ರೇಪ್​ ಸೀನ್​ ವಿಚಾರಕ್ಕೆ ಇಡೀ ಚಿತ್ರತಂಡದ ವಿರೋಧ ಕಟ್ಟಿಕೊಂಡಿದ್ದ ಜಯಾ ಬಚ್ಚನ್; ನಂತರ ಏನಾಯ್ತು?

ಜಯಾ ಬಚ್ಚನ್​ ತೀರ್ಮಾನದಿಂದ ನಿರ್ದೇಶಕರು ಗರಂ ಆದರು. ನಟಿಯ ವಿರುದ್ಧ ಕಲಾವಿದರ ಸಂಘಕ್ಕೆ ದೂರು ನೀಡುವುದಾಗಿಯೂ ನಿರ್ಮಾಪಕರು ಪಟ್ಟು ಹಿಡಿದಿದ್ದರು.

ರೇಪ್​ ಸೀನ್​ ವಿಚಾರಕ್ಕೆ ಇಡೀ ಚಿತ್ರತಂಡದ ವಿರೋಧ ಕಟ್ಟಿಕೊಂಡಿದ್ದ ಜಯಾ ಬಚ್ಚನ್; ನಂತರ ಏನಾಯ್ತು?
‘ಏಕ್​ ನಝರ್​’ ಪೋಸ್ಟರ್​
Follow us
|

Updated on:Apr 10, 2023 | 3:19 PM

​ಭಾರತೀಯ ಚಿತ್ರರಂಗದ ಖ್ಯಾತ ನಟಿ ಜಯಾ ಬಚ್ಚನ್ (Jaya Bachchan)​ ಅವರಿಗೆ ಏಪ್ರಿಲ್​ 9ರಂದು ಜನ್ಮದಿನದ ಸಂಭ್ರಮ. ಆ ಪ್ರಯುಕ್ತ ಅಭಿಮಾನಿಗಳು ನಟಿಯ ಹಳೇ ದಿನಗಳನ್ನು ಮೆಲುಕು ಹಾಕಿದ್ದಾರೆ. ಮದುವೆಗೂ ಮುನ್ನ ಅಮಿತಾಭ್​ ಬಚ್ಚನ್​ (Amitabh Bachchan) ಮತ್ತು ಜಯಾ ಅವರು ‘ಏಕ್​ ನಝರ್​’ (Ek Nazar) ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಆ ಸಿನಿಮಾದ ಕಥೆಯಲ್ಲಿ ಖಳನಾಯಕನು ಜಯಾ ಅವರ ಬಟ್ಟೆ ಹರಿದು, ಅತ್ಯಾಚ್ಯಾರ ಮಾಡುವಂತಹ ಸನ್ನಿವೇಶ ಇತ್ತು. ಆದರೆ ಬಟ್ಟೆ ಹರಿದುಕೊಂಡು ನಟಿಸಲು ಜಯಾ ಒಪ್ಪಲೇ ಇಲ್ಲ. ಈ ಘಟನೆಯಿಂದಾಗಿ ಅವರು ಇಡೀ ಚಿತ್ರತಂಡದ ವಿರೋಧ ಕಟ್ಟಿಕೊಳ್ಳಬೇಕಾಯಿತು. ಅಮಿತಾಭ್​ ಬಚ್ಚನ್​ ಅವರು ಸಂಧಾನಕ್ಕೆ ನಿಂತರೂ ಕೂಡ ಜಯಾ ಅದಕ್ಕೆಲ್ಲ ಒಪ್ಪಲೇ ಇಲ್ಲ. ಆ ಘಟನೆಯನ್ನು ಈ ಹಿಂದಿನ ಸಂದರ್ಶನವೊಂದರಲ್ಲಿ ಜಯಾ ಬಚ್ಚನ್​ ಅವರು ಹೇಳಿಕೊಂಡಿದ್ದರು.

ಜಯಾ ಬಚ್ಚನ್​ ಅವರದ್ದು ನೇರ ಮತ್ತು ನಿಷ್ಠುರವಾದ ವ್ಯಕ್ತಿತ್ವ. ತಮ್ಮ ನಿಲುವುಗಳ ವಿಚಾರದಲ್ಲಿ ಅವರು ಎಂದಿಗೂ ರಾಜಿ ಆಗುವವರಲ್ಲ. ಅದು 1972 ಸಮಯ. ‘ಏಕ್​ ನಜರ್​’ ಶೂಟಿಂಗ್​ ನಡೆಯುತ್ತಿದ್ದಾಗ ಅತ್ಯಾಚಾರದ ಸನ್ನಿವೇಶದಲ್ಲಿ ಬಟ್ಟೆ ಹರಿದುಕೊಂಡು ನಟಿಸಲು ಜಯಾ ನಿರಾಕರಿಸಿದರು. ಅದು ನಿರ್ದೇಶಕರ ಮತ್ತು ನಿರ್ಮಾಪಕರ ಕೋಪಕ್ಕೆ ಕಾರಣ ಆಯಿತು. ಜಯಾ ವಿರುದ್ಧ ಕಲಾವಿದರ ಸಂಘಕ್ಕೆ ದೂರು ನೀಡುವುದಾಗಿಯೂ ನಿರ್ಮಾಪಕರು ಪಟ್ಟು ಹಿಡಿದಿದ್ದರು. ಆಗಲೂ ಜಯಾ ಬಚ್ಚನ್​ ಅವರು ರಾಜಿ ಆಗಲೇ ಇಲ್ಲ.

ಇದನ್ನೂ ಓದಿ: ‘ಕೌನ್ ಬನೇಗಾ ಕರೋಡ್​ಪತಿ’ ಕಾರ್ಯಕ್ರಮಕ್ಕೆ ಜಯಾ ಬಚ್ಚನ್ ಎಂಟ್ರಿ; ಕಣ್ಣೀರು ಹಾಕಿದ ಅಮಿತಾಭ್  

ಇದನ್ನೂ ಓದಿ
Image
ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
Image
ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
Image
79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ
Image
ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ

ಈ ಜಟಾಪಟಿಯಿಂದಾಗಿ ಎರಡು ದಿನಗಳ ಕಾಲ ಶೂಟಿಂಗ್​ ನಿಂತಿತು. ಚಿತ್ರದ ನಾಯಕ ಅಮಿತಾಭ ಬಚ್ಚನ್​ ಅವರು ಆಗ ಮಾತುಕತೆಗೆ ಮುಂದಾದರು. ‘ಸ್ಕ್ರಿಪ್ಟ್​ನಲ್ಲಿ ಸನ್ನಿವೇಶ ಮತ್ತು ಪಾತ್ರವನ್ನು ಆ ರೀತಿ ಬರೆಯಲಾಗಿದೆ ಎಂದಮೇಲೆ ನೀವು ಹಾಗೆ ನಟಿಸಲೇಬೇಕಲ್ಲವೇ’ ಎಂದು ಅಮಿತಾಭ್​ ಬಚ್ಚನ್​ ಅವರು ಪ್ರಶ್ನಿಸಿದರು. ಆದರೂ ಕೂಡ ಜಯಾ ಒಪ್ಪಲೇ ಇಲ್ಲ.

ಇದನ್ನೂ ಓದಿ: ಮಾಸ್ಕ್​ ತೆಗೆಯಬೇಕು ಎಂದು ಜಯಾ ಬಚ್ಚನ್​ಗೆ ಒತ್ತಾಯ ಮಾಡಿದ ಕಾಜೋಲ್​; ನೆಟ್ಟಿಗರ​ ಪ್ರತಿಕ್ರಿಯೆ ಏನು?

ಎಕ್ಸ್​ಪೋಸ್​ ಮಾಡುವಂತಹ ಸನ್ನಿವೇಶಗಳಿಗೂ ಜಯಾ ಅವರು ನೋ ಎನ್ನುತ್ತಿದ್ದರು. ತಾವು ಮಧ್ಯಮ ವರ್ಗದಿಂದ ಬಂದಿದ್ದರಿಂದಲೇ ಈ ಮನಸ್ಥಿತಿ ರೂಢಿ ಆಗಿರಬಹುದು ಎಂದು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ‘ಏಕ್​ ನಝರ್​’ ಸಿನಿಮಾ ಬಳಿಕ 1973ರಲ್ಲಿ ಜಯಾ ಮತ್ತು ಅಮಿತಾಭ್​ ಬಚ್ಚನ್​ ಅವರು ‘ಝಂಜೀರ್​’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದರು. ಅದೇ ವರ್ಷ ಜೂನ್​ 3ರಂದು ಅವರಿಬ್ಬರು ಹಸೆಮಣೆ ಏರಿದರು. 50ಕ್ಕೂ ಅಧಿಕ ಸಿನಿಮಾಗಳಲ್ಲಿ ಜಯಾ ಬಚ್ಚನ್​ ಅವರು ನಟಿಸಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:19 pm, Mon, 10 April 23

ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ
ಪುನೀತ್ 3ನೇ ವರ್ಷದ ಪುಣ್ಯಸ್ಮರಣೆ; ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ
ಪುನೀತ್ 3ನೇ ವರ್ಷದ ಪುಣ್ಯಸ್ಮರಣೆ; ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ
ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ
ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ