Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್ಆರ್ಆರ್ನ ನಾಟು ನಾಟು ಹಾಡು
ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಾರಥ್ಯದಲ್ಲಿ ಬಂದ ಆರ್ ಆರ್ ಆರ್ ಸಿನಿಮಾದ ಹವಾ ಇನ್ನೂ ಕಡಿಮೆ ಆಗಿಲ್ಲ. ಇದೀಗ ನಾಟು ನಾಟು ಹಾಡು ಗೋಲ್ಡನ್ ಗ್ಲೋಬ್ಸ್ 2023ನಲ್ಲಿ ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡಿದ್ದು, ಮತ್ತೆ ಎಲ್ಲೆಡೆ ಆರ್ಆರ್ಆರ್ ಸಿನಿಮಾ ಮಾತು ಶುರುವಾಗಿದೆ.
ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಾರಥ್ಯದಲ್ಲಿ ಬಂದ ಆರ್ ಆರ್ ಆರ್ ಸಿನಿಮಾದ ಹವಾ ಇನ್ನೂ ಕಡಿಮೆ ಆಗಿಲ್ಲ. ಇದೀಗ ಈ ಚಿತ್ರದ ‘ನಾಟು ನಾಟು..’ ಹಾಡು ಗೋಲ್ಡನ್ ಗ್ಲೋಬ್ಸ್ 2023ನಲ್ಲಿ ಅತ್ಯುತ್ತಮ ಒರಿಜಿನಲ್ ಸಾಂಗ್(ಮೂಲ ಗೀತೆ) ಪ್ರಶಸ್ತಿ ಬಾಚಿಕೊಂಡಿದ್ದು, ಮತ್ತೆ ಎಲ್ಲೆಡೆ ‘ಆರ್ಆರ್ಆರ್’ ಸಿನಿಮಾದ ಕುರಿತು ಮಾತು ಶುರುವಾಗಿದೆ. 80ನೇ ಗೋಲ್ಡನ್ ಗ್ಲೋಬ್ಸ್ 2023 ಪ್ರಶಸ್ತಿ ಕಾರ್ಯಕ್ರಮವನ್ನು ಇಂದು (ಜನವರಿ 11 ) ಲಾಸ್ ಏಂಜಲೀಯಸ್ನಲ್ಲಿ ನಡೆದಿದೆ.
ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಕೋಟಿ ಗಳಿಕೆ ಮಾಡಿದೆ. ‘ಬಾಹುಬಲಿ’ ಬಳಿಕ ರಾಜಮೌಳಿ ಮತ್ತೊಮ್ಮೆ ‘ಆರ್ಆರ್ಆರ್’ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ‘ಆರ್ಆರ್ಆರ್’ ಸಿನಿಮಾಗೆ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಸಿಕ್ಕಿತ್ತು.
‘ಇಂಗ್ಲಿಷ್ ಹೊರತಾದ ಅತ್ಯುತ್ತಮ ಸಿನಿಮಾ’ ಹಾಗೂ ‘ಅತ್ಯುತ್ತಮ ಹಾಡು’ (ನಾಟು ನಾಟು) ವಿಭಾಗದಲ್ಲಿ ಈ ಚಿತ್ರ ಬೇರೆ ಬೇರೆ ದೇಶಗಳ ಸಿನಿಮಾ ಜೊತೆಗೆ ಪೈಪೋಟಿ ನೀಡಿತ್ತು. ಇದೀಗ ಪ್ರಶಸ್ತಿಯನ್ನು ಗೆದ್ದಿರುವುದು ರಾಜಮೌಳಿ ಹಾಗೂ ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಅಭಿಮಾನಿಗಳಿಗೆ ಸಂತಸ ತಂದಿದೆ.
ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಾಗಿ ಎರಡು ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿತ್ತು. ಇಂಗ್ಲಿಷ್ ಹೊರತಾದ ಸಿನಿಮಾಗಳಿಗೆ ನೀಡುವ ವಿಭಾಗದಲ್ಲಿ ಈ ಸಿನಿಮಾ ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ಗೀತೆ ವಿಭಾಗದಲ್ಲಿ ಸಿನಿಮಾ ನಾಮಿನೇಟ್ ಆಗಿತ್ತು.
ಇಂಗ್ಲಿಷ್ ಹೊರತಾದ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಹಾಗೂ ಹಾಡಿನ ವಿಭಾಗದಲ್ಲಿ ಈ ಸಿನಿಮಾದ ನಾಟು ನಾಟು ಹಾಡು ಪ್ರಬಲ ಸ್ಪರ್ಧೆಯನ್ನು ನೀಡಿತ್ತು.
ದಕ್ಷಿಣ ಕೊರಿಯಾ, ಅರ್ಜೆಂಟೀನಾ, ಜರ್ಮನಿ, ಬೆಲ್ಜಿಯಂ ಸಿನಿಮಾಗಳ ಜೊತೆ ಅದು ಪೈಪೋಟಿ ಎದುರಿಸಿತ್ತು. ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ನ ಆರ್.ಆರ್.ಆರ್ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಕಂಡಿತ್ತು. ಅಷ್ಟೂ ಕಡೆ ಉತ್ತಮ ಪ್ರದರ್ಶನವನ್ನೇ ಕಂಡಿತ್ತು.
ಮನರಂಜನೆಗೆ ಸಂಬಂಧಿಸಿದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 am, Wed, 11 January 23