ಡಿಎಂಕೆ, ಎಐಎಡಿಎಂಕೆ ಸಂಸದರಿಗೆ ಇರುವಷ್ಟು ತಾಕತ್ತು ನಮ್ಮ ಸಂಸದರಿಗಿಲ್ವಾ? ಅಶ್ವಿನಿ ಗೌಡ, ಕರವೇ ಮಹಿಳಾ ಘಟಕದ ಅಧ್ಯಕ್ಷೆ

ಡಿಎಂಕೆ, ಎಐಎಡಿಎಂಕೆ ಸಂಸದರಿಗೆ ಇರುವಷ್ಟು ತಾಕತ್ತು ನಮ್ಮ ಸಂಸದರಿಗಿಲ್ವಾ? ಅಶ್ವಿನಿ ಗೌಡ, ಕರವೇ ಮಹಿಳಾ ಘಟಕದ ಅಧ್ಯಕ್ಷೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 28, 2023 | 3:06 PM

ರಾಜ್ಯದ ಸಂಸದರು ಕೇವಲ ಕೇಂದ್ರ ಸರ್ಕಾರವನ್ನು ಓಲೈಸುವುದಲ್ಲೇ ಮಗ್ನರಾಗಿದ್ದಾರೆ, ತಾವು ಕರ್ನಾಟಕ ಜನತೆಯ ಪ್ರತಿನಿಧಿಗಳು ಅನ್ನೋದು ಮರೆತು ಹೊಗಿರುವುದರಿಂದ ಅವರಿಗೆ ಬಿಸಿ ಮುಟ್ಟಿಸಲು ಪ್ರತಿಭಟನೆ ನಡೆಸುತ್ತಿದ್ದೇವೆ ಅಂತ ಅಶ್ವಿನಿ ಗೌಡ ಹೇಳಿದರು. ನಮ್ಮ ಸಂಸದರು ಯಾಕೆ ತೆಪ್ಪಗಿದ್ದಾರೆ, ಅವರಲ್ಲಿ ತಾಕತ್ತಿಲ್ವಾ? ನಮ್ಮಂತೆ ಅವರು ಕಾವೇರಿ ನೀರು ಕುಡಿಯಲ್ವಾ ಅಂತ ಆಶ್ವಿನಿ ಗೌಡ ಪ್ರಶ್ನಿಸಿದರು.

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾವೇರಿ ನೀರು ನಿಯಂತ್ರಣ ಮಂಡಳಿ (CWRC) ಹಾಗೂ ಪ್ರಾಧಿಕಾರದಿಂದ (CWMA) ಕರ್ನಾಟಕಕ್ಕೆ ಘೋರ ಅನ್ಯಾಯವಾಗುತ್ತಿದ್ದರೂ ರಾಜ್ಯದ ಪರವಾಗಿ ಕೇಂದ್ರ ಸರ್ಕಾರದ ಮುಂದೆ ಬಾಯಿಬಿಡದ ರಾಜ್ಯದ 28 ಸಂಸದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) (ಟಿಎ ನಾರಾಯಣಗೌಡ ಬಣ) ಮಹಿಳಾ ಘಟಕವು ಅದರ ಅಧ್ಯಕ್ಷೆ ಅಶ್ವಿನಿ ಗೌಡ (Ashwini Gowda) ನೇತೃತ್ವದಲ್ಲಿ ಗಾಂಧೀನಗರದ ಕೇಂದ್ರ ಕಚೇರಿಯಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿತು. ಪ್ರತಿಭಟನಾಕಾರರು ಕೈಗಳಲ್ಲಿ ರಾಜ್ಯ ಸಂಸದರ ಭಾವಚಿತ್ರಗಳನ್ನು ಹಿಡಿದು ಅವರಿಗೆ ಧಿಕ್ಕಾರ ಕೂಗಿದರು. ರ‍್ಯಾಲಿ ನಡೆಯುತ್ತಿದ್ದಾಗ ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ ಅಶ್ವಿನಿ ಗೌಡ; ರಾಜ್ಯದ ಸಂಸದರು ಕೇವಲ ಕೇಂದ್ರ ಸರ್ಕಾರವನ್ನು ಓಲೈಸುವುದಲ್ಲೇ ಮಗ್ನರಾಗಿದ್ದಾರೆ, ತಾವು ಕರ್ನಾಟಕ ಜನತೆಯ ಪ್ರತಿನಿಧಿಗಳು ಅನ್ನೋದು ಮರೆತು ಹೊಗಿರುವುದರಿಂದ ಅವರಿಗೆ ಬಿಸಿ ಮುಟ್ಟಿಸಲು ಪ್ರತಿಭಟನೆ ನಡೆಸುತ್ತಿದ್ದೇವೆ ಅಂತ ಹೇಳಿದರು. ಡಿಎಂಕೆ ಮತ್ತು ಅಣ್ಣಾಡಿಎಂಕೆ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ಪಟ್ಟುಹಿಡಿದು ತಮ್ಮ ರಾಜ್ಯಕ್ಕೆ ನೀರು ಬಿಡಿಸಿಕೊಳ್ಳುತ್ತಾರೆ, ಇದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ, ನಮ್ಮ ಸಂಸದರು ಯಾಕೆ ತೆಪ್ಪಗಿದ್ದಾರೆ, ಅವರಲ್ಲಿ ತಾಕತ್ತಿಲ್ವಾ? ನಮ್ಮಂತೆ ಅವರು ಕಾವೇರಿ ನೀರು ಕುಡಿಯಲ್ವಾ ಅಂತ ಆಶ್ವಿನಿ ಗೌಡ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ