ಸಲ್ಮಾನ್ ಖಾನ್ ಪಂಚೆ ಧರಿಸಿ ಕುಣಿದಿದ್ದಕ್ಕೆ ಎದುರಾಯ್ತು ಕಿರಿಕ್; ಸಿನಿಮಾ ಬ್ಯಾನ್ ಮಾಡಲು ಒತ್ತಾಯ
Yentamma song: ‘ಈ ಹಾಡಿನಿಂದಾಗಿ ದಕ್ಷಿಣ ಭಾರತದ ಸಂಸ್ಕೃತಿಗೆ ಧಕ್ಕೆ ಆಗಿದೆ. ಸಾಂಪ್ರದಾಯಿಕ ಉಡುಗೆಯನ್ನು ಅಸಹ್ಯವಾಗಿ ತೋರಿಸಲಾಗಿದೆ’ ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ಕಿಡಿ ಕಾರಿದ್ದಾರೆ.
ನಟ ಸಲ್ಮಾನ್ ಖಾನ್ (Salman Khan) ಅವರು ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುವುದರ ಜೊತೆಗೆ ನಿರ್ಮಾಣವನ್ನೂ ಅವರೇ ಮಾಡಿದ್ದಾರೆ. ಈದ್ ಹಬ್ಬದ ಪ್ರಯುಕ್ತ ಏಪ್ರಿಲ್ 21ರಂದು ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾ ರಿಲೀಸ್ ಆಗಲಿದೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ‘ಯೆಂಟಮ್ಮಾ..’ ಹಾಡು ಬಿಡುಗಡೆ ಆಯಿತು. ಎಲ್ಲ ಕಡೆಗಳಿಂದ ಈ ಗೀತೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರಲ್ಲಿ ಸಲ್ಮಾನ್ ಖಾನ್ ಅವರು ಪಂಚೆ ಧರಿಸಿ ಕುಣಿದಿದ್ದಾರೆ. ಅವರಿಗೆ ರಾಮ್ ಚರಣ್, ದಗ್ಗುಬಾಟಿ ವೆಂಕಟೇಶ್ ಕೂಡ ಸಾಥ್ ನೀಡಿದ್ದಾರೆ. ಆದರೆ ಈ ಹಾಡಿನ ವಿರುದ್ಧ ಕೆಲವರು ಕಿಡಿಕಾರಿದ್ದಾರೆ. ಮಾಜಿ ಕ್ರಿಕೆಟರ್, ಕಾಮೆಂಟೇಟರ್ ಲಕ್ಷ್ಮಣ್ ಶಿವರಾಮಕೃಷ್ಣನ್ (Laxman Sivaramakrishnan) ಅವರು ‘ಯೆಂಟಮ್ಮಾ..’ ಗೀತೆ ಬಗ್ಗೆ ತಕರಾರು ಎತ್ತಿದ್ದಾರೆ.
ಲಕ್ಷ್ಮಣ್ ಶಿವರಾಮಕೃಷ್ಣನ್ ತಕರಾರು ಏನು?
‘ಈ ಹಾಡಿನಿಂದಾಗಿ ದಕ್ಷಿಣ ಭಾರತದ ಸಂಸ್ಕೃತಿಗೆ ಧಕ್ಕೆ ಆಗಿದೆ. ಇದು ಲುಂಗಿ ಅಲ್ಲ. ಇದು ಧೋತಿ. ಸಾಂಪ್ರದಾಯಿಕ ಉಡುಗೆಯನ್ನು ಅಸಹ್ಯವಾಗಿ ತೋರಿಸಲಾಗಿದೆ’ ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ಟ್ವೀಟ್ ಮಾಡಿದ್ದಾರೆ. ಅವರ ಮಾತಿಗೆ ಕೆಲವು ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ಅವರ ಈ ಟ್ವೀಟ್ ವೈರಲ್ ಆಗಿದೆ.
This is highly ridiculous and degrading our South Indian culture. This is not a LUNGI , THIS IS A DHOTI. A classical outfit which is being shown in a DISGUSTING MANNER https://t.co/c9E0T2gf2d
— Laxman Sivaramakrishnan (@LaxmanSivarama1) April 8, 2023
Nowadays people do anything for money. Won’t they research what is a Lungi and a Dhoti. Even if it’s a set, it’s being projected as a temple. People associated with the movie should realise, no footwear inside the temple premises. Appealing to @CBFC_India to consider to BAN this
— Laxman Sivaramakrishnan (@LaxmanSivarama1) April 8, 2023
ಸಿನಿಮಾ ಬ್ಯಾನ್ ಮಾಡಲು ಮನವಿ:
‘ಇಂದಿನ ಕಾಲದಲ್ಲಿ ಜನರು ದುಡ್ಡಿಗಾಗಿ ಏನನ್ನು ಬೇಕಿದ್ದಾರೂ ಮಾಡುತ್ತಾರೆ. ಲುಂಗಿ ಮತ್ತು ಧೋತಿ ಎಂದರೆ ಏನು ಅಂತ ಸಣ್ಣ ಅಧ್ಯಯನ ಮಾಡೋದು ಬೇಡವೇ? ಶೂಟಿಂಗ್ ಸೆಟ್ ಆಗಿದ್ದರೂ ಕೂಡ ಅದನ್ನು ದೇವಸ್ಥಾನದ ರೀತಿ ತೋರಿಸಲಾಗುತ್ತದೆ. ಅಂಥ ದೇವಸ್ಥಾನದ ಜಾಗದಲ್ಲಿ ಚಪ್ಪಲಿ ಹಾಕಬಾರದು ಅನ್ನೋದು ಸಿನಿಮಾದವರಿಗೆ ಗೊತ್ತಾಗಲ್ವಾ? ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಸೆನ್ಸಾರ್ ಮಂಡಳಿಗೆ ಮನವಿ ಮಾಡುತ್ತೇನೆ’ ಎಂದು ಕೂಡ ಲಕ್ಷ್ಮಣ್ ಶಿವರಾಮಕೃಷ್ಣನ್ ಟ್ವೀಟ್ ಮಾಡಿದ್ದಾರೆ.
Salman Khan: ಬೆದರಿಕೆ ಹೆಚ್ಚಾದ ಬೆನ್ನಲ್ಲೇ ಬುಲೆಟ್ಪ್ರೂಫ್ ಕಾರು ಖರೀದಿಸಿದ ಸಲ್ಮಾನ್ ಖಾನ್; ಇದರ ಬೆಲೆ ಎಷ್ಟು?
ಹೇಗಿದೆ ‘ಯೆಂಟಮ್ಮಾ..’ ಹಾಡು?
ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಮೊದಲ ಹಾಡು ಕೆಲವು ಕಾರಣದಿಂದ ಟ್ರೋಲ್ ಆಗಿತ್ತು. ಆದರೆ ಈಗ ‘ಯೆಂಟಮ್ಮಾ..’ ಸಾಂಗ್ ಧೂಳೆಬ್ಬಿಸುತ್ತಿದೆ. ಈ ಹಾಡಿನಲ್ಲಿ ಸಲ್ಮಾನ್ ಖಾನ್, ರಾಮ್ ಚರಣ್, ದಗ್ಗುಬಾಟಿ ವೆಂಕಟೇಶ್ ಅವರು ಪಂಚೆ ಎತ್ತಿಕಟ್ಟಿ ಕುಣಿದಿದ್ದಾರೆ. ಪಾಯಲ್ ದೇವ್ ಸಂಗೀತ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ಹಿಂದಿ ಮತ್ತು ತೆಲುಗು ಮಿಶ್ರಿತ ಸಾಹಿತ್ಯ ಇದೆ. ಇದು ಅಭಿಮಾನಿಗಳಿಗೆ ಹೊಸ ಕಿಕ್ ನೀಡುತ್ತಿದೆ. ಅಂದಹಾಗೆ, ರಾಮ್ ಚರಣ್ ಅವರು ಈ ಚಿತ್ರದಲ್ಲಿ ನಟಿಸಿಲ್ಲ. ಅವರು ಈ ಹಾಡಿನಲ್ಲಿ ಗೆಸ್ಟ್ ಅಪಿಯರೆನ್ಸ್ ನೀಡಿದ್ದಾರೆ ಅಷ್ಟೇ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:05 pm, Sun, 9 April 23