ಬಾಕ್ಸ್ ಆಫೀಸ್​​ನಲ್ಲಿ ‘ತುನಿವು’ ಚಿತ್ರ ಹಿಂದಿಕ್ಕಿದ ವಿಜಯ್ ಸಿನಿಮಾ ‘ವಾರಿಸು’

Varisu And Thunivu Collection: ಎರಡನೇ ದಿನದ (ಜನವರಿ 12) ಕಲೆಕ್ಷನ್ ವಿಚಾರದ ಬಗ್ಗೆಯೂ ಮಾಹಿತಿ ಸಿಕ್ಕಿದೆ. ‘ತುನಿವು’ ಸಿನಿಮಾ ತಮಿಳುನಾಡಿನಲ್ಲಿ ಎರಡನೇ ದಿನ 14.42 ಕೋಟಿ ರೂಪಾಯಿ ಗಳಿಕೆ ಮಾಡಿಕೊಂಡಿದೆ.

ಬಾಕ್ಸ್ ಆಫೀಸ್​​ನಲ್ಲಿ ‘ತುನಿವು’ ಚಿತ್ರ ಹಿಂದಿಕ್ಕಿದ ವಿಜಯ್ ಸಿನಿಮಾ ‘ವಾರಿಸು’
ವಿಜಯ್-ಅಜಿತ್
Follow us
| Updated By: ರಾಜೇಶ್ ದುಗ್ಗುಮನೆ

Updated on: Jan 13, 2023 | 10:54 AM

ಸಂಕ್ರಾಂತಿ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಎರಡು ದೊಡ್ಡ ಸಿನಿಮಾಗಳು ರಿಲೀಸ್ ಆಗಿವೆ. ಅಜಿತ್ ಕುಮಾರ್ ನಟನೆಯ ‘ತುನಿವು’ (Thunivu) ಹಾಗೂ ದಳಪತಿ ವಿಜಯ್ ಅಭಿನಯದ ‘ವಾರಿಸು’ ಚಿತ್ರಗಳು (Varisu Movie) ಮುಖಾಮುಖಿ ಆಗಿವೆ. ಈ ಎರಡೂ ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿವೆ. ಕಲೆಕ್ಷನ್ ವಿಚಾಕ್ಕೆ ಬಂದರೆ ‘ತುನಿವು’ ಎದುರು ‘ವಾರಿಸು’ ಮೇಲುಗೈ ಸಾಧಿಸಿದೆ. ಅಂತಿಮವಾಗಿ ಯಾವ ಸಿನಿಮಾ ಗೆಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಬಾಲಿವುಡ್ ಬಾಕ್ಸ್ ಆಫೀಸ್ ಪಂಡಿತರ ಪ್ರಕಾರ ‘ವಾರಿಸು’ ಸಿನಿಮಾ ಈವರೆಗೆ 46.2 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘ತುನಿವು’ ಸಿನಿಮಾ 37.6 ಕೋಟಿ ರೂ. ಬಾಚಿಕೊಂಡಿದೆ. ಒಟ್ಟಾರೆ ಕಲೆಕ್ಷನ್ ವಿಚಾರದಲ್ಲಿ ‘ತುನಿವು’ಗಿಂತ ‘ವಾರಿಸು’ ಸುಮಾರು 9 ಕೋಟಿ ರೂಪಾಯಿ ಮುಂದಿದೆ.

ಎರಡನೇ ದಿನದ (ಜನವರಿ 12) ಕಲೆಕ್ಷನ್ ವಿಚಾರದ ಬಗ್ಗೆಯೂ ಮಾಹಿತಿ ಸಿಕ್ಕಿದೆ. ‘ತುನಿವು’ ಸಿನಿಮಾ ತಮಿಳುನಾಡಿನಲ್ಲಿ ಎರಡನೇ ದಿನ 14.42 ಕೋಟಿ ರೂಪಾಯಿ ಗಳಿಕೆ ಮಾಡಿಕೊಂಡಿದೆ. ಭಾರತದಲ್ಲಿ ಈ ಚಿತ್ರದ ಕಲೆಕ್ಷನ್ ಎರಡನೇ ದಿನಕ್ಕೆ 17-19 ಕೋಟಿ ರೂಪಾಯಿ ಇದೆ.  ಇನ್ನು, ‘ವಾರಿಸು’ ಸಿನಿಮಾಗೆ ಬಾಕ್ಸ್​ ಆಫೀಸ್​ನಲ್ಲಿ ಗಳಿಕೆ ಚೆನ್ನಾಗಿಯೇ ಆಗಿದೆ. ಎರಡನೇ ದಿನ ಈ ಚಿತ್ರ ತಮಿಳುನಾಡಿನಲ್ಲಿ 16.2 ಕೋಟಿ ರೂಪಾಯಿ ಹಾಗೂ ಭಾರತಾದ್ಯಂತ 18-20 ಕೋಟಿ ರೂಪಾಯಿ ಗಳಿಕೆ ಮಾಡಿಕೊಂಡಿದೆ.

ಮೊದಲ ದಿನದ ಕಲೆಕ್ಷನ್ ಲೆಕ್ಕ

‘ತುನಿವು’ ಸಿನಿಮಾ ಭಾರತದಲ್ಲಿ 26 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ‘ವಾರಿಸು’ ಸಿನಿಮಾ 26.50 ಕೋಟಿ ರೂ. ಬಾಚಿಕೊಂಡಿತ್ತು. ತಮಿಳುನಾಡು ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನ ‘ತುನಿವು’ ಮೇಲುಗೈ ಸಾಧಿಸಿತ್ತು. ಈ ಚಿತ್ರ ತಮಿಳುನಾಡಿನಲ್ಲಿ 18 ಕೋಟಿ ರೂಪಾಯಿ ಗಳಿಕೆ ಮಾಡಿದರೆ, ‘ವಾರಿಸು’17 ಕೋಟಿ ರೂಪಾಯಿಗೆ ಮೊದಲ ದಿನದ ಆಟ ಮುಗಿಸಿತ್ತು. ಈಗ ಎರಡನೇ ದಿನ ಕಲೆಕ್ಷನ್ ವಿಚಾರದಲ್ಲಿ ‘ವಾರಿಸು’ ಚೇತರಿಕೆ ಕಂಡಿದೆ.

ಇದನ್ನೂ ಓದಿ: ‘ತುನಿವು’ ಮತ್ತು ‘ವಾರಿಸು’ ಚಿತ್ರಗಳಲ್ಲಿ ಮೊದಲ ದಿನ ಗೆದ್ದಿದ್ಯಾರು? ಇಲ್ಲಿದೆ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕಾಚಾರ

ಅಜಿತ್ ಹಾಗೂ ವಿಜಯ್ ಅಭಿಮಾನಿಗಳ ಮಧ್ಯೆ ಮೊದಲಿನಿಂದಲೂ ಶೀತಲ ಸಮರ ನಡೆಯುತ್ತಲೇ ಇದೆ. ಈಗ ಎರಡೂ ಹೀರೋಗಳ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಿರುವುದರಿಂದ ಸಹಜವಾಗಿಯೇ ಸಾಕಷ್ಟು ಸ್ಪರ್ಧೆ ಇದೆ. ನೆಚ್ಚಿನ ಹೀರೋನ ಸಿನಿಮಾ ಗೆಲ್ಲಿಸಲು ವಿಜಯ್ ಹಾಗೂ ಅಜಿತ್ ಫ್ಯಾನ್ಸ್ ಪ್ರಯತ್ನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘