‘ಚಂದ್ರಮುಖಿ 2’ ಟ್ವಿಟರ್ ವಿಮರ್ಶೆ: ಸಿನಿಮಾ ಹೇಗಿದೆ? ಕಂಗನಾ ನಟನೆಗೆ ಎಷ್ಟು ಅಂಕ?
Chandramukhi 2: ಕಂಗನಾ ರನೌತ್, ರಾಘವ್ ಲಾರೆನ್ಸ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಚಂದ್ರಮುಖಿ 2' ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ನೆಟ್ಟಿಗರು ಧನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಏನು ಚೆನ್ನಾಗಿದೆ? ಯಾವುದು ಚೆನ್ನಾಗಿಲ್ಲ? ಇಲ್ಲಿದೆ ಮಾಹಿತಿ.
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರನೌತ್ (Kangana Ranaut) ನಾಲ್ಕನೇ ಬಾರಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಬಂದಿದ್ದಾರೆ ‘ಚಂದ್ರಮುಖಿ 2’ ಸಿನಿಮಾ ಮೂಲಕ. ಸಿನಿಮಾ ಇಂದು (ಸೆಪ್ಟೆಂಬರ್ 28) ಬಿಡುಗಡೆ ಆಗಿದೆ. ಕಂಗನಾ ಜೊತೆಗೆ ರಾಘವ್ ಲಾರೆನ್ಸ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಈ ಹಿಂದೆ ಬಿಡುಗಡೆ ಆಗಿದ್ದ ‘ಚಂದ್ರಮುಖಿ’ (ಆಪ್ತಮಿತ್ರ) ಸಿನಿಮಾದ ಪಾತ್ರಗಳನ್ನೇ ಇಟ್ಟುಕೊಂಡು ಕತೆಯನ್ನು ನಿರ್ದೇಶಕ ಪಿ ವಾಸು ಮುಂದುವರೆಸಿದ್ದಾರೆ. ಸಿನಿಮಾದ ಮೊದಲ ಶೋ ನೋಡಿದ ಹಲವು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳೇ ಹೆಚ್ಚಿವೆ.
”ಚಂದ್ರಮುಖಿ ಸಿನಿಮಾಕ್ಕೆ ನಾಲ್ಕು ಸ್ಟಾರ್ ಆರಾಮವಾಗಿ ಕೊಡಬಹುದು. ಅದರಲ್ಲಿಯೂ ಎರಡು ಹೆಚ್ಚುವರಿ ಸ್ಟಾರ್ಗಳನ್ನು ಕಂಗನಾರ ನಟನೆಗೆ ಕೊಟ್ಟುಬಿಡಬಹುದು. ಕಂಗನಾ ತೆರೆ ಮೇಲೆ ಕಾಣಿಸಿಕೊಳ್ಳುವ ಅಷ್ಟೂ ಸಮಯ ಅದ್ಭುತ. ಒಂದು ನಿಮಿಷವೂ ಬೋರ್ ಎನಿಸುವುದಿಲ್ಲ. ಕಂಗನಾ ಮೇಲೆ ಕಣ್ಣು ಕೀಲಿಸಿರುತ್ತದೆ. ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಕ್ಲೈಮ್ಯಾಕ್ಸ್ ಹಾಡಂತೂ ಅದ್ಭುತ” ಎಂದು ವಿಮರ್ಶೆ ಬರೆದಿದ್ದಾರೆ ಟ್ವಿಟ್ಟಿಗರೊಬ್ಬರು.
ಇದನ್ನೂ ಓದಿ:ಸತತ ಸೋಲಿನ ಬಳಿಕ ‘ಚಂದ್ರಮುಖಿ 2’ ಮೇಲೆ ಕಂಗನಾ ರಣಾವತ್ ನಿರೀಕ್ಷೆ
”ಇದು ಪಿ ವಾಸು ಮತ್ತು ಕೀರವಾಣಿ ಸೃಷ್ಟಿಸಿರುವ ಅದ್ಭುತ ಪ್ರಪಂಚ. ರಾಘವ್, ಮಹಿಲಾ, ರಾಧಿಕಾ ಅವರುಗಳು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಡಿವೇಲು ಅವರ ಕಾಮಿಡಿ ಮ್ಯಾಜಿಕ್ ಮರಳಿ ಬಂದಂತಾಗಿದೆ. ಸಿನಿಮಾದ ದ್ವಿತೀಯಾರ್ಧದಲ್ಲಿ ಬರುವ ಕಂಗನಾ ತಮ್ಮ ಅದ್ಭುತವಾದ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಇಡೀ ಸಿನಿಮಾವನ್ನು ಆಳುತ್ತಾರೆ. ಅದ್ಭುತವಾದ ನಟನೆ ಅವರದ್ದು” ಎಂದಿದ್ದಾರೆ ವೈಭವ್.
#Chandramukhi2 -2nd half >>>>>>1st half !!!🔥🔥 -Kangana steals the show with her performance ❤️🔥💥 -Jump scaring moments #lakshmimenon💥❤️🔥#Vadivelu 😂👌🏻#vettaya👑👌🏻 And finally climax 🔥🔥🔥🔥
Moreover #chandramukhi2 is a worth watching movie !!!
My review 3.75/5 pic.twitter.com/2j6pP4hSTP
— Mr.Achiever (@MrAchiever0925) September 28, 2023
”ಚಂದ್ರಮುಖಿ 2 ಸಿನಿಮಾದ ಮೊದಲಾರ್ಧಕ್ಕಿಂತಲೂ ದ್ವಿತೀಯಾರ್ಧ ಅದ್ಭುತವಾಗಿದೆ. ಇಡೀ ಸಿನಿಮಾವನ್ನು ಕಂಗನಾ ತಮ್ಮತ್ತ ಎಳೆದುಕೊಂಡಿದ್ದಾರೆ. ಲಕ್ಷ್ಮಿ ಮೆನನ್ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ವಡಿವೇಲು ಕಾಮಿಡಿ ಸಖತ್ ಆಗಿದೆ. ಕೊನೆಗೆ ಕ್ಲೈಮ್ಯಾಕ್ಸ್ ಅಂತೂ ಅದ್ವಿತೀಯವಾಗಿದೆ. ಪಕ್ಕಾ ನೋಡಲೇ ಬೇಕಾದ ಸಿನಿಮಾ” ಎಂದಿದೆ ಡೌನಿ ಜೂನಿಯರ್ ಹೆಸರಿನ ಟ್ವಿಟ್ಟರ್ ಖಾತೆ ಒಂದು.
#chandramukhi2 review !!!! It is a world of p vasu and keeravani. . #Raghav , mahima , kids and Radhika did justice to the plot , Vadivelu brings his magic back !!!! #KanganaRanaut arrives in second half with her magnetic screen presence!!! She is completely ruling !! ⭐️⭐️⭐️⭐️ pic.twitter.com/9rsokRXZSI
— vaibhav (@BhaktWine) September 28, 2023
ಕೃಷ್ಣ ಎಂಬುವರು ಟ್ವೀಟ್ ಮಾಡಿ, ”ಚಂದ್ರಮುಖಿಯಾಗಿ ಕಂಗನಾ ಶೈನ್ ಆಗಿದ್ದಾರೆ. ಸಿನಿಮಾದಲ್ಲಿ ಅವರು ಸುಂದರವಾಗಿ ಕಾಣುವ ಜೊತೆಗೆ ಅತ್ಯದ್ಭುವಾಗಿ ನಟಿಸಿದ್ದಾರೆ. ಸಿನಿಮಾದ ದ್ವಿತೀಯಾರ್ಧ ಅದ್ಭುತವಾಗಿದೆ ಮತ್ತು ಸಿನಿಮಾದ ಸಿನಿಮಾಟೊಗ್ರಫಿ ಮತ್ತು ಎಡಿಟಿಂಗ್ ಅದ್ಭುತವಾಗಿದೆ” ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ