AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆದ್ದ ಶ್ರೀಲೀಲಾ, ಕಂಗನಾ ಸಾಧಾರಣ, ಕಳಪೆ ಓಪನಿಂಗ್ ಪಡೆದ ‘ವ್ಯಾಕ್ಸಿನ್ ವಾರ್’

Box Office: ಸೆಪ್ಟೆಂಬರ್ 28ರಂದು ಬಿಡುಗಡೆ ಆದ ಕನ್ನಡೇತರ ಪ್ರಮುಖ ಸಿನಿಮಾಗಳಲ್ಲಿ ಯಾವ ಸಿನಿಮಾ ಗೆದ್ದಿದೆ? ಮೊದಲ ದಿನದ ವಿಜಯ ಯಾವ ಸಿನಿಮಾದ್ದು? ಇಲ್ಲಿದೆ ಮಾಹಿತಿ.

ಗೆದ್ದ ಶ್ರೀಲೀಲಾ, ಕಂಗನಾ ಸಾಧಾರಣ, ಕಳಪೆ ಓಪನಿಂಗ್ ಪಡೆದ 'ವ್ಯಾಕ್ಸಿನ್ ವಾರ್'
ಬಾಕ್ಸ್ ಆಫೀಸ್
ಮಂಜುನಾಥ ಸಿ.
|

Updated on: Sep 29, 2023 | 7:29 PM

Share

ನಿನ್ನೆ (ಸೆಪ್ಟೆಂಬರ್ 29) ಕನ್ನಡ ಸಿನಿಮಾಗಳ ಹೊರತಾಗಿ ಮೂರು ಪರಭಾಷೆಯ ಪ್ರಮುಖ ಸಿನಿಮಾಗಳು ಬಿಡುಗಡೆ ಆದವು. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಿಸಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್‘ (The Vaccine War), ಕನ್ನಡತಿ ಶ್ರೀಲೀಲಾ ತೆಲುಗಿನಲ್ಲಿ ನಟಿಸಿರುವ ರಾಮ್ ಪೋತಿನೇನಿ ನಾಯಕರಾಗಿರುವ ‘ಸ್ಕಂದ’, ನಟಿ ಕಂಗನಾ ರನೌತ್ ತಮಿಳಿನಲ್ಲಿ ನಟಿಸಿರುವ ‘ಚಂದ್ರಮುಖಿ 2’ ಈ ಮೂರು ಸಿನಿಮಾಗಳ ನಡುವೆ ಮೊದಲ ದಿನ ಗೆದ್ದಿದ್ದು ಯಾರು?

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರೀಕ್ಷೆ ಮಾಡಲಾಗದಿದ್ದ ದೊಡ್ಡ ಯಶಸ್ಸನ್ನು ಗಳಿಸಿತ್ತು. ಇದೇ ಕಾರಣಕ್ಕೆ ವಿವೇಕ್ ಅಗ್ನಿಹೋತ್ರಿಯ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಮೇಲೆ ಬಹಳ ದೊಡ್ಡ ನಿರೀಕ್ಷೆ ಇತ್ತು. ಕೋವಿಡ್ ಸಮಯದಲ್ಲಿ ಭಾರತ ವ್ಯಾಕ್ಸಿನ್ ತಯಾರಿಸಿ ಅದನ್ನು ಕೋಟ್ಯಂತರ ಜನರಿಗೆ ನೀಡಿದ ಘಟನೆಯನ್ನು ಆಧರಿಸಿ ಈ ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ನಿರ್ಮಿಸಿದ್ದರು. ಸಿನಿಮಾ ಬಿಡುಗಡೆಗೆ ಮುನ್ನ ಸಾಕಷ್ಟು ಪ್ರಚಾರವೂ ದೊರಕಿತ್ತು. ಆದರೆ ಬಿಡುಗಡೆ ಆದ ಮೊದಲ ದಿನ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಜನರಿಂದ ಲಭ್ಯವಾಗಿಲ್ಲ.

‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ಕೇವಲ 1.30 ಕೋಟಿ ಹಣವನ್ನಷ್ಟೆ ಗಳಿಸಿದೆ. ಅದರಲ್ಲಿಯೂ ಭಾರತದಲ್ಲಿ ಈ ಸಿನಿಮಾ ಗಳಿಸಿರುವುದು ಕೇವಲ 85 ಲಕ್ಷ ರೂಪಾಯಿ ಎನ್ನಲಾಗುತ್ತಿದೆ. ಇದೇ ನಿರ್ದೇಶಕನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೊದಲ ದಿನ 3.75 ಕೋಟಿ ರೂಪಾಯಿ ಗಳಿಸಿತ್ತು. ಆ ನಂತರ ದಿನೇ-ದಿನೇ ಗಳಿಕೆ ಹೆಚ್ಚಳವಾಗಿ ಭಾರಿ ದೊಡ್ಡ ಮೊತ್ತವನ್ನು ಕಲೆ ಹಾಕಿತು. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಸಹ ಹಾಗೆಯೇ ಆಗುತ್ತದೆಯೇ? ಕಾದು ನೋಡಬೇಕಿದೆ.

ಇದನ್ನೂ ಓದಿ:ಬಾಕ್ಸ್ ಆಫೀಸ್​ನಲ್ಲಿ ‘ಸಲಾರ್’ Vs ‘ಡಂಕಿ’; ಪ್ರಭಾಸ್-ಶಾರುಖ್ ಮಧ್ಯೆ ಗೆಲ್ಲೋರು ಯಾರು?

ಇನ್ನು ನಟಿ ಕಂಗನಾ ರನೌತ್ ತಮಿಳಿನಲ್ಲಿ ನಟಿಸಿರುವ ‘ಚಂದ್ರಮುಖಿ 2’ ಸಿನಿಮಾ ಮೊದಲ ದಿನ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾ ಮೊದಲ ದಿನವೇ 7.5 ಕೋಟಿ ರೂಪಾಯಿ ಹಣ ಗಳಿಸಿದೆ. ಇದು ಸಾಮಾನ್ಯ ಮೊತ್ತವೇನಲ್ಲ. ಈ ಸಿನಿಮಾ ವಾರಾಂತ್ಯದಲ್ಲಿ ಕಲೆಕ್ಷನ್ ಅನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ. ಸಿನಿಮಾದ ಬಗ್ಗೆ ಧನಾತ್ಮಕ ವಿಮರ್ಶೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿವೆ. ‘ಚಂದ್ರಮುಖಿ 2’ ಸಿನಿಮಾದಲ್ಲಿ ಕಂಗನಾ ಜೊತೆಗೆ ರಾಘವ ಲಾರೆನ್ಸ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪಿ ವಾಸು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಇನ್ನು ಕನ್ನಡತಿ ತೆಲುಗಿನಲ್ಲಿ ನಟಿಸಿರುವ ‘ಸ್ಕಂದ’ ಸಿನಿಮಾ ಸಹ ಮೊದಲ ದಿನ ಉತ್ತಮ ಮೊತ್ತವನ್ನೇ ಕಲೆ ಹಾಕಿದೆ. ರಾಮ್ ಪೋತಿನೇನಿ ನಾಯಕನಾಗಿರುವ ಈ ಆಕ್ಷನ್ ಸಿನಿಮಾ ಮೊದಲ ದಿನ ವಿಶ್ವದಾದ್ಯಂತ 18.2 ಕೋಟಿ ರೂಪಾಯಿ ಹಣ ಗಳಿಸಿದೆ. ಎರಡು ತೆಲುಗು ರಾಜ್ಯಗಳಲ್ಲಿಯೇ ಈ ಸಿನಿಮಾ ಮೊದಲ ದಿನ 9 ಕೋಟಿ ರೂಪಾಯಿ ಹಣ ಗಳಿಸಿದೆ. ಬೇರೆ ರಾಜ್ಯಗಳು ಹಾಗೂ ದುಬೈ ಸೇರಿದಂತೆ ಇತರೆ ದೇಶಗಳ ಕಲೆಕ್ಷನ್ ಒಟ್ಟು ಮಾಡಿ ಮೊದಲ ದಿನ 18.20 ಕೋಟಿ ಹಣ ಗಳಿಕೆಯಾಗಿದೆ. ಬೊಯಪಾಟಿ ಸೀನು ನಿರ್ದೇಶನದ ಈ ಸಿನಿಮಾ ಪಕ್ಕಾ ಮಾಸ್ ಎಂಟರ್ಟೈನರ್ ಆಗಿದ್ದು ಸಿನಿಮಾ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ