AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಟ ಮಾಡುವುದನ್ನು ನಿಲ್ಲಿಸಿ ಎದ್ದುನಿಂತು ಗೌರವ ಸೂಚಿಸಿದ ಮಹಿಳೆಯರಿಗೆ ಸಿದ್ದರಾಮಯ್ಯ ಏಳಬೇಡಿ, ಊಟ ಮಾಡಿ ಅಂದರು

ಊಟ ಮಾಡುವುದನ್ನು ನಿಲ್ಲಿಸಿ ಎದ್ದುನಿಂತು ಗೌರವ ಸೂಚಿಸಿದ ಮಹಿಳೆಯರಿಗೆ ಸಿದ್ದರಾಮಯ್ಯ ಏಳಬೇಡಿ, ಊಟ ಮಾಡಿ ಅಂದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 26, 2022 | 1:02 AM

ಇದೇ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಿದ್ದರಾಮಯ್ಯನವರ ಕಾಲಿಗೆರಗಿ ನಮಸ್ಕಾರ ಮಾಡುತ್ತಾನೆ. ಆ ವ್ಯಕ್ತಿಯ ವರ್ತನೆ ಸಿದ್ದರಾಮಯ್ಯನವರಿಗೆ ಇಷ್ಟವಾಗುವುದಿಲ್ಲ. ಅವರು ಆತನಿಗೆ ಯಾರಪ್ಪ ನೀನು ಅಂತ ಕೇಳುತ್ತಾರೆ.

ಸಿದ್ದರಾಮನ ಹುಂಡಿಯ (Siddaramana Hundi) ಸಿದ್ದರಾಮೇಶ್ವರ ಜಾತ್ರಾಮಹೋತ್ಸವದಲ್ಲಿ ಸಿದ್ದರಾಮಯ್ಯನವರದ್ದೇ (Siddaramaiah) ಕಾರುಬಾರು. ಅವರು ಹೋದೆಡೆಯಲ್ಲೆಲ್ಲ ಜನ ಹಿಂಬಾಲಿಸುತ್ತಿದ್ದರು. ಈ ವಿಡಿಯೋನಲ್ಲಿ (video) ಮಾಜಿ ಮುಖ್ಯಮಂತ್ರಿಗಳು ಜಾತ್ರೆಗೆ ಬಂದಿರುವವರಿಗೆ ಊಟದ ವ್ಯವಸ್ಥೆ ಮಾಡಿರುವ ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲೂ ಅವರ ಹಿಂದೆ ಹಲವಾರು ಜನ. ಅವರನ್ನು ನಿಯಂತ್ರಿಸುವುದು ಪೊಲೀಸರಿಗೆ ಬಹಳ ಕಷ್ಟವಾಗಿದ್ದು ನಿಜ. ಜಾತ್ರೆಗೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನೇನೂ ನಿಯೋಜಿಸಿಲ್ಲ. ಒಬ್ಬ ಮಹಿಳಾ ಇನ್ಸ್ ಪೆಕ್ಟರ್ ಮಾತ್ರ ಎಲ್ಲಾ ವಿಡಿಯೋಗಳಲ್ಲಿ ಕಾಣಿಸುತ್ತಾರೆ. ದೇವಸ್ಥಾನದ ಬಳಿಯೂ ಅವರು ಕಂಡರು, ಸಿದ್ದರಾಮಯ್ಯ ಜಾತ್ರೆಯಲ್ಲಿ ನಡೆದು ಹೋಗುವಾಗಲೂ ಅವರು ಜನರನ್ನು ದೂರ ಸರಿಸಿ ದಾರಿ ಮಾಡಿಕೊಡುತ್ತಿದ್ದರು. ಊಟದ ವ್ಯವಸ್ಥೆ ನಡೆಯುತ್ತಿರುವ ಕಡೆ ಸಿದ್ದರಾಮಯ್ಯ ವೀಕ್ಷಣೆಗೆ ಬಂದರೆ ಅಲ್ಲೂ ಅವರಿದ್ದಾರೆ.

ಇದೇ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಿದ್ದರಾಮಯ್ಯನವರ ಕಾಲಿಗೆರಗಿ ನಮಸ್ಕಾರ ಮಾಡುತ್ತಾನೆ. ಆ ವ್ಯಕ್ತಿಯ ವರ್ತನೆ ಸಿದ್ದರಾಮಯ್ಯನವರಿಗೆ ಇಷ್ಟವಾಗುವುದಿಲ್ಲ. ಅವರು ಆತನಿಗೆ ಯಾರಪ್ಪ ನೀನು ಅಂತ ಕೇಳುತ್ತಾರೆ. ಸಿದ್ದರಾಮಯ್ಯನವರ ಜೊತೆ ಅವರ ಹಳೆಯ ಸ್ನೇಹಿತ ಮರಿಸ್ವಾಮಿ ಸಹ ಇದ್ದಾರೆ.

ಸಿದ್ದರಾಮಯ್ಯನವರನ್ನು ಕಂಡು ಊಟಕ್ಕೆ ಕೂತಿರುವ ಮಹಿಳೆಯರು ಎದ್ದುನಿಂತು ಗೌರವ ಸೂಚಿಸುತ್ತಾರೆ. ಈ ಸಂಗತಿ ಕೂಡ ಸಿದ್ದರಾಮಯ್ಯನವರಿಗೆ ಸರಿಯೆನಿಸುವುದಿಲ್ಲ. ಅವರಿಗೆ ಕೂತುಕೊಳ್ಳುವಂತೆ ಸನ್ನೆ ಮಾಡುತ್ತಾ ಹೇಳುತ್ತಾರೆ. ಅವರೊಂದಿಗಿರುವ ಅದೇ ಮಹಿಳಾ ಇನ್ಸ್ ಪೆಕ್ಟರ್ ಸಹ ಮಹಿಳೆಯರ ಕಡೆ ಕೈ ಮಾಡಿ ಕೂತ್ಕೊಳ್ಳಿ ಅಂತ ಹೇಳುತ್ತಾರೆ!

ಇದನ್ನೂ ಓದಿ:  Viral Video: ಕೆಸರು ತುಂಬಿದ ರಸ್ತೆಯನ್ನು ಯುವಕ ದಾಟಿದ್ದು ಹೇಗೆ ಗೊತ್ತಾ? ಇಲ್ಲಿದೆ ವೈರಲ್ ವಿಡಿಯೋ