Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಮನಸ್ಸು ಬದಿಗಿಟ್ಟು ಭೇಟಿ ಆದ ಕರಣ್ ಜೋಹರ್-ಕಾರ್ತಿಕ್ ಆರ್ಯನ್​; ಆದರೂ ತಪ್ಪಲಿಲ್ಲ ಟೀಕೆ

Karan Johar: ಕರಣ್ ಜೋಹರ್ ಅವರು 2019ರಲ್ಲಿ ‘ದೋಸ್ತಾನ 2’ ಘೋಷಣೆ ಮಾಡಿದರು. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಟಿಸಬೇಕಿತ್ತು. ಆದರೆ, ಅವರನ್ನು ಹೊರಗಿಟ್ಟರು ಕರಣ್.

ವೈಮನಸ್ಸು ಬದಿಗಿಟ್ಟು ಭೇಟಿ ಆದ ಕರಣ್ ಜೋಹರ್-ಕಾರ್ತಿಕ್ ಆರ್ಯನ್​; ಆದರೂ ತಪ್ಪಲಿಲ್ಲ ಟೀಕೆ
ಕಾರ್ತಿಕ್​-ಕರಣ್​
Follow us
ರಾಜೇಶ್ ದುಗ್ಗುಮನೆ
|

Updated on:Apr 10, 2023 | 9:21 AM

ಬಾಲಿವುಡ್​​ನ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಕರಣ್​ ಜೋಹರ್ (Karan Johar) ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಯಾರನ್ನಾದರೂ ತುಳಿಯಬೇಕು, ಇಂಡಸ್ಟ್ರಿಯಿಂದ ಹೊರ ಹಾಕಬೇಕು ಎಂದು ಕರಣ್​ಗೆ ಅನಿಸಿದರೆ ಅದು ಅವರಿಗೆ ಹೆಚ್ಚುಹೊತ್ತಿನ ಕೆಲಸವಲ್ಲ. ಈ ಕಾರಣಕ್ಕೆ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಅವರು ನೆಪೋಟಿಸಂನ ಬೆಂಬಲಿಸುತ್ತಾರೆ ಎನ್ನುವ ಆರೋಪವೂ ಜೋರಾಗಿಯೇ ಇದೆ. ಇಷ್ಟೆಲ್ಲ ಟೀಕೆ ಬಂದ ಮಾತ್ರಕ್ಕೆ ಅವರು ಇದೆಲ್ಲವುಗಳಿಂದ ದೂರ ಉಳಿದುಕೊಂಡಿಲ್ಲ. ಈ ಮೊದಲು ಕಾರ್ತಿಕ್ ಆರ್ಯನ್ (Kartik Aaryan) ಹಾಗೂ ಕರಣ್ ಜೋಹರ್ ಮಧ್ಯೆ ಕಿತ್ತಾಟ ಆಗಿದೆ ಎನ್ನಲಾಗಿತ್ತು. ಆದರೆ, ಈಗ ಎಲ್ಲವೂ ಸರಿಯಾದಂತಿದೆ. ಇಬ್ಬರೂ ಭೇಟಿ ಮಾಡಿ ಹೊಸ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದಾರೆ. ಇದೇ ವಿಚಾರ ಇಟ್ಟುಕೊಂಡು ಕರಣ್ ಜೋಹರ್ ಅವರನ್ನು ಟೀಕೆ ಮಾಡಲಾಗಿದೆ.

ಕರಣ್ ಜೋಹರ್ ಅವರು 2019ರಲ್ಲಿ ‘ದೋಸ್ತಾನ 2’ ಘೋಷಣೆ ಮಾಡಿದರು. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಟಿಸಬೇಕಿತ್ತು. ಆದರೆ, ಅವರನ್ನು ಹೊರಗಿಟ್ಟರು ಕರಣ್. ಬಿಹೇವಿಯರ್ ಸರಿ ಇಲ್ಲ ಎನ್ನುವ ಕಾರಣಕ್ಕೆ ಕಾರ್ತಿಕ್ ಅವರನ್ನು ಕರಣ್ ಹೊರಗಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬಂದವು. ಕಾರ್ತಿಕ್ ಆರ್ಯನ್ ಈ ಚಿತ್ರದಿಂದ ಹೊರ ಬಂದರು. ಈ ವಿಚಾರದಲ್ಲಿ ಕರಣ್ ಜೋಹರ್ ಅವರ ಬಗ್ಗೆ ಸಾಕಷ್ಟು ಟೀಕೆ ಮಾಡಲಾಯಿತು. ಆದರೆ, ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈಗ ಇಬ್ಬರೂ ಮತ್ತೆ ಭೇಟಿ ಆಗಿರೋದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಕಂಗನಾ ರಣಾವತ್​-ಕರಣ್​ ಜೋಹರ್​ ನಡುವಿನ ಜಗಳ ಜೋರಾಯ್ತು; ಪರೋಕ್ಷವಾಗಿ ಕುಟುಕಿದ ನಿರ್ಮಾಪಕ

ಕಾರ್ತಿಕ್ ಆರ್ಯನ್ ಅವರಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿ ಆಗಿದೆ. ‘ಭೂಲ್​ ಭುಲಯ್ಯ 2’ ಬಳಿಕ ಅವರ ಜನಪ್ರಿಯತೆ ಹೆಚ್ಚಿದೆ. ಹಲವು ನಿರ್ಮಾಪಕರು ಕಾರ್ತಿಕ್ ಮನೆ ಎದುರು ನಿಂತಿದ್ದಾರೆ. ಈ ಕಾರಣಕ್ಕೆ ಕರಣ್ ಜೋಹರ್ ಅವರು ಕಾರ್ತಿಕ್ ಜೊತೆ ಸಿನಿಮಾ ಮಾಡೋಕೆ ಮುಂದೆ ಬಂದರಾ ಎನ್ನುವ ಪ್ರಶ್ನೆ ಮೂಡಿದೆ. ಇಬ್ಬರೂ ವೈಮನಸ್ಸು ಮರೆತು ಮತ್ತೆ ಒಂದಾಗಿರೋದು ಅನೇಕರಿಗೆ ಖುಷಿ ನೀಡಿದೆ. ಪಾಪರಾಜಿಗಳು ಕಾರ್ತಿಕ್​ ಹಾಗೂ ಕರಣ್ ಭೇಟಿ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

View this post on Instagram

A post shared by @varindertchawla

ಇದನ್ನೂ ಓದಿ: ಅನುಷ್ಕಾ ಶರ್ಮಾ ಕರಿಯರ್ ನಾಶ ಮಾಡಲು ಹೊರಟಿದ್ದ ಕರಣ್ ಜೋಹರ್; ‘ಅವರಿಗೆ ಅದೇ ಕೆಲಸ’ ಎಂದ ಕಂಗನಾ

ಕರಣ್ ಜೋಹರ್ ಅವರ ನಡೆಯ ಬಗ್ಗೆ ಅನೇಕರು ಟೀಕೆ ಮಾಡಿದ್ದಾರೆ. ‘ಕಾರ್ತಿಕ್ ಆರ್ಯನ್​ಗೆ ಹೆಚ್ಚು ಜನಪ್ರಿಯತೆ ಇಲ್ಲದಾಗ ಅವರನ್ನು ಸಿನಿಮಾದಿಂದ ಹೊರಗಿಟ್ಟರು. ಈಗ ಅವರು ಫೇಮಸ್ ಆದಮೇಲೆ ತಮ್ಮ ಸಿನಿಮಾದಲ್ಲಿ ನಟಿಸೋಕೆ ಚಾನ್ಸ್​’ ನೀಡುತ್ತಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ಇಬ್ಬರೂ ಹಳೆಯ ಘಟನೆ ಮರೆತು ಒಂದಾಗಿದ್ದು ಖುಷಿ ಇದೆ. ದೋಸ್ತಾನ ಸೀಕ್ವೆಲ್ ತಯಾರಿಯೇ’ ಎನ್ನುವ ಪ್ರಶ್ನೆಯನ್ನೂ ಕೇಳಲಾಗಿದೆ. ಈ ಬಗ್ಗೆ ಕರಣ್ ಅಥವಾ ಕಾರ್ತಿಕ್ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:21 am, Mon, 10 April 23