AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Boney Kapoor: ‘ಶ್ರೀದೇವಿಯದ್ದು ಸಹಜ ಸಾವಲ್ಲ’: ಕೊನೆಗೂ ಮೌನ ಮುರಿದು ಕಾರಣ ತಿಳಿಸಿದ ಪತಿ ಬೋನಿ ಕಪೂರ್​

Sridevi Death Reason: ‘ಶ್ರೀದೇವಿ ಸಾವಿನ ಕುರಿತು ವಿಚಾರಣೆ ವೇಳೆ ನಾನು 48 ಗಂಟೆಗಳ ಕಾಲ ಮಾತನಾಡಿದ್ದೆ. ಹಾಗಾಗಿ ಮತ್ತೆ ಮಾತನಾಡುವುದು ಬೇಡ ಎಂದು ನಿರ್ಧರಿಸಿದೆ. ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಅನೇಕ ಟೆಸ್ಟ್​ಗಳಿಗೆ ನಾನು ಒಳಗಾದೆ. ಕೊನೆಗೂ ವರದಿಯಲ್ಲಿ ಅದು ಆ್ಯಕ್ಸಿಡೆಂಟಲ್​ ಸಾವು ಎಂಬುದು ತಿಳಿಯಿತು’ ಎಂದು ಬೋನಿ ಕಪೂರ್ ಹೇಳಿದ್ದಾರೆ.

Boney Kapoor: ‘ಶ್ರೀದೇವಿಯದ್ದು ಸಹಜ ಸಾವಲ್ಲ’: ಕೊನೆಗೂ ಮೌನ ಮುರಿದು ಕಾರಣ ತಿಳಿಸಿದ ಪತಿ ಬೋನಿ ಕಪೂರ್​
ಶ್ರೀದೇವಿ, ಬೋನಿ ಕಪೂರ್​
Follow us
ಮದನ್​ ಕುಮಾರ್​
|

Updated on: Oct 02, 2023 | 10:33 PM

ಖ್ಯಾತ ನಟಿ ಶ್ರೀದೇವಿ (Sridevi) ಅವರ ಸಾವಿನ ಬಗ್ಗೆ ಜನರಿಗೆ ಹಲವು ಅನುಮಾನಗಳಿವೆ. 2018ರ ಫೆಬ್ರವರಿ 24ರಂದು ದುಬೈನಲ್ಲಿ ಅವರು ನಿಧನರಾದರು. ಸ್ಟಾರ್​ ಹೋಟೆಲ್​ನ ಬಾತ್​ಟಬ್​ನಲ್ಲಿ ಮುಳುಗಿ ಅವರು ಕೊನೆಯುಸಿರು ಎಳೆದರು ಎಂಬುದನ್ನು ತಿಳಿದು ಇಡೀ ಚಿತ್ರರಂಗಕ್ಕೆ ಮತ್ತು ಅಭಿಮಾನಿಗಳಿಗೆ ಆಘಾತ ಆಯಿತು. ಆ ಘಟನೆ ನಡೆದು ಇಷ್ಟು ವರ್ಷಗಳು ಕಳೆದ ಬಳಿಕ ಮೊದಲ ಬಾರಿಗೆ ಶ್ರೀದೇವಿ ಪತಿ ಬೋನಿ ಕಪೂರ್​ (Boney Kapoor) ಅವರು ಮೌನ ಮುರಿದಿದ್ದಾರೆ. ಪತ್ನಿಯ ಸಾವಿನ ಬಗ್ಗೆ ಅವರು ಮಾತನಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತಾವು ಸುದೀರ್ಘವಾದ ವಿಚಾರಣೆಗೆ ಒಳಪಟ್ಟಿರುವುದಾಗಿ ಬೋನಿ ಕಪೂರ್​ ತಿಳಿಸಿದ್ದಾರೆ. ಅಲ್ಲದೇ ಶ್ರೀದೇವಿಯ ಸಾವಿಗೆ (Sridevi Death) ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಬೋನಿ ಕಪೂರ್​ಗೆ ಸುಳ್ಳು ಪತ್ತೆ ಪರೀಕ್ಷೆ:

‘ದಿ ನ್ಯೂ ಇಂಡಿಯನ್​’ಗೆ ನೀಡಿದ ಸಂದರ್ಶನದಲ್ಲಿ ಬೋನಿ ಕಪೂರ್​ ಅವರು ಈ ವಿಚಾರ ತಿಳಿಸಿದ್ದಾರೆ. ‘ಶ್ರೀದೇವಿಯದ್ದು ಸಹಜ ಸಾವಲ್ಲ. ಅದು ಅನಾಹುತದ ಸಾವು. ಈ ಕುರಿತು ವಿಚಾರಣೆ ವೇಳೆ ನಾನು 48 ಗಂಟೆಗಳ ಕಾಲ ಮಾತನಾಡಿದ್ದೆ. ಹಾಗಾಗಿ ಮತ್ತೆ ಮಾತನಾಡುವುದು ಬೇಡ ಎಂದು ನಿರ್ಧರಿಸಿದೆ. ಭಾರತದ ಮಾಧ್ಯಮಗಳಿಂದ ಸಾಕಷ್ಟು ಒತ್ತಡ ಬರುತ್ತಿದೆ ಎಂಬ ಕಾರಣಕ್ಕೆ ಈ ರೀತಿ ವಿಚಾರಣೆಗೆ ಒಳಗಾಗಬೇಕು ಎಂದು ಅಲ್ಲಿನ ಅಧಿಕಾರಿಗಳು ನನಗೆ ಹೇಳಿದರು. ಕೊಲೆ ಪ್ರಯತ್ನ ನಡೆದಿಲ್ಲ ಎಂಬುದು ಅವರಿಗೆ ತಿಳಿಯಿತು. ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಅನೇಕ ಟೆಸ್ಟ್​ಗಳಿಗೆ ನಾನು ಒಳಗಾದೆ. ಕೊನೆಗೂ ವರದಿಯಲ್ಲಿ ಅದು ಆ್ಯಕ್ಸಿಡೆಂಟಲ್​ ಸಾವು ಎಂಬುದು ತಿಳಿಯಿತು’ ಎಂದು ಬೋನಿ ಕಪೂರ್ ಹೇಳಿದ್ದಾರೆ.

ಶ್ರೀದೇವಿ 2ನೇ ಮಗಳು ಚಿತ್ರರಂಗಕ್ಕೆ ಎಂಟ್ರಿ; ಖುಷಿ ಸಿನಿಮಾ ಬಗ್ಗೆ ಮಾಹಿತಿ ನೀಡಿದ ತಂದೆ ಬೋನಿ ಕಪೂರ್​

ಶ್ರೀದೇವಿ ಸಾವಿಗೆ ಕಾರಣ ಏನು?

ಚೆನ್ನಾಗಿ ಕಾಣಬೇಕು ಎಂಬ ಕಾರಣಕ್ಕೆ ಶ್ರೀದೇವಿ ಪಾಲಿಸುತ್ತಿದ್ದ ಡಯೆಟ್​ನಿಂದಾಗಿ ಈ ಸಾವು ಸಂಭವಿಸಿದೆ ಎಂದು ಬೋನಿ ಕಪೂರ್ ಹೇಳಿದ್ದಾರೆ. ‘ಶ್ರೀದೇವಿ ಯಾವಾಗಲೂ ಉಪವಾಸ ಮಾಡುತ್ತಿದ್ದರು. ತೆರೆ ಮೇಲೆ ಚೆನ್ನಾಗಿ ಕಾಣಬೇಕು, ದೇಹದ ಶೇಪ್​ ಚೆನ್ನಾಗಿ ಇರಬೇಕು ಎಂಬ ಕಾರಣಕ್ಕೆ ಅವರು ಈ ರೀತಿ ಡಯೆಟ್​ ಮಾಡುತ್ತಿದ್ದರು. ನನ್ನನ್ನು ಮದುವೆ ಆದಾಗಿನಿಂದ ಹಲವು ಬಾರಿ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರಿಗೆ ಲೋ ಬಿಪಿ ಇದೆ ಅಂತ ವೈದ್ಯರು ಹೇಳುತ್ತಲೇ ಇದ್ದರು’ ಎಂದಿದ್ದಾರೆ ಬೋನಿ ಕಪೂರ್​.

ಶ್ರೀದೇವಿ ಅವರ ಅಪರೂಪದ ಫೋಟೋ ಹಂಚಿಕೊಂಡ ಪತಿ ಬೋನಿ ಕಪೂರ್​

ಪ್ರಜ್ಞೆ ತಪ್ಪಿದ್ದಕ್ಕೆ ನಾಗಾರ್ಜುನ ಸಾಕ್ಷಿ:

‘ಇದು ದುರಾದೃಷ್ಟದ ಸಂಗತಿ. ಶ್ರೀದೇವಿ ನಿಧನದ ಬಳಿಕ ನಮಗೆ ಸಾಂತ್ವನ ಹೇಳಲು ಬಂದಿದ್ದ ನಾಗಾರ್ಜುನ ಅವರು ಅಂಥದ್ದೇ ಒಂದು ಘಟನೆಯನ್ನು ನೆನಪಿಸಿಕೊಂಡರು. ಕಠಿಣ ಡಯೆಟ್​ ಮಾಡುತ್ತಿರುವಾಗ ಒಂದು ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ಬಾತ್​ರೂಮ್​ನಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಶ್ರೀದೇವಿ ಹಲ್ಲು ಮುರಿದುಕೊಂಡಿದ್ದರು ಎಂಬುದನ್ನು ನಾಗಾರ್ಜುನ ತಿಳಿಸಿದರು’ ಎಂದು ಬೋನಿ ಕಪೂರ್​ ಹೇಳಿದ್ದಾರೆ.

ಶ್ರೀದೇವಿ ಅವರು ಊಟದಲ್ಲಿ ಕಿಂಚಿತ್ತೂ ಉಪ್ಪು ಬಳಸುತ್ತಿರಲಿಲ್ಲ. ಇದೇ ಅವರ ಸಾವಿಗೆ ಕಾರಣ ಆಯಿತು ಎಂಬುದು ಬೋನಿ ಕಪೂರ್​ ವಾದ. ಅವರ ಡಯೆಟ್​ನಲ್ಲಿ ಉಪ್ಪು ಬಳಸಲು ಸಲಹೆ ನೀಡಿ ಎಂದು ಡಾಕ್ಟರ್​ ಬಳಿಯೂ ಬೋನಿ ಮನವಿ ಮಾಡಿದ್ದರಂತೆ. ಆದರೆ ಅದನ್ನು ಶ್ರೀದೇವಿ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಹೊರಗಡೆ ಊಟಕ್ಕೆ ಹೋದಾಗಲೂ ಅವರು ಉಪ್ಪು ರಹಿತವಾದ ಆಹಾರವನ್ನೇ ಕೇಳುತ್ತಿದ್ದರು ಎಂದು ಬೋನಿ ಕಪೂರ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ