ಒಂದೇ ವಾರದಲ್ಲಿ ನಡೆದ ಎರಡು ಶಾಕಿಂಗ್ ಘಟನೆ ಹಂಚಿಕೊಂಡ ನಟಿ ಪ್ರೀತಿ ಜಿಂಟಾ
Preity Zinta: ಒಂದೇ ವಾರದಲ್ಲಿ ತಮ್ಮೊಟ್ಟಿಗೆ ನಡೆದ ಎರಡು ಆಘಾತಕಾರಿ ಘಟನೆಗಳ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ ನಟಿ ಪ್ರೀತಿ ಜಿಂಟಾ.
ನಟನೆಯಿಂದ ದೂರಾಗಿ ವಿದೇಶದಲ್ಲಿ ಸೆಟಲ್ ಆಗಿರುವ ನಟಿ ಪ್ರೀತಿ ಜಿಂಟಾ (Preity Zinta), ಆಗೊಮ್ಮೆ ಈಗೊಮ್ಮೆ ಭಾರತದಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿಯೂ ಐಪಿಎಲ್ ಸೀಸನ್ (IPL 2023) ಸಂದರ್ಭದಲ್ಲಿ ಅವರ ಹಾಜರಿ ಪಕ್ಕಾ. ಅದರ ಹೊರತಾಗಿ ಕೆಲವು ಬಾಲಿವುಡ್ ಕಾರ್ಯಕ್ರಮಗಳಿಗೆ ಬಂದು ಹೋಗುವುದೂ ಉಂಟು. ನಿರ್ಮಾಪಕಿಯಾಗಿಯೂ ಕೆಲವು ವೆಬ್ ಸರಣಿಗಳ ಮೇಲೆ ಬಂಡವಾಳ ಹೂಡಿದ್ದಾರೆ ಈ ನಟಿ. ಸಾಮಾಜಿಕ ಜಾಲತಾಣದಲ್ಲಿ (Social Media) ಸಕ್ರಿಯರಾಗಿರುವ ನಟಿ ಪ್ರೀತಿ ಜಿಂಟಾ, ಒಂದೇ ವಾರದಲ್ಲಿ ತಮಗೆ ತೀವ್ರ ಆಘಾತ ಉಂಟು ಮಾಡಿದ ಎರಡು ಸಂಗತಿಗಳ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಪ್ರೀತಿ ಜಿಂಟಾ ಇತ್ತೀಚೆಗೆ ಪಾರ್ಕ್ ಒಂದರಕ್ಕೆ ತಮ್ಮ ದೊಡ್ಡ ಮಗಳು ಗಿಯಾ ಅನ್ನು ಕರೆದೊಯ್ದಿದ್ದರಂತೆ. ಅಲ್ಲಿ ಮಹಿಳೆಯೊಬ್ಬರು ಗಿಯಾ ಜೊತೆ ಫೋಟೊ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಪ್ರೀತಿ ಅದಕ್ಕೆ ಒಪ್ಪಿಗೆ ನೀಡಿಲ್ಲ. ಬಳಿಕ ಸುಮ್ಮನಾದ ಆ ಮಹಿಳೆ ಸ್ವಲ್ಪ ಹೊತ್ತಿನ ಬಳಿಕ ಬಲವಂತವಾಗಿ ಗಿಯಾಳ ತುಟಿಯ ಬಳಿ ಮುತ್ತಿಟ್ಟು ಓಡಿ ಹೋದಳಂತೆ. ಇದು ಪ್ರೀತಿಗೆ ಆಘಾತ ತಂದಿದೆ. ಮಗಳಿಗೆ ಮುತ್ತಿಟ್ಟು ಓಡಿಹೋದ ಮಹಿಳೆ ಐಶಾರಾಮಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಾರೆ ಎಂದಿರುವ ಪ್ರೀತಿ, ‘ನಾನು ಸೆಲೆಬ್ರಿಟಿ ಆಗದೇ ಇದ್ದಿದ್ದರೆ ಅಲ್ಲಿ ಬೇರೆಯದೇ ಘಟನೆ ನಡೆಯುತ್ತಿತ್ತು, ಆದರೆ ಅಲ್ಲಿ ಸೀನ್ ಕ್ರಿಯೇಟ್ ಮಾಡಲು ನನಗೆ ಇಷ್ಟವಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಇನ್ನೊಂದು ಘಟನೆ ನಡೆದರುವುದು ಮುಂಬೈನಲ್ಲಿಯೇ. ಏರ್ಪ್ಪೋರ್ಟ್ಗೆ ಹೋಗಲು ಸಜ್ಜಾಗಿದ್ದ ಪ್ರೀತಿ ಕಾರು ಹತ್ತಲು ಬಂದಾಗ ಅಂಗವಿಕಲ ವ್ಯಕ್ತಿಯೊಬ್ಬ ಬಂದು ಅವರನ್ನು ಹಣ ಕೇಳಿದ್ದಾನೆ. ಈ ಹಿಂದೆ ಹಲವು ಬಾರಿ ಆ ವ್ಯಕ್ತಿ ನನ್ನನ್ನು ಹಣ ಕೇಳಿದ್ದ ಸಾಕಷ್ಟು ಬಾರಿ ನಾನು ಅವನಿಗೆ ಹಣ ಕೊಟ್ಟಿದ್ದೇನೆ. ಆದರೆ ಈ ಬಾರಿ ಆತ ಹಣ ಕೇಳಿದಾಗ ‘ನನ್ನ ಬಳಿ ನಗದು ಇಲ್ಲ ಕಾರ್ಡ್ ಮಾತ್ರವೇ ಇದೆ’ ಎಂದು ಹೇಳಿ ಹೊರಟುಬಿಟ್ಟೆ. ಆದರೆ ಆ ಅಂಗವಿಕಲ ವ್ಯಕ್ತಿ ನನ್ನ ಕಾರನ್ನು ಹಿಂಬಾಲಿಸುತ್ತಾ ಬಂದ, ನಾನು ಅವನಿಗೆ ಹಣ ಕೊಡದೇ ಇದ್ದುದ್ದಕ್ಕೆ ಬೈಯ್ಯಲು ಆರಂಭಿಸಿದ. ಬಳಿಕ ಕಾರಿನಲ್ಲಿ ನನ್ನ ಜೊತೆಗಿದ್ದ ಮಹಿಳೆ ಅವನಿಗೆ ತಮ್ಮ ಪರ್ಸ್ನಲ್ಲಿದ್ದ ಸ್ವಲ್ಪ ಹಣ ಕೊಟ್ಟರು, ಆದರೆ ಆ ಹಣವನ್ನು ಅವನು ಎಸೆದುಬಿಟ್ಟ, ಇಷ್ಟು ಹಣ ಸಾಕಾಗುವುದಿಲ್ಲ, ಇನ್ನಷ್ಟು ಹಣ ಕೊಡುವಂತೆ ಪೀಡಿಸಲು ಆರಂಭಿಸಿದ, ಬೈಯ್ಯಲು ಆರಂಭಿಸಿದ. ಆದರೆ ಇದನ್ನೆಲ್ಲ ನೋಡುತ್ತಿದ್ದ ಪಾಪರಾಟ್ಜಿಗಳು ನಗುತ್ತಲಿದ್ದರು, ಯಾರೂ ಸಹ ಸಹಾಯಕ್ಕೆ ಬರಲಿಲ್ಲ, ಆ ಅಂಗವಿಕಲ ವ್ಯಕ್ತಿಗೆ ಬುದ್ಧಿವಾದವನ್ನೂ ಹೇಳಲಿಲ್ಲ” ಎಂದು ಬರೆದುಕೊಂಡಿದ್ದಾರೆ ಪ್ರೀತಿ.
ಅಸಲು ಸಂಗತಿ ಏನೆಂದರೆ ಪಾಪರಾಟ್ಜಿಗಳು ಬೇಕೆಂದೇ ಈ ರೀತಿ ಭಿಕ್ಷುಕರನ್ನು ಸ್ಟಾರ್ಗಳ ಮನೆಯ ಬಳಿ ಕರೆಸಿರುತ್ತಾರೆ. ಭಿಕ್ಷುಕರಿಗೆ ನಟ ಅಥವಾ ನಟಿ ಹಣ ನೀಡಿದರೆ ಅವರೊಟ್ಟಿಗೆ ಮಾತನಾಡಿದರೆ ಅದರ ಫೋಟೊ, ವಿಡಿಯೋ ತೆಗೆದುಕೊಂಡು ಒಳ್ಳೆಯ ತಲೆಬರಹ ನೀಡಿ ಪಬ್ಲಿಷ್ ಮಾಡುತ್ತಾರೆ, ಹಣ ಕೊಡಲಿಲ್ಲವೆಂದರೆ ಅದನ್ನು ಋಣಾತ್ಮಕ ಹೆಡ್ಲೈನ್ ಜೊತೆ ಪಬ್ಲಿಷ್ ಮಾಡುತ್ತಾರೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಹಿಂದೆಯೂ ಕೆಲವು ಭಿಕ್ಷುಕರನ್ನು ಬಿಟ್ಟಿದ್ದರು, ವಿಮಾನ ನಿಲ್ದಾಣಕ್ಕೆ ಹೋಗುವ ಆತುರದಲ್ಲಿದ್ದ ರಶ್ಮಿಕಾ ಅವರಿಗೆ ಹಣ ನೀಡಿರಲಿಲ್ಲ, ಆಗ ರಶ್ಮಿಕಾ ಭಿಕ್ಷುಕರಿಗೆ ಹಣ ನೀಡಲಿಲ್ಲವೆಂದು, ಭಿಕ್ಷುಕರ ಬಗ್ಗೆ ರಶ್ಮಿಕಾಗೆ ತಾತ್ಸಾರ ಎಂದೆಲ್ಲ ಹೆಡ್ಲೈನ್ ನೀಡಿ ವಿಡಿಯೋಗಳನ್ನು ಹರಿಬಿಟ್ಟಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:25 pm, Sat, 8 April 23