ಕತ್ರಿನಾ ಜತೆ ಮದುವೆ ಆದ ನಂತರ ವಿಕ್ಕಿ ಕೌಶಲ್​ಗೆ ಅನಿಸಿದ್ದೇನು? ಅಚ್ಚರಿಯ ವಿಚಾರ ಹೇಳಿಕೊಂಡ ನಟ

ಕತ್ರಿನಾ ಜತೆ ಮದುವೆ ಆದ ನಂತರ ವಿಕ್ಕಿ ಕೌಶಲ್​ಗೆ ಅನಿಸಿದ್ದೇನು? ಅಚ್ಚರಿಯ ವಿಚಾರ ಹೇಳಿಕೊಂಡ ನಟ
ವಿಕ್ಕಿ-ಕತ್ರಿನಾ

ಒಟ್ಟಿಗೆ ನಟಿಸಿದ ನಟ-ನಟಿಯರ ಮಧ್ಯೆ ಪ್ರೀತಿ ಮೊಳೆಯುತ್ತದೆ. ಕ್ಯಾಮರಾ ಎದುರು ಆ್ಯಕ್ಟ್​ ಮಾಡುತ್ತಲೇ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ, ಕತ್ರಿನಾ-ವಿಕ್ಕಿ ಇಬ್ಬರೂ ಒಟ್ಟಾಗಿ ನಟಿಸಿಲ್ಲ. ಹಾಗಿದ್ದರೂ ಇಬ್ಬರ ನಡುವೆ ಪ್ರೀತಿ ಮೊಳೆಯಿತು.

TV9kannada Web Team

| Edited By: Rajesh Duggumane

Jun 23, 2022 | 3:40 PM

ವಿಕ್ಕಿ ಕೌಶಲ್​  (Vicky Kaushal) ಹಾಗೂ ಕತ್ರಿನಾ ಕೈಫ್ (Katrina Kaif) ಮದುವೆ ಆಗಿ ಆರು ತಿಂಗಳ ಮೇಲಾಗಿದೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಬ್ರೇಕ್​ ತೆಗೆದುಕೊಂಡು ವಿದೇಶ ಸುತ್ತಿ ಬರುತ್ತಾರೆ. ಕತ್ರಿನಾಗಿಂತ ವಿಕ್ಕಿ ವಯಸ್ಸಿನಲ್ಲಿ ಚಿಕ್ಕವರು. ಆದರೆ ಇವರ ಪ್ರೀತಿಗೆ ವಯಸ್ಸು ಅಡ್ಡಿ ಆಗಲಿಲ್ಲ. ಪತಿ-ಪತ್ನಿಯಾಗಿ ಇವರು ಅನೇಕರಿಗೆ ಮಾದರಿ. ಕತ್ರಿನಾ ಜತೆ ಮದುವೆ ಆದ ನಂತರದಲ್ಲಿ ಅನಿಸಿದ್ದೇನು ಎನ್ನುವುದನ್ನು ವಿಕ್ಕಿ ಈಗ ಹೇಳಿಕೊಂಡಿದ್ದಾರೆ.

ಒಟ್ಟಿಗೆ ನಟಿಸಿದ ನಟ-ನಟಿಯರ ಮಧ್ಯೆ ಪ್ರೀತಿ ಮೊಳೆಯುತ್ತದೆ. ಕ್ಯಾಮರಾ ಎದುರು ಆ್ಯಕ್ಟ್​ ಮಾಡುತ್ತಲೇ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ, ಕತ್ರಿನಾ-ವಿಕ್ಕಿ ಇಬ್ಬರೂ ಒಟ್ಟಾಗಿ ನಟಿಸಿಲ್ಲ. ಹಾಗಿದ್ದರೂ ಇಬ್ಬರ ನಡುವೆ ಪ್ರೀತಿ ಮೊಳೆಯಿತು. ಅಂತಿಮವಾಗಿ ಇಬ್ಬರೂ ಮದುವೆ ಆದರು. ಕತ್ರಿನಾ ಅವರನ್ನು ಮದುವೆ ಆದ ನಂತರದಲ್ಲಿ ಜೀವನದಲ್ಲಿ ಸೆಟಲ್ ಆದೆ ಎನ್ನುವ ಭಾವನೆ ವಿಕ್ಕಿಯಲ್ಲಿ ಮೂಡಿದೆ. ಈ ಬಗ್ಗೆ ಅವರು ಈಗ ಮಾಹಿತಿ ಹಂಚಿಕೊಂಡಿದ್ದಾರೆ.

‘ಎಲ್ಲವೂ ಚೆನ್ನಾಗಿ ಸಾಗುತ್ತಿದೆ. ನನಗೆ ಸೆಟಲ್ ಆದೆ ಎನ್ನುವ ಭಾವನೆ ಮೂಡಿದೆ. ವೈಯಕ್ತಿಕ ಜೀವನ ಇರಲಿ, ವೃತ್ತಿ ಜೀವನ ಇರಲಿ, ದೇವರು ನನ್ನ ಮೇಲೆ ದಯೆ ತೋರಿದ್ದಾನೆ’ ಎಂದು ಸಂತಸ ಹಂಚಿಕೊಂಡಿದ್ದಾರೆ ವಿಕ್ಕಿ ಕೌಶಲ್.

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಚಾರ ಅನೇಕರಿಗೆ ಗೊತ್ತಿತ್ತು. ಆದರೆ, ಇವರು ಇಷ್ಟು ಬೇಗ ಮದುವೆ ಆಗುವ ನಿರ್ಧಾರಕ್ಕೆ ಬರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಈ ಬಗ್ಗೆ ಅವರ ಫ್ರೆಂಡ್ಸ್ ರಿಯಾಕ್ಷನ್ ಹೇಗಿತ್ತು ಎಂಬುದನ್ನು ವಿಕ್ಕಿ ಕೌಶಲ್ ಅವರು ವಿವರಿಸಿದ್ದಾರೆ. ‘ನನ್ನ ಆಪ್ತರು ಮದುವೆಯಲ್ಲಿ ಹಾಜರಿ ಹಾಕಿದ್ದರು. ಅವರು ಕತ್ರಿನಾ ಅವರು ಈ ಮೊದಲೇ ನೋಡಿದ್ದರು. ಹೀಗಾಗಿ, ಅವರ ರಿಯಾಕ್ಷನ್ ಕೂಲ್ ಆಗಿಯೇ ಇತ್ತು. ನಾನು ಮತ್ತು ಕತ್ರಿನಾ ಒಟ್ಟಿಗೆ ಕಳೆಯುವ ಸಮಯ ನಿಜಕ್ಕೂ ಖುಷಿ ನೀಡುತ್ತದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಕರಣ್ ಜೋಹರ್ ಪಾರ್ಟಿ ಎಫೆಕ್ಟ್​; ಶಾರುಖ್​, ಕತ್ರಿನಾಗೆ ಕೊರೊನಾ ಪಾಸಿಟಿವ್

ವಿಕ್ಕಿ ಹಾಗೂ ಕತ್ರಿನಾ ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್ ಹೋಟೆಲ್​ನಲ್ಲಿ ಡಿಸೆಂಬರ್ 2021ರಲ್ಲಿ ಮದುವೆ ಆದರು. ಈ ಮದುವೆಗೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಮದುವೆ ಆದ ಕೆಲವೇ ತಿಂಗಳಲ್ಲಿ ಇವರು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದನ್ನು ಇಬ್ಬರೂ ಅಲ್ಲಗಳೆದಿದ್ದರು. ಕತ್ರಿನಾ ಹಾಗೂ ವಿಕ್ಕಿ ಇಬ್ಬರೂ ಒಟ್ಟಾಗಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada