ಮಲ್ಲಿಗೆ ಹೂವಿನಿಂದ ಡ್ರೆಸ್ ಮಾಡಿಕೊಂಡ ನಟಿ ಉರ್ಫಿ ಜಾವೇದ್; ಬಂತು ಅಶ್ಲೀಲ ಕಮೆಂಟ್
ಗಾಜಿನ ಬಾಟಲಿ, ಹೂವು, ಫೋನ್ ಹೀಗೆ ಸಿಕ್ಕ ಸಿಕ್ಕ ಐಟಂಗಳಲ್ಲಿ ಬಟ್ಟೆ ಮಾಡಿಕೊಳ್ಳುವ ಕಲೆ ಉರ್ಫಿ ಜಾವೇದ್ಗೆ ಒಲಿದಿದೆ. ಆರಂಭದಲ್ಲಿ ಎಲ್ಲರೂ ಇದನ್ನು ಫನ್ ಆಗಿ ಸ್ವೀಕರಿಸಿದರು.
ನಟಿ ಉರ್ಫಿ ಜಾವೇದ್ (Urfi Javed) ಅವರು ಚಿತ್ರ-ವಿಚಿತ್ರ ಬಟ್ಟೆ ಹಾಕಿ ಕಾಣಿಸಿಕೊಳ್ಳೋದು ಮಿತಿಮೀರಿದೆ. ಟೀಕೆ ಮಾಡಿದಂತೆ ಅವರು ಈ ರೀತಿಯ ಉಡುಗೆ ತೊಡುವುದನ್ನು ಹೆಚ್ಚು ಮಾಡುತ್ತಲೇ ಇದ್ದಾರೆ. ಟ್ರೋಲ್ಗಳನ್ನು ಎದುರಿಸಿ ನಿಂತಿದ್ದಾರೆ. ಈಗ ಉರ್ಫಿ ಜಾವೇದ್ ಹೊಸ ಅವತಾರ ತಾಳಿದ್ದಾರೆ. ಮಲ್ಲಿಗೆ ಹೂವಿನಿಂದಲೇ ಅವರು ಬಟ್ಟೆ ಮಾಡಿ ಧರಿಸಿದ್ದಾರೆ! ಈ ವಿಡಿಯೋ ನೋಡಿ ಅನೇಕರು ಟೀಕೆ ಮಾಡಿದ್ದಾರೆ. ಆದರೆ, ಇದಕ್ಕೆಲ್ಲ ಉರ್ಫಿ ಜಾವೇದ್ ತಲೆಕೆಡಿಸಿಕೊಂಡಿಲ್ಲ. ಕೆಲವೊಮ್ಮೆ ನೆಗೆಟಿವ್ ಕಮೆಂಟ್ಗಳು ಬಂದಾಗ ಕಮೆಂಟ್ ಸೆಕ್ಷನ್ ಆಯ್ಕೆಯನ್ನು ಆಫ್ ಮಾಡಲಾಗುತ್ತದೆ. ಆದರೆ, ಉರ್ಫಿ ಅದನ್ನು ಕೂಡ ಮಾಡಿಲ್ಲ.
ಗಾಜಿನ ಬಾಟಲಿ, ಹೂವು, ಫೋನ್ ಹೀಗೆ ಸಿಕ್ಕ ಸಿಕ್ಕ ಐಟಂಗಳಲ್ಲಿ ಬಟ್ಟೆ ಮಾಡಿಕೊಳ್ಳುವ ಕಲೆ ಉರ್ಫಿ ಜಾವೇದ್ಗೆ ಒಲಿದಿದೆ. ಆರಂಭದಲ್ಲಿ ಎಲ್ಲರೂ ಇದನ್ನು ಫನ್ ಆಗಿ ಸ್ವೀಕರಿಸಿದರು. ಆದರೆ, ಬರುಬರುತ್ತಾ ಇದು ಮಿತಿಮೀರಿತು. ಅವರು ಅಶ್ಲೀಲತೆ ಮೆರೆಯುತ್ತಿದ್ದಾರೆ ಅನ್ನೋದು ಅನೇಕರ ಅಭಿಪ್ರಾಯ. ಉರ್ಫಿ ಈ ರೀತಿ ಮಾಡುವುದನ್ನು ನಿಲ್ಲಿಸಿಲ್ಲ. ಅವರ ವಿಚಿತ್ರ ಬಟ್ಟೆ ನೋಡಿ ಜನರು ಕೂಡ ರೋಸಿ ಹೋಗಿದ್ದಾರೆ.
View this post on Instagram
ಇದನ್ನೂ ಓದಿ: ‘ಉರ್ಫಿ ಜಾವೇದ್ಗೆ ಕೆಟ್ಟ ಟೇಸ್ಟ್ ಇದೆ’; ಓಪನ್ ಆಗಿ ಹೇಳಿದ ನಟ ರಣಬೀರ್ ಕಪೂರ್
ಈಗ ಉರ್ಫಿ ಹೂವನ್ನೇ ಬಟ್ಟೆ ಮಾಡಿಕೊಂಡಿದ್ದಾರೆ. ಎದೆ ಭಾಗವನ್ನು ಕೈಯಲ್ಲಿ ಮುಚ್ಚಿಟ್ಟುಕೊಂಡಿದ್ದಾರೆ. ಸೊಂಟಕ್ಕೆ ಹಾಗೂ ತಲೆಗೆ ಮಲ್ಲಿಗೆ ಹೂವಿನ ಮಾಲೆ ಸುತ್ತುಕೊಂಡಿದ್ದಾರೆ. ಅವರ ಉಡುಗೆ ನೋಡಿದ ಅನೇಕರು ಕಣ್ಣರಳಿಸಿದ್ದಾರೆ. ‘ರಂಜಾನ್ ತಿಂಗಳಲ್ಲಾದರೂ ಸರಿಯಾದ ಬಟ್ಟೆ ಹಾಕಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಇನ್ನೂ ಕೆಲವರು ಮಲ್ಲಿಗೆ ಹೂವಿನ ಅಂದ ಹಾಳುಮಾಡಬೇಡಿ’ ಎಂದು ಕೋರಿದ್ದಾರೆ.
ಉರ್ಫಿಯನ್ನು ತಂದೆಯೇ ಪೋರ್ನ್ಸ್ಟಾರ್ ಎಂದು ಕರೆದಿದ್ದರು
‘ನನಗೆ 15 ವರ್ಷ ಆಗಿದ್ದಾಗ ಯಾರೋ ನನ್ನ ಫೋಟೋವನ್ನು ಅಶ್ಲೀಲ ಜಾಲತಾಣದಲ್ಲಿ ಅಪ್ಲೋಡ್ ಮಾಡಿದರು. ಅದು ತುಂಬ ಸರಳವಾದ ಫೋಟೋ ಆಗಿತ್ತು. ನನ್ನ ಫೇಸ್ಬುಕ್ ಖಾತೆಯಿಂದ ಅದನ್ನು ತೆಗೆದುಕೊಳ್ಳಲಾಗಿತ್ತು. ನನ್ನ ತಂದೆ ನನ್ನನ್ನು ಅಶ್ಲೀಲ ಸಿನಿಮಾ ನಟಿ ಎಂದರು. ಈ ವಿಷಯದಿಂದ ನನ್ನ ತಂದೆ ಸಿಂಪಥಿ ಗಿಟ್ಟಿಸಲು ಪ್ರಯತ್ನಿಸಿದ್ದರು. ಅಶ್ಲೀಲ ಜಾಲತಾಣದವರು 50 ಲಕ್ಷ ರೂಪಾಯಿ ಕೇಳುತ್ತಿದ್ದಾರೆ ಅಂತ ಎಲ್ಲರ ಬಳಿಯೂ ಅಪ್ಪ ಹೇಳುತ್ತಿದ್ದರು. ಅದೆಲ್ಲ ಅಸಾಧ್ಯ ಎಂದು ನಾನು ಹೇಳುತ್ತಿದ್ದೆ. ಯಾರೂ ನನ್ನ ಮಾತು ಕೇಳುತ್ತಿರಲಿಲ್ಲ. ಅವರೆಲ್ಲ ನನಗೆ ಹೊಡೆಯುತ್ತಿದ್ದರು’ ಎಂದು ಉರ್ಫಿ ಜಾವೇದ್ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ