ಮಗಳಿಗೆ ಎಸ್ ಸಿ ಸರ್ಟಿಫಿಕೇಟ್ ಪಡೆದುಕೊಂಡಿರುವ ರೇಣುಕಾಚಾರ್ಯ ವಿರುದ್ಧ ಕ್ರಮ ಜರುಗಲೇಬೇಕು: ಸಿದ್ದರಾಮಯ್ಯ
ಅದಕ್ಕೂ ತನಗೂ ಸಂಬಂಧವಿಲ್ಲ ಅಂತ ಹೇಳೋದು ಸರಕಾರದ ಬೇಜವಾಬ್ದಾರಿತನದ ಮಾತು. ಸರಕಾರದ ಭಾಗವಾಗಿರುವವರು ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದರೆ ಅಂಥವರ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳದೆ ಮತ್ಯಾರು ತೆಗೆದುಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಕೇಳಿದರು.
ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ದೊಡ್ಡ ವಿವಾದಕ್ಕೆ ಸಿಕ್ಕಿದ್ದಾರೆ. ಹೊನ್ನಾಳಿ ಶಾಸಕ ತಮ್ಮ ಮಗಳಿಗೆ ಪರಿಶಿಷ್ಟ ಜಾತಿಯವರೆಂದು ಪ್ರಮಾಣ ಪತ್ರ (SC certificate) ಪಡೆದಿರುವ ಸಂಗತಿ ಎರಡು ದಿನಗಳ ಹಿಂದೆ ಸದನದಲ್ಲಿ ಚರ್ಚೆಯಾಗಿತ್ತು. ಮುಖ್ಯಮಂತ್ರಿಗಳ ಕಾರ್ಯದರ್ಶಿ (political secretary) ಆಗಿರುವ ಮತ್ತು ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆ ಮಾಡಿದರೆ ಸಚಿವನಾಗುವ ನಿರೀಕ್ಷೆ ಇಟ್ಟುಕೊಂಡಿರುವ ರೇಣುಕಾಚಾರ್ಯರು ಸದನದಲ್ಲಿ ತಮ್ಮ ಸಮರ್ಥನೆಯಲ್ಲಿ ಏನೇನೋ ಹೇಳಿದರು. ಎಸ್ ಸಿ ಸರ್ಟಿಫಿಕೇಟ್ ಮಾಡಿಸಿದ್ದು ತಾನಲ್ಲ, ತಮ್ಮ ಕುಟುಂಬದಿಂದ ಈಗಾಗಲೇ ದೂರವಾಗಿರುವ ಸಹೋದರ ಅದನ್ನು ಮಾಡಿಸಿದ್ದು, ವಿಷಯ ತನ್ನ ಗಮನಕ್ಕೆ ಬಂದ ಕೂಡಲೇ ಪ್ರಮಾಣ ಪತ್ರವನ್ನು ಹರಿದು ಬಿಸಾಕಿದೆ ಅಂತ ಅವರು ಹೇಳಿದ್ದರು.
ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಶುಕ್ರವಾರ ಮೈಸೂರಲ್ಲಿದ್ದರು ಮತ್ತು ಮಾಧ್ಯಮದವರ ಎದುರು ಸದರಿ ಸಂಗತಿಯನ್ನು ಪ್ರಸ್ತಾಪಿಸಿದರು. ರೇಣುಕಾಚಾರ್ಯ ಅವರು ಮಾಜಿ ಸಚಿವ, ಶಾಸಕ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದುಕೊಂಡು ತಮ್ಮ ಮಗಳಿಗೆ ಪರಿಶಿಷ್ಟ ಜಾತಿಯ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಜಾತಿಯಿಂದ ಅವರು ಜಂಗಮರು, ಅಂದರೆ ಪೂಜ್ಯರು, ಜನ ಜಂಗಮ ಜಾತಿ ಜನರ ಪಾದಮುಟ್ಟಿ ನಮಸ್ಕಾರ ಮಾಡುತ್ತಾರೆ. ಸರ್ಕಾರ ಅವರನ್ನು ಕೂಡಲೇ ಎಲ್ಲ ಸ್ಥಾನಗಳಿಂದ ವಜಾ ಮಾಡಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಅದಕ್ಕೂ ತನಗೂ ಸಂಬಂಧವಿಲ್ಲ ಅಂತ ಹೇಳೋದು ಸರಕಾರದ ಬೇಜವಾಬ್ದಾರಿತನದ ಮಾತು. ಸರಕಾರದ ಭಾಗವಾಗಿರುವವರು ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದರೆ ಅಂಥವರ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳದೆ ಮತ್ಯಾರು ತೆಗೆದುಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಕೇಳಿದರು.
ಇದನ್ನೂ ಓದಿ:ಎಂಪಿ ರೇಣುಕಾಚಾರ್ಯ ಪುತ್ರಿಯ ಜಾತಿ ಪ್ರಮಾಣ ಪತ್ರದ ಬಗ್ಗೆ ವಿಧಾನಸಭೆಯಲ್ಲಿ ಜಟಾಪಟಿ; ಏನಿದು ವಿಚಾರ?