Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ

Katrina Kaif Viral Video: ಶಾಲೆಯ ಕಾರ್ಯಕ್ರಮಕ್ಕೆ ಬಂದಿರುವ ಕತ್ರಿನಾ ಕೈಫ್ ಅವರು ಮಕ್ಕಳ ಜೊತೆ ಬೆರೆತಿದ್ದಾರೆ. ಅಲ್ಲಿನ ಸಿಬ್ಬಂದಿಯ ಜೊತೆಯೂ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ
ಕತ್ರಿನಾ ಕೈಫ್
Follow us
TV9 Web
| Updated By: ಮದನ್​ ಕುಮಾರ್​

Updated on:Sep 26, 2022 | 2:10 PM

ನಟಿ ಕತ್ರಿನಾ ಕೈಫ್​ (Katrina Kaif) ಅವರು ಬಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ಜೊತೆಗೆ ಕೆಲವು ಸಾಮಾಜಿಕ ಕೆಲಸಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ತಮಿಳುನಾಡಿನ ಒಂದು ವಿಶೇಷ ಶಾಲೆಗೆ ಅವರು ಈಗ ಭೇಟಿ ನೀಡಿದ್ದಾರೆ. ಅಲ್ಲಿನ ಮಕ್ಕಳ ಜೊತೆಗೆ ಮನಸಾರೆ ಕುಣಿದು, ಕುಪ್ಪಳಿಸಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ‘ದಳಪತಿ’ ವಿಜಯ್​ (Thalapathy Vijay) ನಟನೆಯ ‘ಬೀಸ್ಟ್​’ (Beast) ಚಿತ್ರದ ‘ಅರೇಬಿಕ್​ ಕುತು..’ ಹಾಡಿಗೆ ಮಕ್ಕಳ ಜತೆ ಸೇರಿಕೊಂಡು ಕತ್ರಿನಾ ಕೈಫ್ ಡ್ಯಾನ್ಸ್​ ಮಾಡಿದ್ದಾರೆ. ಅಷ್ಟಕ್ಕೂ ಈ ಶಾಲೆಯ ಜೊತೆಗೆ ಕತ್ರಿನಾಗೆ ಇರುವ ಸಂಬಂಧ ಏನು? ಅಲ್ಲಿನ ಮಕ್ಕಳಿಗೆ ಅವರು ಇಷ್ಟೊಂದು ಬೆಂಬಲ ನೀಡುತ್ತಿರುವುದು ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ಕತ್ರಿನಾ ಕೈಫ್​ ಅವರು ಭಾರತೀಯ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಪ್ರತಿ ಸಿನಿಮಾಗೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅವರ ತಾಯಿ ಸುಸಾನೆ ಅವರು ತಮಿಳುನಾಡಿನಲ್ಲಿ ‘ಮೌಂಟೇನ್​ ವೀವ್​ ಸ್ಕೂಲ್​’ ನಡೆಸುತ್ತಿದ್ದಾರೆ. ಈ ಶಾಲೆಯಲ್ಲಿ ಓದುತ್ತಿರುವುದು ಬಡ ಮಕ್ಕಳು.

ಇದನ್ನೂ ಓದಿ
Image
Katrina Kaif: ತೆರೆ ಹಿಂದಿನ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್​; ವಿಜಯ್​ ಸೇತುಪತಿ ಜತೆ ಕೆಲಸ ಕೆಲಸ ಕೆಲಸ
Image
Katrina Kaif: ‘ಫಸ್ಟ್​ ನೈಟ್​ ಆಗಬೇಕಂತಲೇ ಏನಿಲ್ಲ, ಫಸ್ಟ್​ ಡೇ ಕೂಡ ಆಗಬಹುದು’; ಕತ್ರಿನಾ ಕೈಫ್​ ಬೋಲ್ಡ್​ ಮಾತು 
Image
ಕತ್ರಿನಾ ಜತೆ ಮದುವೆ ಆದ ನಂತರ ವಿಕ್ಕಿ ಕೌಶಲ್​ಗೆ ಅನಿಸಿದ್ದೇನು? ಅಚ್ಚರಿಯ ವಿಚಾರ ಹೇಳಿಕೊಂಡ ನಟ
Image
ಕತ್ರಿನಾ ಕೈಫ್ ತಾಯಿಗೆ 70ನೇ ವರ್ಷದ ಹುಟ್ಟುಹಬ್ಬ; ವಿಶೇಷವಾಗಿ ಬರ್ತ್​ಡೇ ಆಚರಿಸಿದ ನಟಿ

ಹಲವಾರು ಬಡ ಮಕ್ಕಳಿಗೆ ಇಂಗ್ಲಿಷ್​ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಈ ಸಮಾಜಮುಖಿ ಕಾರ್ಯದಲ್ಲಿ ಕತ್ರಿನಾ ಕೈಫ್​ ಕೂಡ ಕೈ ಜೋಡಿಸಿದ್ದಾರೆ. ಶಾಲೆಯ ಕಾರ್ಯಕ್ರಮಕ್ಕೆ ಬಂದಿರುವ ಅವರು ಮಕ್ಕಳ ಜೊತೆ ಬೆರೆತಿದ್ದಾರೆ. ಅಲ್ಲಿನ ಸಿಬ್ಬಂದಿಯ ಜೊತೆಯೂ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಅವರ ಈ ಸರಳ ಗುಣಕ್ಕೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ.

ವಿಕ್ಕಿ ಕೌಶಲ್​ ಜೊತೆ ಮದುವೆ ಆದ ಬಳಿಕವೂ ಕತ್ರಿನಾ ಕೈಫ್ ಅವರು ಅನೇಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿ​ದ್ದಾರೆ. ‘ಮೇರಿ ಕ್ರಿಸ್​ಮಸ್​’, ‘ಫೋನ್​ ಭೂತ್​’, ‘ಟೈಗರ್​ 3’ ಸೇರಿದಂತೆ ಹಲವು ಚಿತ್ರಗಳು ಅವರ ಕೈಯಲ್ಲಿವೆ. ಈ ವರ್ಷ ನವೆಂಬರ್​ 4ರಂದು ‘ಫೋನ್​ ಭೂತ್​’ ಸಿನಿಮಾ ರಿಲೀಸ್​ ಆಗಲಿದೆ. ಸಲ್ಮಾನ್​ ಖಾನ್​ ಜೊತೆಗೆ ಕತ್ರಿನಾ ನಟಿಸುತ್ತಿರುವ ‘ಟೈಗರ್​ 3’ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. 2023ರ ಏಪ್ರಿಲ್​ 23ರಂದು ಆ ಚಿತ್ರ ಬಿಡುಗಡೆ ಆಗಲಿದೆ.

‘ಮೇರಿ ಕ್ರಿಸ್​ಮಸ್​’ ಚಿತ್ರಕ್ಕೆ ಶ್ರೀರಾಮ್​ ರಾಘವನ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಜೊತೆ ವಿಜಯ್​ ಸೇತುಪತಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಶೂಟಿಂಗ್​ ಸೆಟ್​ನ ಕೆಲವು ಫೋಟೋಗಳನ್ನು ಕತ್ರಿನಾ ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಅವರಿಗೆ ತುಂಬ ಖುಷಿ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:09 pm, Mon, 26 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ