AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿನಗೆಂದೂ ನಾಯಕಿ ಪಾತ್ರ ಸಿಗುವುದಿಲ್ಲ’ ಗಿರೀಶ್ ಕಾರ್ನಾಡ್ ಹೇಳಿದ್ದ ಮಾತು ನೆನಪಿಸಿಕೊಂಡ ನೀನಾ ಗುಪ್ತಾ

Girish Karnad: ಬಾಲಿವುಡ್​ನ ಜನಪ್ರಿಯ ನಟಿ ನೀನಾ ಗುಪ್ತಾ, ನಾಲ್ಕು ದಶಕದ ಹಿಂದೆ ಕನ್ನಡದ ಖ್ಯಾತ ಸಾಹಿತಿ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ಅವರು ತಮಗೆ ಹೇಳಿದ್ದ ಮಾತೊಂದನ್ನು ಇತ್ತೀಚೆಗೆ ನೆನಪು ಮಾಡಿಕೊಂಡಿದ್ದಾರೆ.

‘ನಿನಗೆಂದೂ ನಾಯಕಿ ಪಾತ್ರ ಸಿಗುವುದಿಲ್ಲ’ ಗಿರೀಶ್ ಕಾರ್ನಾಡ್ ಹೇಳಿದ್ದ ಮಾತು ನೆನಪಿಸಿಕೊಂಡ ನೀನಾ ಗುಪ್ತಾ
ಗಿರೀಶ್ ಕಾರ್ನಾಡ್
ಮಂಜುನಾಥ ಸಿ.
|

Updated on:Nov 08, 2023 | 7:33 PM

Share

ನೀನಾ ಗುಪ್ತಾ (Neena Gupta) ಬಾಲಿವುಡ್​ನ ಹಿರಿಯ ನಟಿ. ನಾಲ್ಕು ದಶಕಗಳಿಂದಲೂ ಚಿತ್ರರಂಗದಲ್ಲಿರುವ ನೀನಾ ಗುಪ್ತಾ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸುತ್ತಲೇ ಬಂದಿದ್ದಾರೆ. ಈಗಲೂ ಸಹ ಬಾಲಿವುಡ್​ನ ಬೇಡಿಕೆಯ ಪೋಷಕ ನಟಿ ನೀನಾ. ವೆಸ್ಟ್ ಇಂಡೀಸ್ ದೈತ್ಯ ಕ್ರಿಕೆಟಿಗ ವಿವಿಯನ್ ರಿಚರ್ಡ್ ಜೊತೆಗಿನ ಪ್ರೇಮ ಸಂಬಂಧದಿಂದಲೂ ನೀನಾ ಗುಪ್ತಾ ಸಾಕಷ್ಟು ಸುದ್ದಿಯಲ್ಲಿದ್ದರು. ದೇಶದ ಪ್ರಖ್ಯಾತ ನಟನಾ ತರಬೇತಿ ಶಾಲೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ವಿದ್ಯಾರ್ಥಿನಿಯಾಗಿದ್ದ ನೀನಾ ಗುಪ್ತಾ ಅವರಿಗೆ ಕನ್ನಡದ ಪ್ರಖ್ಯಾತ ಸಾಹಿತಿ, ನಟ, ನಿರ್ದೇಶಕ ಗಿರೀಶ್ ಕಾನಾರ್ಡ್ ಅವರ ಪರಿಚಯವಿತ್ತು. ಗಿರೀಶ್ ಅವರು, ತಮ್ಮ ಬಗ್ಗೆ ದಶಕಗಳ ಹಿಂದೆ ಹೇಳಿದ್ದ ಮಾತನ್ನು ನೀನಾ ಈಗ ನೆನಪು ಮಾಡಿಕೊಂಡಿದ್ದಾರೆ.

ನೀನಾ ಗುಪ್ತಾ, ಎನ್​ಎಸ್​ಡಿಯಲ್ಲಿ ಅಭಿನಯ ತರಬೇತಿ ಪಡೆದು ಸಿನಿಮಾಗಳಲ್ಲಿ ಅವಕಾಶ ಅರಸಿ ಬಂದಾಗ ಅವರಿಗೆ ಭ್ರಮೆ ಇತ್ತಂತೆ, ನನ್ನನ್ನು ಸಿನಿಮಾ ಅವಕಾಶಗಳ ರಾಶಿಯೇ ಬಂದು ಬೀಳುತ್ತದೆ ಎಂದು ಆದರೆ ಹಾಗೆ ಆಗಲಿಲ್ಲವಂತೆ. ಬಹಳ ಕಷ್ಟಪಟ್ಟು 1982ರಲ್ಲಿ ‘ಸಾತ್-ಸಾತ್’ ಹೆಸರಿನ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು ನೀನಾ, ಆ ಸಿನಿಮಾದಲ್ಲಿ ಅವರದ್ದು ಹಾಸ್ಯ ಪಾತ್ರ. ದೊಡ್ಡ ಚಾಳಿಸು ಧರಿಸಿ ಚಿತ್ರಿ-ವಿಚಿತ್ರವಾಗಿ ಮಾತನಾಡುತ್ತಾ ನಗಿಸುವ ಪಾತ್ರ.

ಇದನ್ನೂ ಓದಿ:ದೋಸೆ, ದೋಸಾ ಡೋಸಾ ಚರ್ಚೆ ಹುಟ್ಟುಹಾಕಿದ ನಟಿ ನೀನಾ ಗುಪ್ತಾ ವಿಡಿಯೋ

ಆ ಸಿನಿಮಾ ಬಿಡುಗಡೆ ಆದಾಗ ಗಿರೀಶ್ ಕಾರ್ನಾಡ್ ಅವರು ನೀನಾ ಗುಪ್ತಾ ಅವರಿಗೆ ಹೇಳಿದ್ದರಂತೆ, ‘ಈ ಸಿನಿಮಾದ ಬಳಿಕ ನೀನೆಂದೂ ನಾಯಕಿ ಆಗಲಾರೆ. ನಾಯಕಿ ಪಾತ್ರ ನಿನಗೆ ಸಿಗುವುದೇ ಇಲ್ಲ. ಹಾಸ್ಯ ಪಾತ್ರದಲ್ಲಿ ನಟಿಸಿದ ಬಳಿಕ ಅದೇ ರೀತಿಯ ಪಾತ್ರಕ್ಕೆ ನಿನ್ನನ್ನು ಬ್ರ್ಯಾಂಡ್ ಮಾಡುತ್ತಾರೆ ಎಂದಿದ್ದರಂತೆ ಕಾರ್ನಾಡರು. ಅವರ ಮಾತು ನಿಜವೇ ಆಯಿತು. ‘ಸಾಥ್-ಸಾಥ್’ ಸಿನಿಮಾ ಹಿಟ್ ಆಯಿತು, ಆದರೆ ಆ ಸಿನಿಮಾದ ಬಳಿಕ ಸತತವಾಗಿ ಅದೇ ರೀತಿಯ ಪಾತ್ರಗಳೇ ನನಗೆ ಬರುತ್ತಿದ್ದವು. ಅದೇ ರೀತಿಯ ಬಟ್ಟೆ, ಅದೇ ರೀತಿಯ ಚಾಳಿಸು ಧರಿಸುವ ಪಾತ್ರಗಳೇ ಸತತವಾಗಿ ಬಂದವು. ಹಲವು ವರ್ಷ ನನಗೆ ಸೂಕ್ತ ಪಾತ್ರಗಳೇ ದೊರಕಲಿಲ್ಲ” ಎಂದು ಹೇಳಿಕೊಂಡಿದ್ದಾರೆ ನೀನಾ ಗುಪ್ತಾ.

ಎರಡು ರಾಷ್ಟ್ರಪ್ರಶಸ್ತಿ ಸೇರಿದಂತೆ ತಮ್ಮ ಅತ್ಯುತ್ತಮ ನಟನೆಗೆ ಹಲವು ಪ್ರಶಸ್ತಿಗಳನ್ನು ನೀನಾ ಗುಪ್ತಾ ಪಡೆದಿದ್ದಾರೆ. ಕಮರ್ಷಿಯಲ್ ಸಿನಿಮಾಗಳು ಮಾತ್ರವಲ್ಲದೆ ಹಲವು ಕಲಾತ್ಮಕ ಸಿನಿಮಾಗಳು, ಪ್ರಯೋಗಾತ್ಮಕ ಸಿನಿಮಾಗಳು, ವೆಬ್ ಸರಣಿ, ಟಿವಿ ಧಾರಾವಾಹಿ, ಡಾಕ್ಯುಮೆಂಟರಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ಕೆಲ ಟಿವಿ ಶೋಗಳಿಗೆ ಬರಹಾರ್ತಿಯಾಗಿಯೂ ನೀನಾ ಗುಪ್ತಾ ಕೆಲಸ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:30 pm, Wed, 8 November 23

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!