ನಟರ ಮೇಲೆ ಗೂಬೆ ಕೂರಿಸಬೇಡಿ: ಕಾವೇರಿ ಕುರಿತು ವಸಿಷ್ಠ ಸಿಂಹ ಮಾತು

ನಟರ ಮೇಲೆ ಗೂಬೆ ಕೂರಿಸಬೇಡಿ: ಕಾವೇರಿ ಕುರಿತು ವಸಿಷ್ಠ ಸಿಂಹ ಮಾತು

ಮಂಜುನಾಥ ಸಿ.
|

Updated on: Sep 29, 2023 | 8:37 PM

Cauvery Issue: ಕಾವೇರಿ ವಿಷಯದಲ್ಲಿ ಚಿತ್ರನಟರು ಮೌನಕ್ಕೆ ಶರಣಾಗಿದ್ದಾರೆ ಎಂಬ ಮಾತಿಗೆ ವಿರೋಧ ವ್ಯಕ್ತಪಡಿಸಿದ ನಟ ವಸಿಷ್ಠ ಸಿಂಹ, ಸಿನಿಮಾ ನಟರು ಈ ವಿಷಯದಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎಂಬುದು ಸುಳ್ಳು ಎಂದರು.

ಕಾವೇರಿ (Cauvery) ಕುರಿತು ಇಂದು (ಸೆಪ್ಟೆಂಬರ್ 29) ಕರೆ ಕರ್ನಾಟಕ ಬಂದ್ ಕರೆ ನೀಡಲಾಗಿತ್ತು. ಈ ಬಂದ್​ನಲ್ಲಿ ಚಿತ್ರರಂಗ (Sandalwood) ಸಹ ಭಾಗಿಯಾಗಿ ಪ್ರತಿಭಟನಾ ಸಭೆ ನಡೆಸಿದೆ. ಶಿವರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ದರ್ಶನ್, ಉಪೇಂದ್ರ, ದುನಿಯಾ ವಿಜಯ್, ಧ್ರುವ ಸರ್ಜಾ ಸೇರಿದಂತೆ ಹಲವಾರು ನಟರು ಭಾಗಿಯಾಗಿದ್ದರು. ಪ್ರತಿಭಟನಾ ಸಭೆಯ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ವಸಿಷ್ಠಿ ಸಿಂಹ, ಸಿನಿಮಾ ನಟರು ಕಾವೇರಿ ವಿಷಯ ಬಂದಾಗ ಮೌನಕ್ಕೆ ಶರಣಾಗುತ್ತಾರೆ ಎಂಬ ಮಾತಿಗೆ ವಿರೋಧ ವ್ಯಕ್ತಪಡಿಸಿದರು. ’ಕರ್ನಾಟಕ ನೆಲ-ನೀರು-ಭಾಷೆ ವಿಷಯ ಬಂದಾಗ ಕನ್ನಡ ಚಿತ್ರರಂಗ ತಪ್ಪದೇ ಬಂದಿದೆ” ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ