Karnataka Bandh; ಶುಕ್ರವಾರದ ಕರ್ನಾಟಕ ಬಂದ್ಗೆ ನಮ್ಮ ನೈತಿಕ ಬೆಂಬಲವಿದೆ: ಶಶಿಕುಮಾರ್-ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ
ಈ ವಾರದಲ್ಲಿ ಎರಡೆರಡು ಬಂದ್, ಸರ್ಕಾರಿ ರಜೆ, ಶನಿವಾರ ಮತ್ತು ರವಿವಾರದ ರಜೆಗಳ ಬಳಿಕ ಗಾಂಧಿ ಜಯಂತಿ-ಹೀಗೆ ವಾರವಿಡೀ ಸಾಲು ಸಾಲು ರಜೆಗಳು ಬಂದಿರುವುದರ ಜೊತೆಗೆ ಪರೀಕ್ಷೆಗಳು ಸಹ ನಡೆಯುತ್ತಿರುವುದರಿಂದ ಮಕ್ಕಳ ಓದಿನ ಮೇಲೆ ವ್ಯತಿತಿಕ್ತ ಪರಿಣಾಮ ಬೀರುತ್ತಿದೆ; ಹಾಗಾಗಿ, ಆಯಾ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ತಮ್ಮ ಏರಿಯಾಗಳಲ್ಲಿನ ಸ್ಥಿತಿಗತಿಯನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಶಶಿಕುಮಾರ್ ಹೇಳಿದರು.
ಬೆಂಗಳೂರು: ಕಾವೇರಿ ನದಿ ನೀರಿನ ವಿವಾದಕ್ಕೆ (Cauvery water dispute) ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳಿ ನಾಳೆ ಅಖಂಡ ಕರ್ನಾಟಕ ಬಂದ್ ಆಚರಿಸಲು ನೀಡಿರುವ ಕರೆಗೆ ನೈತಿಕ ಬೆಂಬಲ (moral support) ನೀಡುವುದಾಗಿ ನಗರ ಖಾಸಗಿ ಶಾಲೆಗಳ ಒಕ್ಕೂಟದ (ಕಾಮ್ಸ್) ಅಧ್ಯಕ್ಷ ಶಶಿಕುಮಾರ್ (Shashikumar) ಹೇಳಿದರು. ಬೆಂಗಳೂರಲ್ಲಿಂದು ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ನೀಡಿದ ಅವರು ಈ ವಾರದಲ್ಲಿ ಎರಡೆರಡು ಬಂದ್, ಸರ್ಕಾರಿ ರಜೆ, ಶನಿವಾರ ಮತ್ತು ರವಿವಾರದ ರಜೆಗಳ ಬಳಿಕ ಗಾಂಧಿ ಜಯಂತಿ-ಹೀಗೆ ವಾರವಿಡೀ ಸಾಲು ಸಾಲು ರಜೆಗಳು ಬಂದಿರುವುದರ ಜೊತೆಗೆ ಪರೀಕ್ಷೆಗಳು ಸಹ ನಡೆಯುತ್ತಿರುವುದರಿಂದ ಮಕ್ಕಳ ಓದಿನ ಮೇಲೆ ವ್ಯತಿತಿಕ್ತ ಪರಿಣಾಮ ಬೀರುತ್ತಿದೆ; ಹಾಗಾಗಿ, ಆಯಾ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ತಮ್ಮ ಏರಿಯಾಗಳಲ್ಲಿನ ಸ್ಥಿತಿಗತಿಯನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಶಶಿಕುಮಾರ್ ಹೇಳಿದರು. ನಾಳೆ ಸರ್ಕಾರೀ ಶಾಲಾ ಕಾಲೇಜಿಗಳು ಓಪನ್ ಇರುತ್ತವೆಯೇ ಇಲ್ಲವೇ ಅಂತ ಇವತ್ತೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ರವಾನಿಸಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ