AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rinku Singh: ರಿಂಕು ಸಿಂಗ್ ಆಟ ನೋಡಿ ಶಾರುಖ್​, ರಣವೀರ್, ಆರ್ಯನ್ ಹೇಳಿದ್ದೇನು ನೋಡಿ..

ರಿಂಕು ಸಿಂಗ್ ಬರೋಬ್ಬರಿ 5 ಸಿಕ್ಸ್ ಬಾರಿಸಿ ಕೆಕೆಆರ್​ಗೆ ಗೆಲುವನ್ನು ತಂದುಕೊಟ್ಟರು. ಕೆಕೆಆರ್​ ಮಾಲೀಕ ಶಾರುಖ್ ಖಾನ್, ಅವರ ಮಗ ಆರ್ಯನ್ ಖಾನ್, ರಣವೀರ್ ಸಿಂಗ್ ಹಾಗೂ ಮೊದಲಾದವರು ರಿಂಕು ಆಟವನ್ನು ಕೊಂಡಾಡಿದ್ದಾರೆ.

Rinku Singh: ರಿಂಕು ಸಿಂಗ್ ಆಟ ನೋಡಿ ಶಾರುಖ್​, ರಣವೀರ್, ಆರ್ಯನ್ ಹೇಳಿದ್ದೇನು ನೋಡಿ..
ಶಾರುಖ್​-ರಿಂಕು ಸಿಂಗ್
ರಾಜೇಶ್ ದುಗ್ಗುಮನೆ
|

Updated on: Apr 10, 2023 | 8:08 AM

Share

ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ನಡೆದ ಪಂದ್ಯ ಸಾಕಷ್ಟು ರೋಚಕತೆ ಮೂಡಿಸಿತ್ತು. ಕೊನೆಯ ಓವರ್​ನಲ್ಲಿ ಕೆಕೆಆರ್​​ಗೆ 29 ರನ್​ಗಳ ಅವಶ್ಯಕತೆ ಇತ್ತು. ಆಗ ಬ್ಯಾಟಿಂಗ್​ಗೆ ಇಳಿದ ರಿಂಕು ಸಿಂಗ್ ಬರೋಬ್ಬರಿ 5 ಸಿಕ್ಸ್ ಬಾರಿಸಿ ಕೆಕೆಆರ್​ಗೆ ಗೆಲುವನ್ನು ತಂದುಕೊಟ್ಟರು. ಈ ಮೂಲಕ ಕೆಕೆಆರ್​ಗೆ ಐತಿಹಾಸಿಕ ಗೆಲುವು ಸಿಕ್ಕಿತು. ರಿಂಕು ಸಿಂಗ್ (Rinku Singh) ನಿಜವಾದ ಹೀರೋ ಎನಿಸಿಕೊಂಡರು. ಕೆಕೆಆರ್​ ಮಾಲೀಕ ಶಾರುಖ್ ಖಾನ್, ಅವರ ಮಗ ಆರ್ಯನ್ ಖಾನ್, ರಣವೀರ್ ಸಿಂಗ್ ಹಾಗೂ ಮೊದಲಾದವರು ರಿಂಕು ಆಟವನ್ನು ಕೊಂಡಾಡಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ಬರೋಬ್ಬರಿ 204ರನ್​ ಕಲೆ ಹಾಕಿತು. ಈ ಬೃಹತ್​ ಮೊತ್ತ ಬೆನ್ನಟ್ಟಿದ ಕೆಕೆಆರ್​ಗೆ ಒಳ್ಳೆಯ ಆರಂಭ ಸಿಕ್ಕಿತು. 40 ಎಸೆತಗಳಲ್ಲಿ ವೆಂಕಟೇಶ್ ಅಯ್ಯರ್ 5 ಸಿಕ್ಸ್ ಹಾಗು 8 ಫೋರ್​ನೊಂದಿಗೆ 83 ರನ್ ​ಗಳಿಸಿ ಔಟಾದರು. ನಿತೀಶ್ ರಾಣಾ ಕೂಡ ತಂಡಕ್ಕೆ ಆಸರೆ ಆದರು. ಇತ್ತ ಜಿಟಿ ಬೌಲರ್ ರಶೀದ್ ಖಾನ್ ಹ್ಯಾಟ್ರಿಕ್ ವಿಕೆಟ್ ತೆಗೆಯುವ ಮೂಲಕ ಗುಜರಾತ್ ಟೈಟಾನ್ಸ್​ಗೆ ಗೆಲುವನ್ನು ತಂಡುಕೊಡುವ ಭರವಸೆ ಇತ್ತರು. ಆದರೆ, ರೋಚಕ ಕೊನೆಯ ಓವರ್​ನಲ್ಲಿ ಆಟದ ಗತಿಯೇ ಬದಲಾಯಿತು.

ಇದನ್ನೂ ಓದಿ: Rinku Singh: ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ರೋಚಕ ಜಯ ತಂದುಕೊಟ್ಟ ರಿಂಕು ಸಿಂಗ್

ಶಾರುಖ್ ಖಾನ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಜೂಮೆ ಜೋ ಪಠಾಣ್​..’ ಬದಲು ‘ಜೂಮೆ ಜೋ ರಿಂಕು..’ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ‘ಮೈ ಬೇಬಿ ರಿಂಕು’ ಎಂದು ಕರೆದಿದ್ದಾರೆ. ರಣವೀರ್ ಸಿಂಗ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ರಿಂಕು.. ರಿಂಕು.. ರಿಂಕು..’ ಎಂದು ಚಿಯರ್ ಮಾಡಿದ್ದಾರೆ. ರಿಂಕು ಅವರ ಫೋಟೋ ಅನ್ನು ಸ್ಟೇಟಸ್​ನಲ್ಲಿ ಹಾಕಿ ‘ಬೀಸ್ಟ್​’ ಎಂದು ಆರ್ಯನ್ ಖಾನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: IPL 2023: ಹಿಂದೆಂದೂ ಕಂಡರಿಯದ ಚೇಸಿಂಗ್: ಐಪಿಎಲ್​ನಲ್ಲಿ ದಾಖಲೆ ನಿರ್ಮಿಸಿದ ರಿಂಕು ಸಿಂಗ್

ಸಿನಿಮಾ ವಿಚಾರಕ್ಕೆ ಬರೋದಾದರೆ, ಶಾರುಖ್ ಖಾನ್ ಅವರು ‘ಪಠಾಣ್’ ಗೆಲುವಿನ ಖುಷಿಯಲ್ಲಿದ್ದಾರೆ. ‘ಜವಾನ್​’ ಹಾಗೂ ‘ಡಂಕಿ’ ಸಿನಿಮಾಗಳ ಶೂಟ್​​​ನಲ್ಲಿ ಬ್ಯುಸಿ ಇದ್ದಾರೆ. ಇದರ ಮಧ್ಯೆ ಬಿಡುವು ಮಾಡಿಕೊಂಡುಬಂದು ಕೆಕೆಆರ್ ಮ್ಯಾಚ್ ವೀಕ್ಷಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​