Karnataka Bandh: ರಾಜ್ಯದ ಸಂಸದರೆಲ್ಲ ಸ್ವಾಭಿಮಾನವಿಲ್ಲದ ರಣಹೇಡಿಗಳು: ಟಿಎ ನಾರಾಯಣಗೌಡ, ಕರ್ನಾಟಕ ರಕ್ಷಣಾ ವೇದಿಕೆ-ಅಧ್ಯಕ್ಷ
Karnataka Bandh: ದಿವಂಗತ ಅನಂತಕುಮಾರ್ ಸಹ ನಾಡಿನ ಸಮಸ್ಯೆಗಳ ಬಗ್ಗೆ ಅತೀವ ಕಾಳಜಿ ಹೊಂದಿದ್ದರು. ಕಾವೇರಿ ನೀರಿಗಾಗಿ ಸಮಸ್ಯೆ ಎದುರಾದಾಗ ಅವರು ರಾಜ್ಯ ಸರ್ಕಾರದೊಡನೆ ಮಾತಾಡಿ, ನಿಮ್ಮ ನಿಯೋಗ ತೆಗೆದುಕೊಂಡು ಬನ್ನಿ, ಪ್ರಧಾನ ಮಂತ್ರಿಗಳ ಬಳಿ ನಾನು ಕರೆದೊಯ್ಯುತ್ತೇನೆ ಅನ್ನುತ್ತಿದ್ದರು ಎಂದರು.
ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಅಧ್ಯಕ್ಷ ಟಿ ಎ ನಾರಾಯಣ ಗೌಡ (TA Narayana Gowda) ರಾಜ್ಯದ ಎಲ್ಲ 28 ಸಂಸದರನ್ನು (Members of Parliament) ರಣಹೇಡಿಗಳು, ಸ್ವಾಭಿಮಾನ ಇಲ್ಲದವರು, ಅಧಿಕಾರ ಲಾಲಸೆ ಇರುವವರು ಎಂದು ಜರಿದರು. ಕನ್ನಡ ನಾಡಿನ ಯಾವುದೇ ಸಮಸ್ಯೆಗೆ ಸಂಸದರು ಸ್ಪಂದಿಸುವುದಿಲ್ಲ, ತೆಪ್ಪಗೆ ಕೂತಿರುತ್ತಾರೆ, ಈ ವಿಷಯದಲ್ಲಿ ತಮಿಳುನಾಡಿನ ಸಂಸದರನ್ನು ಮೆಚ್ಚಬೇಕಾಗುತ್ತದೆ, ತಮ್ಮ ನಾಡಿನ ಜಲ ನೆಲದ ಸಮಸ್ಯೆ ಎದುರಾದಾಗ ಅವರು ಅಧಿಕಾರವನ್ನು ಧಿಕ್ಕರಿಸಿ ಸ್ವಾಭಿಮಾನ ಮೆರೆಯುತ್ತಾರೆ ಎಂದು ನಾರಾಯಣಗೌಡ ಹೇಳಿದರು. ಹಿಂದೆ ಕೇಂದ್ರದಲ್ಲಿ ಮಂತ್ರಿಯಾಗಿದ್ದ ಮಂಡ್ಯದ ಗಂಡು ಅಂಬರೀಶ್ ಕಾವೇರಿ ಜಲವಿವಾದದ ಹಿನ್ನೆಲೆಯಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಂದಿದ್ದರು ಅವರಲ್ಲಿದ್ದ ಬದ್ಧತೆ ಈಗಿನ ಸಂಸದರಲ್ಲಿ ಯಾರಿಗೂ ಇಲ್ಲ ಎಂದು ಹೇಳಿದ ಅವರು ದಿವಂಗತ ಅನಂತಕುಮಾರ್ ಸಹ ನಾಡಿನ ಸಮಸ್ಯೆಗಳ ಬಗ್ಗೆ ಅತೀವ ಕಾಳಜಿ ಹೊಂದಿದ್ದರು. ಕಾವೇರಿ ನೀರಿಗಾಗಿ ಸಮಸ್ಯೆ ಎದುರಾದಾಗ ಅವರು ರಾಜ್ಯ ಸರ್ಕಾರದೊಡನೆ ಮಾತಾಡಿ, ನಿಮ್ಮ ನಿಯೋಗ ತೆಗೆದುಕೊಂಡು ಬನ್ನಿ, ಪ್ರಧಾನ ಮಂತ್ರಿಗಳ ಬಳಿ ನಾನು ಕರೆದೊಯ್ಯುತ್ತೇನೆ ಅನ್ನುತ್ತಿದ್ದರು ಎಂದರು.
ಈಗಿನ ಸಂಸದರು ಕನಿಷ್ಟ ರಾಜೀನಾಮೆ ಸಲ್ಲಿಸುವ ಬೆದರಿಕೆಯನ್ನಾದರೂ ಹಾಕಿದ್ರಾ ಎಂದು ನಾರಾಯಣಗೌಡ ಪ್ರಶ್ನಿಸಿದರು. ರಾಜ್ಯದ ಸಂಸದರ ಹೇಡಿತನದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳ ಸದಸ್ಯರು ಗಾಂಧೀ ನಗರದ ಕೇಂದ್ರ ಕಚೇರಿಯಿಂದ ಫ್ರೀಡಂ ಪಾರ್ಕ್ ವರೆಗೆ ರ‍್ಯಾಲಿ ನಡೆಸುತ್ತಿದ್ದಾರೆ ಎಂದು ನಾರಾಯಣಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ