ರಾಜಾಮೌಳಿಯ ಆರ್ ಆರ್ ಆರ್ ಚಿತ್ರ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದೆ!

ಬೆಂಗಳೂರಲ್ಲಿ ಆರ್ ಆರ್ ಆರ್ ಚಿತ್ರದ ರಿಲೀಸ್ ಗೆ ಸಂಬಂಧಿಸಿದಂತೆ ಗುರುವಾರ ಗಲಾಟೆ ಏರ್ಪಟ್ಟಿತ್ತು. ಆದರೆ, ಥೇಟರ್ ಗಳ ಮಾಲೀಕರು ಶಿವರಾಜಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಮುಖರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆ ಹರಿಸಿಕೊಂಡಿದ್ದಾರೆ.

TV9kannada Web Team

| Edited By: Arun Belly

Mar 25, 2022 | 6:29 PM

ಬೆಂಗಳೂರು: ಎಸ್ ಎಸ್ ರಾಜಾಮೌಳಿ (SS Rajamouli) ಅವರ ನಿರ್ದೇಶನದ ಚಿತ್ರಗಳೇ ಹಾಗೇ ಮಾರಾಯ್ರೇ, ಜನರಲ್ಲಿ ಭಯಂಕರ ಕ್ರೇಜ್ ಮತ್ತು ಅಪಾರ ನಿರೀಕ್ಷೆ ಹುಟ್ಟಿಸುತ್ತವೆ ಹಾಗೂ ಅವರ ನಿರೀಕ್ಷೆ ಎಂದೂ ಹುಸಿ ಹೋಗುವುದಿಲ್ಲ. ಶುಕ್ರವಾರ ದೇಶದಾದ್ಯಂತ ತೆರೆಕಂಡಿರುವ ಅವರ ಹೊಸ ಚಿತ್ರ ಆರ್ ಆರ್ ಆರ್ (RRR) ಭರ್ಜರಿ ಯಶ ಕಂಡಿದೆ ಅಂತ ಹೇಳಲಾಗುತ್ತಿದೆ. ಚಿತ್ರಕ್ಕೆ ಎಲ್ಲೆಡೆಯಿಂದ ಬರೀ ಪಾಸಿಟಿವ್ ರೆಸ್ಪಾನ್ಸ್ (positive response) ಬರುತ್ತಿದೆ. ರಾಜಾಮೌಳಿ ಅವರ ಹಿಂದಿನ ಚಿತ್ರಗಳಂತೆ ಆರ್ ಅರ್ ಆರ್ ಸಹ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯಲಿದೆ. ಬೆಂಗಳೂರಲ್ಲಿ ಸಿನಿಮಾ ನೋಡಿ ಥೇಟರ್ ಗಳಿಂದ ಹೊರ ಬಂದವರು ಮತ್ತು ನೋಡಲು ಹೋದವರು ಸಹ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಈ ವಿಡಿಯೋ ನೋಡಿ. ಜನ ಖುಷಿಯಿಂದ ಮೈಮೇಲೆ ಪರಿವೆ ಇಲ್ಲದಂತೆ ಕುಣಿಯುತ್ತಿದ್ದಾರೆ. ಒಬ್ಬ ಯುವತಿಯ ನಿರ್ಭಿಡೆ ಕುಣಿತ ಗಮನ ಸೆಳೆಯುತ್ತದೆ.

ಬೆಂಗಳೂರಲ್ಲಿ ಆರ್ ಆರ್ ಆರ್ ಚಿತ್ರದ ರಿಲೀಸ್ ಗೆ ಸಂಬಂಧಿಸಿದಂತೆ ಗುರುವಾರ ಗಲಾಟೆ ಏರ್ಪಟ್ಟಿತ್ತು. ಆದರೆ, ಥೇಟರ್ ಗಳ ಮಾಲೀಕರು ಶಿವರಾಜಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಮುಖರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆ ಹರಿಸಿಕೊಂಡಿದ್ದಾರೆ.

ಹಾಗೆ ನೋಡಿದರೆ, ರಾಜಾಮೌಳಿ ಮತ್ತು ಈ ಚಿತ್ರದ ಇಬ್ಬರು ನಾಯಕ ನಟರು ಜ್ಯೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ಅವರು ಶಿವಣ್ಣನ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ನಿಮಗೆ ಮತ್ತೊಂದು ವಿಷಯ ಗೊತ್ತಿರಬಹುದು. ರಾಜಾಮೌಳಿ ಅವರು ರಾಯಚೂರಿನವರು. ಅದರೆ ಬೆಳೆದಿದ್ದು ಮಾತ್ರ ಆಂಧ್ರಪ್ರದೇಶದಲ್ಲಿ. ಅವರು ಕನ್ನಡ ಮಾತಾಡುತ್ತಾರೆ ಮಾರಾಯ್ರೇ.

ಬೆಂಗಳೂರನಲ್ಲಂತೂ ಚಿತ್ರ ಧೂಳೆಬ್ಬಿಸುತ್ತಿದ್ದು ಶತದಿನೋತ್ಸವ ಕಾಣೋದು ನಿಶ್ಚಿತ ಅನಿಸುತ್ತಿದೆ.

ಇದನ್ನೂ ಓದಿ:  ‘ಪುನೀತ್​ ರೀತಿ ನಾವು ಸ್ಟಂಟ್​ ಮಾಡೋದಿಲ್ಲ’; ನಿಜ ಒಪ್ಪಿಕೊಂಡಿದ್ದ ಅಲ್ಲು ಅರ್ಜುನ್​, ಜ್ಯೂ. ಎನ್​ಟಿಆರ್​

Follow us on

Click on your DTH Provider to Add TV9 Kannada