ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡರು ಕೆಪಿಸಿಸಿ ಕಚೇರಿಗೆ ಹೋಗಿದ್ದು ಸಚಿವ ಜಮೀರ್ ಗೆ ಹಬ್ಬದ ಶುಭಾಷಯ ತಿಳಿಸಲೋ?
ಅವರೊಂದಿಗೆ ಮಾತಾಡಿ ಬರುವಾಗ ನಿಂಬೆಹಣ್ಣನ್ನು ಕೊಟ್ಟರು ಎಂದು ಹೇಳುತ್ತಾ ಗೌಡರು ನಿಂಬೆಹಣ್ಣು ತೋರಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಿಂಬೆಹಣ್ಣು ಬೆಳೆಯುತ್ತಾರೆಯೇ? ಜಮೀರ್ ಅಹ್ಮದ್ ಮತ್ತು ನಾರಾಯಣಗೌಡರೇ ಅದನ್ನು ಹೇಳಬೇಕು. ಅಂದಹಾಗೆ, ಈದ್ ಮಿಲಾದ್ ಹಬ್ಬಕ್ಕೂ ಶುಭಾಷಯಗಳ ವಿನಿಮಯ ಅಗುತ್ತದೆಯೇ? ಅಂದರೆ ರಂಜಾನ್ ಮತ್ತು ಬಕ್ರೀದ್ ಹಬ್ಬಗಳ ಹಾಗೆ? ಅದನ್ನೂ ಇವರಿಬ್ಬರನ್ನೇ ಕೇಳಬೇಕು.
ಬೆಂಗಳೂರು: ಟಿಎ ನಾರಾಯಣಗೌಡ (TA Narayana Gowda) ನೇತೃತ್ವದ ರಕ್ಷಣಾ ವೇದಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ರಕ್ಷಣಾ ವೇದಿಕೆ (Congress Rakshana Vedike) ಅಂತ ಬಣ್ಣಿಸಲಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಖುದ್ದು ನಾರಾಯಣಗೌಡರೇ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ (KPCC office) ಭೇಟಿ ನೀಡಿದರೆ ಈ ಮಾತಿಗೆ ಇಂಬು ಕೊಟ್ಟಂತಾಗಲ್ಲವೇ? ಅದನ್ನೇ ಪತ್ರಕರ್ತರು ಗೌಡರಿಗೆ ಕೇಳಿದಾಗ ಕೂಡಲೇ ಸಿಡುಕುವ ಅವರು ಯಾವನ್ರೀ ಹಾಗೆ ಹೇಳೋನು ಅಂತ ಹೇಳಿ, ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಅವರಿಗೆ ಈದ್-ಮಿಲಾದ್ ಹಬ್ಬದ ಶುಭಾಷಯಗಳನ್ನು ತಿಳಿಸಿರಲಿಲ್ಲ, ಅದಕ್ಕಾಗಿ ಫೋನ್ ಮಾಡಿದಾಗ ಕೆಪಿಸಿಸಿ ಕಚೇರಿಯಲ್ಲಿದ್ದೇನೆ ಬಂದು ಹೋಗಿ ಅಂತ ಹೇಳಿದರು, ಹಾಗಾಗಿ ಹೋಗಬೇಕಾಯಿತು. ಅವರೊಂದಿಗೆ ಮಾತಾಡಿ ಬರುವಾಗ ನಿಂಬೆಹಣ್ಣನ್ನು ಕೊಟ್ಟರು ಎಂದು ಹೇಳುತ್ತಾ ಗೌಡರು ನಿಂಬೆಹಣ್ಣು ತೋರಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಿಂಬೆಹಣ್ಣು ಬೆಳೆಯುತ್ತಾರೆಯೇ? ಜಮೀರ್ ಅಹ್ಮದ್ ಮತ್ತು ನಾರಾಯಣಗೌಡರೇ ಅದನ್ನು ಹೇಳಬೇಕು. ಅಂದಹಾಗೆ, ಈದ್ ಮಿಲಾದ್ ಹಬ್ಬಕ್ಕೂ ಶುಭಾಷಯಗಳ ವಿನಿಮಯ ಅಗುತ್ತದೆಯೇ? ಅಂದರೆ ರಂಜಾನ್ ಮತ್ತು ಬಕ್ರೀದ್ ಹಬ್ಬಗಳ ಹಾಗೆ? ಅದನ್ನೂ ಇವರಿಬ್ಬರನ್ನೇ ಕೇಳಬೇಕು ಮಾರಾಯ್ರೇ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ