‘ಚಂದ್ರಮುಖಿ 2’ ಫ್ಲಾಪ್: ಚಿತ್ರಮಂದಿರದಿಂದ ಎತ್ತಂಗಡಿ ಆದ್ರೂ ಸೂಪರ್ ಹಿಟ್ ಎಂದ ಕಂಗನಾ
Chandramukhi 2 Box Office Collection: ‘ಚಂದ್ರಮುಖಿ 2’ ಸಿನಿಮಾದಲ್ಲಿ ರಾಘವ ಲಾರೆನ್ಸ್ ಮತ್ತು ಕಂಗನಾ ರಣಾವತ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಮೂಡಿಬಂದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದೆ. ಎಲ್ಲ ಭಾಷೆಗಳಲ್ಲೂ ಸೇರಿ 4 ದಿನಕ್ಕೆ ಈ ಚಿತ್ರ ಗಳಿಸಿರುವುದು ಕೇವಲ 24 ಕೋಟಿ ರೂಪಾಯಿ.
ನಟಿ ಕಂಗನಾ ರಣಾವತ್ (Kangana Ranaut) ಅವರು ಒಂದು ಗೆಲುವಿಗಾಗಿ ಕಾದಿದ್ದಾರೆ. ‘ಚಂದ್ರಮುಖಿ 2’ ಸಿನಿಮಾದಿಂದ ಆ ಗೆಲುವು ಸಿಗಬಹುದು ಎಂದೇ ಅವರ ಅಭಿಮಾನಿಗಳು ಭಾವಿಸಿದ್ದರು. ಆದರೆ ಅವರ ಲೆಕ್ಕಾಚಾರ ತಲೆ ಕೆಳಗಾಗಿದೆ. ಬಾಲಿವುಡ್ನಲ್ಲಿ ಗೆಲುವು ಮರೀಚಿಕೆ ಆಗಿದೆ ಎಂಬುದು ಗೊತ್ತಾದಾಗ ಅವರು ಸೌತ್ ಫಿಲ್ಮ್ ಇಂಡಸ್ಟ್ರಿಯವರ ಜೊತೆ ಕೈ ಜೋಡಿಸಿ ‘ಚಂದ್ರಮುಖಿ 2’ (Chandramukhi 2) ಚಿತ್ರದಲ್ಲಿ ನಟಿಸಿದರು. ಆದರೆ ಈ ಸಿನಿಮಾ ಕೂಡ ಕೈ ಹಿಡಿದಿಲ್ಲ. ಸೆಪ್ಟೆಂಬರ್ 28ರಂದು ಬಿಡುಗಡೆ ಆದ ಈ ಚಿತ್ರ ಹೀನಾಯವಾಗಿ ಸೋತಿದೆ ಎಂದು ಟ್ರೇಡ್ ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ ಕಂಗನಾ ಮಾತ್ರ ತಮ್ಮ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ.
‘ಚಂದ್ರಮುಖಿ 2’ ಸಿನಿಮಾದಲ್ಲಿ ರಾಘವ ಲಾರೆನ್ಸ್ ಮತ್ತು ಕಂಗನಾ ರಣಾವತ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಮೂಡಿಬಂದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದೆ. 5 ದಿನ ಪ್ರದರ್ಶನ ಕಂಡರೂ ಕೂಡ ಈ ಸಿನಿಮಾದ ಗಳಿಕೆ ಸಮಾಧಾನಕರವಾಗಿಲ್ಲ. ಎಲ್ಲ ಭಾಷೆಗಳಲ್ಲೂ ಸೇರಿ 4 ದಿನಕ್ಕೆ ಈ ಚಿತ್ರ ಗಳಿಸಿರುವುದು ಕೇವಲ 24 ಕೋಟಿ ರೂಪಾಯಿ.
DISASTERS of September 28 long weekend.#Skanda #Iraivan #Chandramukhi2
Above films… pic.twitter.com/oYFqftDbXT
— Manobala Vijayabalan (@ManobalaV) October 2, 2023
ಟ್ರೇಡ್ ವಿಶ್ಲೇಷಕ ಮನೋಬಲ ವಿಜಯಬಾಲನ್ ಅವರು ‘ಚಂದ್ರಮುಖಿ 2’ ಸಿನಿಮಾವನ್ನು ಡಿಸಾಸ್ಟರ್ (ದುರಂತ) ಎಂದು ಕರೆದಿದ್ದಾರೆ. ಅಲ್ಲದೇ ಹಲವು ಚಿತ್ರಮಂದಿರದಿಂದ ಈ ಸಿನಿಮಾವನ್ನು ಕಿತ್ತು ಹಾಕಲಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಜನರು ಬಾರದ ಕಾರಣ ಎತ್ತಂಗಡಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಚಿತ್ರತಂಡದವರು ಬೇರೆಯದೇ ವಾದ ಮುಂದಿಡುತ್ತಿದ್ದಾರೆ. ‘ರನ್ನಿಂಗ್ ಸಕ್ಸಸ್ಪುಲಿ’ ಎಂದು ಸಾರುವ ಪೋಸ್ಟರ್ ರಾರಾಜಿಸುತ್ತಿದೆ. 4 ದಿನಕ್ಕೆ 40 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ ಎಂದು ಕೆಲವರು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ ರಣಾವತ್ ಅವರು, ‘ನಮ್ಮ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಧನ್ಯವಾಗಳು’ ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಗೆದ್ದ ಶ್ರೀಲೀಲಾ, ಕಂಗನಾ ಸಾಧಾರಣ, ಕಳಪೆ ಓಪನಿಂಗ್ ಪಡೆದ ವ್ಯಾಕ್ಸಿನ್ ವಾರ್;
ಸೆಪ್ಟೆಂಬರ್ 28ರಂದು ‘ಚಂದ್ರಮುಖಿ 2’ ಮಾತ್ರವಲ್ಲದೇ ನಯನತಾರಾ ನಟನೆಯ ‘ಇರೈವಾನ್’, ಶ್ರೀಲೀಲಾ-ರಾಮ್ ಪೋತಿನೇನಿ ಅಭಿನಯದ ‘ಸ್ಕಂದ’ ಸಿನಿಮಾ ಕೂಡ ಸೋತಿವೆ ಎಂದು ಟ್ರೇಡ್ ವಿಶ್ಲೇಷಕ ಮನೋಬಲ ವಿಜಯಬಾಲನ್ ಅವರು ಟ್ವೀಟ್ ಮಾಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಚಿತ್ರ ಕೂಡ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ. ಕಂಗನಾ ನಟನೆ ‘ತೇಜಸ್’ ಸಿನಿಮಾ ಅಕ್ಟೋಬರ್ 27ರಂದು ಬಿಡುಗಡೆ ಆಗಲಿದೆ. ಅವರೇ ನಿರ್ದೇಶನ ಮಾಡಿರುವ ‘ಎಮರ್ಜೆನ್ಸಿ’ ಚಿತ್ರ ಕೂಡ ರಿಲೀಸ್ಗೆ ಸಜ್ಜಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.