾದಲ್ಲಿ ನಟಿಸಲು 150 ಕೋಟಿ ರೂಪಾಯಿ ಸಂಭಾವನೆ ಪಡೆದ ದಳಪತಿ ವಿಜಯ್​

Thalapathy Vijay Salary | Varisu Movie: ದಳಪತಿ ವಿಜಯ್​ ಅವರು ‘ವಾರಿಸು’ ಚಿತ್ರಕ್ಕೆ ಪಡೆದ ಸಂಭಾವನೆ ಮೊತ್ತ ಕೇಳಿ ಬಾಲಿವುಡ್​ ಮಂದಿಗೂ ಅಚ್ಚರಿ ಆಗಿದೆ. ಈ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

Thalapathy Vijay: ‘ವಾರಿಸು’ ಸಿನಿಮಾದಲ್ಲಿ ನಟಿಸಲು 150 ಕೋಟಿ ರೂಪಾಯಿ ಸಂಭಾವನೆ ಪಡೆದ ದಳಪತಿ ವಿಜಯ್​
ದಳಪತಿ ವಿಜಯ್
Follow us
TV9 Web
| Updated By: ಮದನ್​ ಕುಮಾರ್​

Updated on: Jan 11, 2023 | 7:30 AM

ದಕ್ಷಿಣ ಭಾರತದ ಖ್ಯಾತ ನಟ ದಳಪತಿ ವಿಜಯ್​ (Thalapathy Vijay) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಕೇವಲ ತಮಿಳುನಾಡಿಗೆ ಮಾತ್ರ ಅವರ ಜನಪ್ರಿಯತೆ ಸೀಮಿತವಾಗಿಲ್ಲ. ಅವರ ಚಿತ್ರಗಳು ಹಿಂದಿಗೂ ಡಬ್​ ಆಗಿ ಉತ್ತರ ಭಾರತದ ಜನರನ್ನು ರಂಜಿಸಿವೆ. ಈಗ ದಳಪತಿ ವಿಜಯ್​ ನಟನೆಯ ‘ವಾರಿಸು’ ಸಿನಿಮಾ (Varisu Movie) ಬಿಡುಗಡೆ ಆಗಿದೆ. ಇಂದು (ಜ.11) ಅದ್ದೂರಿಯಾಗಿ ರಿಲೀಸ್​ ಮಾಡಲಾಗಿದೆ. ಅಭಿಮಾನಿಗಳು ಭರ್ಜರಿಯಾಗಿ ಈ ಚಿತ್ರವನ್ನು ಸ್ವಾಗತಿಸಿದ್ದಾರೆ. ‘ವಾರಿಸು’ ಚಿತ್ರದಲ್ಲಿನ ನಟನೆಗೆ ದಳಪತಿ ವಿಜಯ್​ ಅವರು ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ (Thalapathy Vijay Remuneration) ಪಡೆದುಕೊಂಡಿದ್ದಾರೆ ಎಂದು ‘ಪಿಂಕ್​ ವಿಲ್ಲಾ’ ವರದಿ ಮಾಡಿದೆ. ಈ ವಿಷಯ ಕೇಳಿ ಬಾಲಿವುಡ್​ ಮಂದಿ ಕೂಡ ಬೆರಗಾಗಿದ್ದಾರೆ.

ದಳಪತಿ ವಿಜಯ್​ ಅವರ ಸಿನಿಮಾಗಳಿಗೆ ಬಂಡವಾಳ ಹೂಡಿದರೆ ಮಿನಿಮಮ್​​ ಲಾಭ ಗ್ಯಾರಂಟಿ ಎಂಬ ನಂಬಿಕೆ ನಿರ್ಮಾಪಕರ ವಲಯದಲ್ಲಿ ಇದೆ. ಹಾಗಾಗಿ ವಿಜಯ್​ ಅವರು ಕೇಳಿದಷ್ಟು ಸಂಭಾವನೆಯನ್ನು ನೀಡಲು ನಿರ್ಮಾಪಕರು ಮುಂದೆ ಬರುತ್ತಾರೆ. ‘ವಾರಿಸು’ ಚಿತ್ರದ ವಿಚಾರದಲ್ಲೂ ಹಾಗೆಯೇ ಆಗಿದೆ. ಈ ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ವಿಜಯ್​ ಅವರು 150 ಕೋಟಿ ರೂಪಾಯಿ ಜೇಬಿಗೆ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Thalapathy Vijay: ದಳಪತಿ ವಿಜಯ್​ ಕುಟುಂಬದಲ್ಲಿ ಕಲಹ? ‘ವಾರಿಸು’ ರಿಲೀಸ್​ ಸಮಯದಲ್ಲಿ ಹಬ್ಬಿದೆ ಡಿವೋರ್ಸ್​ ಸುದ್ದಿ

ಇದನ್ನೂ ಓದಿ
Image
Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​
Image
Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

2022ರಲ್ಲಿ ದಳಪತಿ ವಿಜಯ್​ ನಟನೆಯ ‘ಬೀಸ್ಟ್​’ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾ ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿತು. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಎದುರು ‘ಬೀಸ್ಟ್​’ ಬಿಡುಗಡೆ ಆಗಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲಿಲ್ಲ. ಸೂಕ್ತ ಸಮಯದಲ್ಲಿ ರಿಲೀಸ್​ ಮಾಡಿದ್ದರೆ ವಿಜಯ್​ ನಟನೆಯ ಆ ಸಿನಿಮಾ ಇನ್ನೂ ಹೆಚ್ಚು ಕಲೆಕ್ಷನ್​ ಮಾಡುತ್ತಿತ್ತು. ಇನ್ನು, ಕಿರುತೆರೆ ಪ್ರಸಾರ ಹಕ್ಕು, ಒಟಿಟಿ ರೈಟ್ಸ್​ ಇತ್ಯಾದಿಯಿಂದಲೂ ಆ ಚಿತ್ರಕ್ಕೆ ಬಹುಕೋಟಿ ರೂಪಾಯಿ ಆದಾಯ ಬಂದಿತ್ತು.

ಇದನ್ನೂ ಓದಿ: Thalapathy Vijay: ‘ವಾರಿಸು’ ಟ್ರೇಲರ್‌ಗೆ ಸಖತ್ ಪ್ರತಿಕ್ರಿಯೆ; ಗೆಲುವಿನ ನಿರೀಕ್ಷೆಯಲ್ಲಿ ದಳಪತಿ ವಿಜಯ್

ಈಗ ‘ವಾರಿಸು’ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಅವತರಣಿಕೆಯಲ್ಲಿ ಈ ಸಿನಿಮಾ ತೆರೆಕಾಣುತ್ತಿದೆ. ಜನವರಿ 11ರಂದು ತಮಿಳು, 13ರಂದು ಹಿಂದಿ ಹಾಗೂ ಜನವರಿ 14ರಂದು ತೆಲುಗು ವರ್ಷನ್​ ರಿಲೀಸ್​ ಆಗಲಿದೆ.

‘ವಾರಿಸು’ ಸಿನಿಮಾದಲ್ಲಿ ದಳಪತಿ ವಿಜಯ್​ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅವರಿಗೂ ಈ ಸಿನಿಮಾದ ಗೆಲುವು ಬಹಳ ಮುಖ್ಯ ಆಗಲಿದೆ. ಈ ಚಿತ್ರ ಗೆದ್ದರೆ ತಮಿಳು ಚಿತ್ರರಂಗದಲ್ಲಿ ಅವರು ಡಿಮ್ಯಾಂಡ್​ ಹೆಚ್ಚಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ