ಸಿದ್ದರಾಮನ ಹುಂಡಿಯಲ್ಲಿ ಸಿದ್ದರಾಮೇಶ್ವರ ಜಾತ್ರೆಗೆ ಬಂದವರು ಸಿದ್ದರಾಮಯ್ಯನವರ ಜೊತೆ ಕಂಡರು!

ಸಿದ್ದರಾಮಯ್ಯನವರೇ ಹೇಳುವ ಹಾಗೆ, ಊರಲ್ಲಿ ನಡೆಯುವ ಸಿದ್ದರಾಮೇಶ್ವರ ಜಾತ್ರಾ ಮಹೋತ್ವವದಲ್ಲಿ ಭಾಗವಹಿಸುವುದನ್ನು ಅವರು ತಪ್ಪಿಸುವುದಿಲ್ಲ. ಹಾಗೆ ನೋಡಿದರೆ ಊರ ಜಾತ್ರೆಗಳು ಎಲ್ಲರ ಬದುಕಿನಲ್ಲಿ ವಿಶೇಷ ಮಹತ್ವ ಪಡೆದಿರುತ್ತವೆ. ಹೊಟ್ಟೆಪಾಡಿಗಾಗಿ ದೂರದ ಊರುಗಳಲ್ಲಿ ನೆಲೆಸಿರುವ ಜನ ಜಾತ್ರೆ ಬಂದಾಗ ಊರಿಗೆ ಬರುತ್ತಾರೆ.

TV9kannada Web Team

| Edited By: Arun Belly

Mar 26, 2022 | 1:10 AM

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಜ್ಯದ ಜನಪ್ರಿಯ ರಾಜಕಾರಣಿ ಅನ್ನೋದು ಸುಳ್ಳಲ್ಲ. ಅವರು ರಾಜ್ಯದ ಯಾವ ಮೂಲೆಗೆ ಹೋದರೂ ಕ್ರೌಡ್ ಪುಲ್ಲರ್ (crowd puller). ಅವರಿದ್ದಲ್ಲಿ ಜನ ಮುಕ್ಕುರುತ್ತಾರೆ ಮತ್ತು ಅವರು ನಡೆದಲ್ಲಿ ಹಿಂಡುಗಳಾಗಿ ಹಿಂಬಾಲಿಸುತ್ತಾರೆ. ಇನ್ನು ಅವರು ತಮ್ಮ ಸ್ವಗ್ರಾಮಕ್ಕೆ ಸಿದ್ದರಾಮನ ಹುಂಡಿಗೆ ಅದರಲ್ಲೂ ಜಾತ್ರೆಯ ಸಮಯದಲ್ಲಿ ಹೋದರೆ ಅವರ ಸುತ್ತಮುತ್ತ ಜನ ಕಾಣದಿರಲು ಸಾಧ್ಯವೇ? ಊರಿನ ಜನ, ಸಂಬಂಧಿಕರು, ನೆಂಟರಿಷ್ಟರು, ಸ್ನೇಹಿತರು ಮೊದಲದವರೆಲ್ಲ ಜಾತ್ರೆಯಲ್ಲಿ ಅವರೊಂದಿಗಿದ್ದರು. ಜನರನ್ನು ನಿಯಂತ್ರಿಸುವುದರಲ್ಲೇ ಪೊಲೀಸರಿಗೆ ಸಾಕಾಗಿಬಿಟ್ಟಿತು. ಇಲ್ಲೊಬ್ಬ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ (lady police inspector) ಇದ್ದಾರೆ. ಸಿದ್ದರಾಮಯ್ಯ ಊರವರು ಅನ್ನೋದಕ್ಕಿಂತ ವಿರೋಧ ಪಕ್ಷದ ನಾಯಕರು ಅನ್ನುವ ಕಾರಣಕ್ಕೆ ಅವರು ಭದ್ರತೆ ಒದಗಿಸಬೇಕಾಗಿದೆ ಮತ್ತು ಅದಕ್ಕಾಗಿ ಹೆಣಗಾಡುತ್ತಿದ್ದಾರೆ.

ಸಿದ್ದರಾಮಯ್ಯನವರೇ ಹೇಳುವ ಹಾಗೆ, ಊರಲ್ಲಿ ನಡೆಯುವ ಸಿದ್ದರಾಮೇಶ್ವರ ಜಾತ್ರಾ ಮಹೋತ್ವವದಲ್ಲಿ ಭಾಗವಹಿಸುವುದನ್ನು ಅವರು ತಪ್ಪಿಸುವುದಿಲ್ಲ. ಹಾಗೆ ನೋಡಿದರೆ ಊರ ಜಾತ್ರೆಗಳು ಎಲ್ಲರ ಬದುಕಿನಲ್ಲಿ ವಿಶೇಷ ಮಹತ್ವ ಪಡೆದಿರುತ್ತವೆ. ಹೊಟ್ಟೆಪಾಡಿಗಾಗಿ ದೂರದ ಊರುಗಳಲ್ಲಿ ನೆಲೆಸಿರುವ ಜನ ಜಾತ್ರೆ ಬಂದಾಗ ಊರಿಗೆ ಬರುತ್ತಾರೆ.

ವಿರೋಧ ಪಕ್ಷದ ನಾಯಕರು ಜಾತ್ರೆಯಲ್ಲಿ ತಮ್ಮ ಸ್ನೇಹಿತರನ್ನು ಭೇಟಿಯಾದರು, ಅವರೊಂದಿಗೆ ಹರಟಿದರು ಮತ್ತು ಡೊಳ್ಳಿನ ಸದ್ದಿಗೆ ಹೆಜ್ಚೆಯನ್ನೂ ಹಾಕಿದರು. ಅವರ ಕುಣಿತ ಕಂಡು ಊರ ಜನ ಹೋಯ್ ಅಂತ ಕಿರುಚಿದರು ಮತ್ತು ಪಕ್ಕದ ಊರುಗಳಿಗೆ ಕೇಳಿಸುವಂತೆ ಶಿಳ್ಳೆ ಹಾಕಿದರು. ಅವರು ಕುಣಿದಿದ್ದು ಈ ವಿಡಿಯೋನಲ್ಲಿಲ್ಲ, ಮತ್ತೊಂದು ವಿಡಿಯೋನಲ್ಲಿದೆ.

ಇದನ್ನೂ ಓದಿ:   ಊರ ಜಾತ್ರೆಯಲ್ಲಿ ಸಿದ್ದರಾಮಯ್ಯ ಸಖತ್ ಸ್ಟೆಪ್: ಅಪ್ಪನ ಡಾನ್ಸ್ ನೋಡಿ ಮಗನಿಗೆ ಖುಷಿ

Follow us on

Click on your DTH Provider to Add TV9 Kannada