‘ಕ್ರಿಶ್​ 4’ ಚಿತ್ರದಿಂದ ಹೊರಬಂದ ಹೃತಿಕ್ ರೋಷನ್ ತಂದೆ​? ಗಟ್ಟಿ ನಿರ್ಧಾರ ತೆಗೆದುಕೊಂಡ ರಾಕೇಶ್

‘ಕ್ರಿಶ್ 4’ ಅನೌನ್ಸ್​ ಆಗಿ ಎರಡು ವರ್ಷ ಕಳೆದರೂ ಸಿನಿಮಾ ಕೆಲಸ ಆರಂಭ ಆಗಿಲ್ಲ. ಮೂಲಗಳ ಪ್ರಕಾರ ರಾಕೇಶ್ ರೋಷನ್ ಅವರು ಸಿನಿಮಾ ನಿರ್ದೇಶನದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

‘ಕ್ರಿಶ್​ 4’ ಚಿತ್ರದಿಂದ ಹೊರಬಂದ ಹೃತಿಕ್ ರೋಷನ್ ತಂದೆ​? ಗಟ್ಟಿ ನಿರ್ಧಾರ ತೆಗೆದುಕೊಂಡ ರಾಕೇಶ್
ಕ್ರಿಶ್-ಸಿದ್ದಾರ್ಥ್ ಆನಂದ್
Follow us
ರಾಜೇಶ್ ದುಗ್ಗುಮನೆ
|

Updated on:Apr 15, 2023 | 2:06 PM

ಭಾರತೀಯ ಸಿನಿಮಾರಂಗದಲ್ಲಿ ಸೂಪರ್​ ಹೀರೋ ಕಾನ್ಸೆಪ್ಟ್ ಕುರಿತು ಬಂದ ಸಿನಿಮಾಗಳ ಸಂಖ್ಯೆ ತುಂಬಾನೇ ಕಡಿಮೆ. ಸೂಪರ್ ಹೀರೋ ಕಾನ್ಸೆಪ್ಟ್​ನ ಚೆನ್ನಾಗಿ ಪರಿಚಯಿಸಿದ ಖ್ಯಾತಿ ರಾಕೇಶ್ ರೋಷನ್​ಗೆ ಸಲ್ಲಿಕೆ ಆಗುತ್ತದೆ. ಸೂಪರ್ ಹೀರೋ ಸಿನಿಮಾ ‘ಕ್ರಿಶ್’ (Krish Movie) ನೋಡಿ ಸಿನಿಪ್ರಿಯರು ಮೆಚ್ಚಿಕೊಂಡರು. ಈ ಚಿತ್ರಕ್ಕೆ ಸೀಕ್ವೆಲ್​ ಕೂಡ ಬಂತು. ‘ಕ್ರಿಶ್​ 4’ ಬಗ್ಗೆ 2021ರಲ್ಲೇ ಅಪ್​ಡೇಟ್ ಸಿಕ್ಕಿತ್ತು. ಆದರೆ, ಈ ಸಿನಿಮಾ ಕೆಲಸಗಳು ಇನ್ನೂ ಆರಂಭ ಆಗಿಲ್ಲ. ಮೂಲಗಳ ಪ್ರಕಾರ ‘ಕ್ರಿಶ್’ ಚಿತ್ರದ ನಾಲ್ಕನೇ ಪಾರ್ಟ್​ಗೆ ‘ಪಠಾಣ್​’ (Pathaan Movie) ಖ್ಯಾತಿಯ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

‘ಕೋಯಿ ಮಿಲ್​ ಗಯಾ’ ಚಿತ್ರವನ್ನು ರಾಕೇಶ್ ರೋಷನ್ ನಿರ್ದೇಶನ ಮಾಡಿದರು. ಮಗ ಹೃತಿಕ್ ಈ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಇದರ ಸೀಕ್ವೆಲ್​ ಆಗಿ ‘ಕ್ರಿಶ್’ ತೆರೆಗೆ ಬಂದು ಯಶಸ್ಸು ಕಂಡಿತು. ‘ಕ್ರಿಶ್ 3’ ಕೂಡ ನಿರ್ಮಾಪಕರಿಗೆ ಲಾಭ ತಂದುಕೊಟ್ಟಿತು. ಈ ಕಾರಣಕ್ಕೆ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ರಾಕೇಶ್ ಅವರು ‘ಕ್ರಿಶ್ 4’ ಮಾಡುವ ಘೋಷಣೆ ಮಾಡಿದರು. ಆದರೆ ಅನೌನ್ಸ್​ ಆಗಿ ಎರಡು ವರ್ಷ ಕಳೆದರೂ ಸಿನಿಮಾ ಕೆಲಸ ಆರಂಭ ಆಗಿಲ್ಲ. ಮೂಲಗಳ ಪ್ರಕಾರ ರಾಕೇಶ್ ರೋಷನ್ ಅವರು ಸಿನಿಮಾ ನಿರ್ದೇಶನದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

ರಾಕೇಶ್ ರೋಷನ್​ಗೆ ಈಗ 73 ವರ್ಷ ವಯಸ್ಸು. ಅವರು ಕ್ಯಾನ್ಸರ್ ಕೂಡ ಗೆದ್ದು ಬಂದಿದ್ದಾರೆ. ಈ ವಯಸ್ಸಿನಲ್ಲಿ ಆ್ಯಕ್ಷನ್ ಸಿನಿಮಾ ನಿರ್ದೇಶನ ಮಾಡೋದು ಒಂದು ಚಾಲೆಂಜ್. ಈ ರೀತಿಯ ಸಿನಿಮಾ ಮಾಡೋಕೆ ಸಾಕಷ್ಟು ಶ್ರಮ ಬೇಕಾಗುತ್ತದೆ. ಆರೋಗ್ಯದ ಬಗ್ಗೆ ಅವರು ಹೆಚ್ಚು ಗಮನ ಹರಿಸುತ್ತಿರುವುದರಿಂದ ಈ ಸಿನಿಮಾ ನಿರ್ದೇಶನ ಸಾಧ್ಯವಿಲ್ಲ. ಹೀಗಾಗಿ, ಅವರು ನಿರ್ಮಾಣದಲ್ಲಿ ಮಾತ್ರ ತೊಡಗಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪೃಥ್ವಿ ಅಂಬರ್​-ಮಾನ್ವಿತಾ ಕಾಮತ್​ ಈಗ ‘ಹ್ಯಾಪಿಲಿ ಮ್ಯಾರೀಡ್’

ಸಿದ್ದಾರ್ಥ್ ಅವರು ಆ್ಯಕ್ಷನ್ ಸಿನಿಮಾ ಮಾಡಿ ಗೆದ್ದಿದ್ದಾರೆ. ಅವರ ನಿರ್ದೇಶನದ ‘ವಾರ್​’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಗೆದ್ದಿತ್ತು. ‘ಪಠಾಣ್​’ ಚಿತ್ರ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಹೀಗಾಗಿ ಆ್ಯಕ್ಷನ್ ಸಿನಿಮಾ ಮಾಡಬೇಕು ಎಂದು ಕಾದಿರುವ ನಿರ್ಮಾಪಕರು ಸಿದ್ದಾರ್ಥ್ ಅವರನ್ನು ಸಂಪರ್ಕಿಸುತ್ತಿದ್ದಾರೆ. ಸೂಪರ್ ಹೀರೋ ಕಾನ್ಸೆಪ್ಟ್​ ಇರುವ ‘ಕ್ರಿಶ್ 4’ ಚಿತ್ರಕ್ಕೂ ಸಿದ್ದಾರ್ಥ್ ನಿರ್ದೇಶನ ಮಾಡಿದರೆ ಉತ್ತಮ ಎನ್ನುವ ಅಭಿಪ್ರಾಯ ರಾಕೇಶ್ ಅವರದ್ದು. ಈ ಕಾರಣಕ್ಕೆ ಇಬ್ಬರೂ ಕುಳಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷ ರಿಲೀಸ್ ಆದ ಹೃತಿಕ್ ನಟನೆಯ ‘ವಿಕ್ರಮ್ ವೇದ’ ಯಶಸ್ಸು ಕಂಡಿಲ್ಲ. ‘ಫೈಟರ್​’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಅವರಿಗೆ ದೀಪಿಕಾ ಪಡುಕೋಣೆ ಜೊತೆಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:05 pm, Sat, 15 April 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ