AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thalapathy Vijay: ದಳಪತಿ ವಿಜಯ್​ ಕುಟುಂಬದಲ್ಲಿ ಕಲಹ? ‘ವಾರಿಸು’ ರಿಲೀಸ್​ ಸಮಯದಲ್ಲಿ ಹಬ್ಬಿದೆ ಡಿವೋರ್ಸ್​ ಸುದ್ದಿ

Thalapathy Vijay Divorce: ಹಿಂದೂ ಮತ್ತು ಕ್ರಿಶ್ಚಿಯನ್​ ಸಂಪ್ರದಾಯದ ಪ್ರಕಾರ ದಳಪತಿ ವಿಜಯ್-ಸಂಗೀತಾ ಮದುವೆ ನೆರವೇರಿತ್ತು. ಈ ಜೋಡಿಗೆ ಒಬ್ಬರು ಮಕ್ಕಳು ಇದ್ದಾರೆ. ಡಿವೋರ್ಸ್​ ವದಂತಿ ಹಬ್ಬಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Thalapathy Vijay: ದಳಪತಿ ವಿಜಯ್​ ಕುಟುಂಬದಲ್ಲಿ ಕಲಹ? ‘ವಾರಿಸು’ ರಿಲೀಸ್​ ಸಮಯದಲ್ಲಿ ಹಬ್ಬಿದೆ ಡಿವೋರ್ಸ್​ ಸುದ್ದಿ
ದಳಪತಿ ವಿಜಯ್, ಸಂಗೀತಾ
TV9 Web
| Edited By: |

Updated on:Jan 06, 2023 | 2:36 PM

Share

ಖ್ಯಾತ ನಟ ದಳಪತಿ ವಿಜಯ್​ ಅವರು ‘ವಾರಿಸು’ ಸಿನಿಮಾದ (Varisu Movie) ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರದ ಗೆಲುವು ಅವರ ಪಾಲಿಗೆ ತುಂಬ ಮುಖ್ಯ ಆಗಲಿದೆ. ಜನವರಿ 12ರಂದು ಈ ಸಿನಿಮಾ ಅದ್ದೂರಿಯಾಗಿ ತೆರೆಕಾಣಲಿದೆ. ಅದರ ನಡುವೆ ಒಂದು ಬ್ಯಾಡ್​ ನ್ಯೂ​ಸ್​ ಹಬ್ಬಿದೆ. ದಳಪತಿ ವಿಜಯ್​ (Thalapathy Vijay) ಅವರ ಸಂಸಾರದಲ್ಲಿ ಕಲಹ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಪತ್ನಿ ಸಂಗೀತಾ ಜೊತೆಗಿನ 22 ವರ್ಷಗಳ ದಾಂಪತ್ಯ ಜೀವನಕ್ಕೆ ದಳಪತಿ ವಿಜಯ್​ ಅಂತ್ಯ ಹಾಡಲಿದ್ದಾರೆ ಎಂದೆಲ್ಲ ಸುದ್ದಿ ಹಬ್ಬಿದೆ. ಈ ರೀತಿ ಗುಸುಗುಸು ಹರಡಲು ಒಂದೆರಡು ಕಾರಣಗಳಿವೆ. ಡಿವೋರ್ಸ್​ ವದಂತಿ (Thalapathy Vijay Divorce) ಎಂದರೆ ಕೊಂಚ ಗಂಭೀರವಾದ ವಿಚಾರವೇ ಸರಿ. ಈ ಬಗ್ಗೆ ವಿಜಯ್ ಮತ್ತು ಸಂಗೀತಾ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ.

ದಳಪತಿ ವಿಜಯ್​ ಡಿವೋರ್ಸ್​ ವದಂತಿಗೆ ಕಾರಣ ಏನು?

ವಿಜಯ್​ ಅವರು ತಮ್ಮ ಪತ್ನಿ ಸಂಗೀತಾ ಅವರಿಂದ ದೂರ ಇದ್ದಾರಾ ಎಂಬಂತಹ ಅನುಮಾನ ಹಲವರಿಗೆ ಮೂಡಿದೆ. ಅದಕ್ಕೆ ಕಾರಣ ಇಷ್ಟೇ.. ಇತ್ತೀಚಿನ ದಿನಗಳಲ್ಲಿ ಈ ಜೋಡಿ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ನಿರ್ದೇಶಕ ಅಟ್ಲಿ ಅವರ ಪತ್ನಿಯ ಸೀಮಂತ ಕಾರ್ಯಕ್ರಮದಲ್ಲಿ ವಿಜಯ್​ ಪತ್ನಿ ಸಂಗೀತಾ ಕಾಣಿಸಿಕೊಳ್ಳಲಿಲ್ಲ. ಅಲ್ಲದೇ ‘ವಾರಿಸು’ ಚಿತ್ರದ ಟ್ರೇಲರ್​ ಬಿಡುಗಡೆ ಸಂದರ್ಭದಲ್ಲೂ ಅವರು ಗೈರಾಗಿದ್ದರು. ಹಾಗಾಗಿ ಡಿವೋರ್ಸ್​ ವದಂತಿ ಹಬ್ಬಿದೆ.

ಇದನ್ನೂ ಓದಿ: Thalapathy Vijay: ‘ವಾರಿಸು’ ಟ್ರೇಲರ್‌ಗೆ ಸಖತ್ ಪ್ರತಿಕ್ರಿಯೆ; ಗೆಲುವಿನ ನಿರೀಕ್ಷೆಯಲ್ಲಿ ದಳಪತಿ ವಿಜಯ್

ಇದನ್ನೂ ಓದಿ
Image
Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​
Image
Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

ಇಷ್ಟೆಲ್ಲ ಅಂತೆ-ಕಂತೆಗಳು ಹಬ್ಬಿದ್ದರೂ ಕೂಡ ಅಸಲಿ ವಿಷಯ ಬೇರೆಯೇ ಇದೆ ಎನ್ನುತ್ತಿವೆ ಕೆಲವು ಮೂಲಗಳು. ಪ್ರಸ್ತುತ ಸಂಗೀತಾ ಅವರು ಮಕ್ಕಳ ಜೊತೆ ಫಾರಿನ್​ ಟ್ರಿಪ್​ ತೆರಳಿದ್ದಾರೆ. ಆ ಕಾರಣದಿಂದ ಅವರು ಭಾರತದಲ್ಲಿ ಕೆಲವು ಸಮಾರಂಭಗಳಿಗೆ ಹಾಜರಿ ಹಾಕಲು ಸಾಧ್ಯವಾಗಿಲ್ಲ. ಅದನ್ನೇ ಕಾರಣವಾಗಿ ಇಟ್ಟುಕೊಂಡು ಕೆಲವರು ಗಾಸಿಪ್​ ಹಬ್ಬಿಸಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ.

ಇದನ್ನೂ ಓದಿ: Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​

ಸಂಗೀತಾ ಮತ್ತು ದಳಪತಿ ವಿಜಯ್​ ಮದುವೆ ಆಗಿದ್ದು 1999ರ ಆಗಸ್ಟ್​ 25ರಂದು. ಇವರದ್ದು ಲವ್​ ಮ್ಯಾರೇಜ್​. ವಿಜಯ್​ ಅವರ ನಟನೆಗೆ ಸಂಗೀತಾ ಫ್ಯಾನ್​ ಆಗಿದ್ದರು. ಸಿನಿಮಾವೊಂದರ ಶೂಟಿಂಗ್​ ವೇಳೆ ವಿಜಯ್ ಅವರನ್ನು ಸಂಗೀತಾ ಭೇಟಿಯಾಗಿ ಮನೆಗೆ ಬರುವಂತೆ ಆಹ್ವಾನ ನೀಡಿದ್ದರು. ಆ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಪ್ರೀತಿ ಹುಟ್ಟಿತು. ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ಮದುವೆ ನೆರವೇರಿತ್ತು.

ಹಿಂದೂ ಮತ್ತು ಕ್ರಿಶ್ಚಿಯನ್​ ಸಂಪ್ರದಾಯದ ಪ್ರಕಾರ ವಿಜಯ್​ ಮತ್ತು ಸಂಗೀತಾ ಮದುವೆ ನೆರವೇರಿತ್ತು. ಈ ಜೋಡಿಗೆ ಒಬ್ಬರು ಮಕ್ಕಳು ಇದ್ದಾರೆ. ಡಿವೋರ್ಸ್​ ವದಂತಿ ಹಬ್ಬಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:36 pm, Fri, 6 January 23

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ