15ರ ಬಾಲಕಿ ಆಗಿದ್ದಾಗಲೇ ಅಶ್ಲೀಲ ಜಾಲತಾಣದಲ್ಲಿ ಬಂದಿತ್ತು ಉರ್ಫಿ ಜಾವೇದ್ ಫೋಟೋ; ಎದುರಿಸಿದ ಕಷ್ಟ ಒಂದೆರಡಲ್ಲ
Uorfi Javed: ಅಕ್ಕಪಕ್ಕದವರು ಮಾತ್ರವಲ್ಲದೇ ಸ್ವಂತ ಕುಟುಂಬದವರಿಂದಲೂ ಉರ್ಫಿ ಜಾವೇದ್ ಅವರಿಗೆ ಕಿರಿಕಿರಿ ಆಗುತ್ತಿತ್ತು. ಆ ಘಟನೆ ಬಗ್ಗೆ ಅವರೀಗ ಮಾತನಾಡಿದ್ದಾರೆ.
ನಟಿ ಉರ್ಫಿ ಜಾವೇದ್ (Uorfi Javed) ಅವರು ಅರೆಬರೆ ಬಟ್ಟೆ ಧರಿಸಿಯೇ ಫೇಮಸ್ ಆಗಿದ್ದಾರೆ. ‘ಬಿಗ್ ಬಾಸ್ ಹಿಂದಿ ಒಟಿಟಿ’ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಜನಪ್ರಿಯತೆ ಹೆಚ್ಚಾಯಿತು. ಕಿರುತೆರೆಯಲ್ಲಿ ಮಿಂಚಿದ್ದಕ್ಕಿಂತಲೂ ವಿಚಿತ್ರವಾದ ಬಟ್ಟೆ ಹಾಕಿಕೊಂಡೇ ಅವರು ಹೆಚ್ಚು ವೈರಲ್ ಆಗಿದ್ದಾರೆ. ಈಗ ಅವರನ್ನು ಅನೇಕರು ವಿರೋಧಿಸುತ್ತಾರೆ ಎಂಬುದು ನಿಜ. ಆದರೆ ಉರ್ಫಿ ಜಾವೇದ್ ಬದುಕಿನಲ್ಲಿ ಅನೇಕ ಕಹಿ ಘಟನೆಗಳು ನಡೆದಿವೆ. ಆ ಬಗ್ಗೆ ‘ಹೂಮನ್ಸ್ ಆಫ್ ಬಾಂಬೆ’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. 15 ವರ್ಷದ ಬಾಲಕಿ ಆಗಿದ್ದಾಗಲೇ ಉರ್ಫಿ ಜಾವೇದ್ ಅವರ ಫೋಟೋವನ್ನು (Urfi Javed photo) ಯಾರೋ ಕಿಡಿಗೇಡಿಗಳು ಅಶ್ಲೀಲ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದರು. ಇದರಿಂದ ಉರ್ಫಿ ಜಾವೇದ್ ಅನೇಕ ತೊಂದರೆ ಅನುಭವಿಸಬೇಕಾಯಿತು.
‘ನನಗೆ 15 ವರ್ಷ ಆಗಿದ್ದಾಗ ಯಾರೋ ನನ್ನ ಫೋಟೋವನ್ನು ಅಶ್ಲೀಲ ಜಾಲತಾಣದಲ್ಲಿ ಅಪ್ಲೋಡ್ ಮಾಡಿದರು. ಅದು ತುಂಬ ಸರಳವಾದ ಫೋಟೋ ಆಗಿತ್ತು. ನನ್ನ ಫೇಸ್ಬುಕ್ ಖಾತೆಯಿಂದ ಅದನ್ನು ತೆಗೆದುಕೊಳ್ಳಲಾಗಿತ್ತು. ನಿಧಾನವಾಗಿ ಆ ಫೋಟೋ ಎಲ್ಲರಿಗೂ ಕಾಣಿಸಲು ಆರಂಭ ಆಯಿತು. ಎಲ್ಲರೂ ನನ್ನನ್ನು ಅಶ್ಲೀಲ ಸಿನಿಮಾ ನಟಿ ಎಂದು ಕರೆಯಲು ಶುರುಮಾಡಿದರು. ನನ್ನ ವಿಡಿಯೋ ಎಲ್ಲಿದೆ ಅಂತ ನಾನು ಪ್ರಶ್ನಿಸಿದೆ. ಆದರೂ ಕೂಡ ನೀನು ನೀಲಿಚಿತ್ರದ ನಟಿ ಅಂತಲೇ ಜನರು ವಾದಿಸಿದರು’ ಎಂದಿದ್ದಾರೆ ಉರ್ಫಿ ಜಾವೇದ್.
‘ಉರ್ಫಿ ಜಾವೇದ್ಗೆ ಕೆಟ್ಟ ಟೇಸ್ಟ್ ಇದೆ’; ಓಪನ್ ಆಗಿ ಹೇಳಿದ ನಟ ರಣಬೀರ್ ಕಪೂರ್
ಅಕ್ಕಪಕ್ಕದವರು ಮಾತ್ರವಲ್ಲದೇ ಸ್ವಂತ ಕುಟುಂಬದವರಿಂದಲೂ ಉರ್ಫಿ ಜಾವೇದ್ ಅವರಿಗೆ ಕಿರಿಕಿರಿ ಆಗುತ್ತಿತ್ತು. ‘ನನ್ನ ತಂದೆ ಕೂಡ ನನ್ನನ್ನು ಅಶ್ಲೀಲ ಸಿನಿಮಾ ನಟಿ ಎಂದರು. ಈ ವಿಷಯದಿಂದ ನನ್ನ ತಂದೆ ಸಿಂಪಥಿ ಗಿಟ್ಟಿಸಲು ಪ್ರಯತ್ನಿಸಿದ್ದರು. ಅಶ್ಲೀಲ ಜಾಲತಾಣದವರು 50 ಲಕ್ಷ ರೂಪಾಯಿ ಕೇಳುತ್ತಿದ್ದಾರೆ ಅಂತ ಎಲ್ಲರ ಬಳಿಯೂ ಅಪ್ಪ ಹೇಳುತ್ತಿದ್ದರು. ಅದೆಲ್ಲ ಅಸಾಧ್ಯ ಎಂದು ನಾನು ಹೇಳುತ್ತಿದ್ದೆ. ಯಾರೂ ನನ್ನ ಮಾತು ಕೇಳುತ್ತಿರಲಿಲ್ಲ. ಅವರೆಲ್ಲ ನನಗೆ ಹೊಡೆಯುತ್ತಿದ್ದರು’ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.
Urfi Javed: ಕುತ್ತಿಗೆ ತನಕ ಪ್ಯಾಂಟ್ ಧರಿಸಿ ಬಂದ ಉರ್ಫಿ ಜಾವೇದ್; ವಿಚಿತ್ರ ಅವತಾರದ ಫೋಟೋ ವೈರಲ್
ಎರಡು ವರ್ಷಗಳ ಕಾಲ ಉರ್ಫಿ ಜಾವೇದ್ ಅವರು ಇದನ್ನೆಲ್ಲ ಸಹಿಸಿಕೊಂಡರು. ಆದರೆ 17ನೇ ವಯಸ್ಸಿನಲ್ಲಿ ಅವರು ಮನೆ ಬಿಟ್ಟುಬಂದರು. ಮೊದಲು ಲಖನೌಗೆ ತೆರಳಿದರು. ಅಲ್ಲಿ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದರು. ಬಳಿಕ ದೆಹಲಿಗೆ ಹೋಗಿ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡಿದರು. ನಂತರ ಮುಂಬೈಗೆ ಬಂದು ಕಿರುತೆರೆಯಲ್ಲಿ ಆಡಿಷನ್ ನೀಡಿ ಚಿಕ್ಕ-ಪುಟ್ಟ ಪಾತ್ರಗಳ ಅವಕಾಶ ಪಡೆದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:32 am, Sun, 9 April 23