ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ; ರಾಜ್ಯದ ಎಲ್ಲಾ ಸಂಸದರು ನರಸತ್ತವರು ಎಂದ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ

ಸಿದ್ದರಾಮಯ್ಯ ಈ ಸಮಯದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ನಮ್ಮ ಎಂಪಿಗಳಿಗೆ ನಾಚಿಕೆ ಆಗಬೇಕು ನರಸತ್ತಂತೆ ಕುಳಿತುಕೊಂಡಿದ್ದಾರೆ. ಒಬ್ಬ ಎಂಪಿ‌ ಮಾತಾಡ್ತಿಲ್ಲ ಬಿಜೆಪಿಯಿಂದ 25 ಎಂಪಿಗಳಿದ್ದಾರೆ. ಎಲ್ಲಾ ಎಂಪಿಗಳು ಕೂಡ ಯಾರು ಮಾತಾಡ್ತಿಲ್ಲ, ಪ್ರಧಾನಿಗಳನ್ನು ಭೇಟಿ ಮಾಡ್ತಿಲ್ಲ. ರಣಹೇಡಿ ಎಂಪಿಗಳು ಸುಮ್ಮನೆ ಕುಳಿತುಕೊಂಡಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು ಕಿಡಿಕಾರಿದ್ದಾರೆ.

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ; ರಾಜ್ಯದ ಎಲ್ಲಾ ಸಂಸದರು ನರಸತ್ತವರು ಎಂದ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ
ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ
Follow us
Kiran Surya
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 13, 2023 | 7:34 PM

ಬೆಂಗಳೂರು, ಸೆ.13: ತಮಿಳುನಾಡಿಗೆ ಕಾವೇರಿ (Cauvery)ನದಿ ನೀರು ಬಿಡುಗಡೆ ವಿಚಾರ ಈಗಾಗಲೇ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿದೆ. ಅದರಂತೆ ಈ ಕುರಿತು ‘ರಾಜ್ಯದ ಎಲ್ಲಾ ಸಂಸದರು ನರಸತ್ತವರು, ಸಂಸದರ ಮನೆಗೆ ಕರವೇ ಕಾರ್ಯಕರ್ತರನ್ನು ನುಗ್ಗಿಸುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ (karave president)ನಾರಾಯಣ ಗೌಡ ಅವರು ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಕಾವೇರಿ ನದಿ ನೀರು ವಿಚಾರದಲ್ಲಿ ನಾವು ಭುಗಿಲೇಳಬೇಕಿದೆ. ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದು ಆದೇಶವಿದ್ದು, ನಾವು ಈ ಆದೇಶವನ್ನು ಧಿಕ್ಕರಿಸುತ್ತೇವೆ ಎಂದರು.

‘ನಮ್ಮಲ್ಲಿ ನೀರಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಧಿಮಾಕು ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕುಳಿತು ಧಿಮಾಕು ಮಾಡಿಕೊಂಡು ನೀರು ಕೊಡಿ ಅಂತಾರೆ. ಹೀಗೆ ಹೇಳುತ್ತಿದ್ದರೆ ತಮಿಳುನಾಡಿಗೆ ನೀರು ಕೊಡಲು ಹೇಗೆ ಸಾಧ್ಯ. ರಾಜ್ಯ ಸರ್ಕಾರದ ನಿಲುವನ್ನು ಈವರೆಗೂ ಬೆಂಬಲಿಸಿದ್ದೇವೆ. ಆದರೆ, ಈಗ ರಾಜ್ಯ ಸರ್ಕಾರದ ನಿಲುವನ್ನು ಬೆಂಬಲಿಸುವುದಿಲ್ಲ. ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಭುಗಿಲೇಳುತ್ತದೆ ಎಂದರು.

ಇದನ್ನೂ ಓದಿ:ಕಾವೇರಿ ನದಿ ನೀರು ಸಂಕಷ್ಟ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿರುವ ಸಿದ್ದರಾಮಯ್ಯ, ಹರಿಪ್ರಸಾದ್ ಬಗ್ಗೆ ಕಾಮೆಂಟ್ ಮಾಡಲ್ಲ ಎಂದರು!

ಏನಾದರೂ ಬೇಕಾದರೂ ಆಗಲಿ, ನಮ್ಮ ‌ಮೇಲೆ ಲಾಠಿ ಚಾರ್ಜ್ ಆಗಲಿ, ಫೈರ್ ಮಾಡಿ, ಜೈಲಿಗೆ ಹಾಕಿದ್ರು ಅಷ್ಟೇ ನಾವು ಯಾವತ್ತೂ ಹೆದರಲ್ಲ, ಹೆದರುವುದು ಇಲ್ಲ. ಕಾವೇರಿ ಕನ್ನಡಿಗರ ಜೀವನದಿ ಅದರ ರಕ್ಷಣೆಗಾಗಿ ನಾವು ಏನು ಬೇಕಾದರೂ ಮಾಡಲು ತಯಾರಿದ್ದೇವೆ. ಮುಂದಿನ ಹೋರಾಟಕ್ಕಾಗಿ ಇಂದು ಗೋಲ್ಡ್ ಫಿಂಚ್ ಹೋಟೆಲ್​ನಲ್ಲಿ ಸಭೆ ಕರೆದಿದ್ದೇವೆ. 29 ರಿಂದ ಸೆಪ್ಟೆಂಬರ್ 12 ರ ವರೆಗೆ ಪ್ರತಿದಿನ ಐದು ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೆ, ನಾವು ಯಾರು ಸಹ ಅದಕ್ಕೆ ಧ್ವನಿ ಎತ್ತಲಿಲ್ಲ. ಇವತ್ತು ಮತ್ತೆ ಐದು ಸಾವಿರ ಕ್ಯೂಸೆಕ್ ‌ನೀರನ್ನು ಬಿಡಲೇಬೇಕು ಅಂತ ಹೇಳಿ ಆದೇಶ ಮಾಡುವುದಾದರೇ ನಾವು ದಿಕ್ಕರಿಸುತ್ತೇವೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಇರಬಹುದು, ಕಾವೇರಿ ನಿಯಂತ್ರಣ ಮಂಡಳಿ ಇರಬಹುದು ನಾವು ಅದನ್ನು ಧಿಕ್ಕರಿಸುತ್ತಿವಿ. ರೈತರಿಗೆ ನೀರಿಲ್ಲ, ಬೆಂಗಳೂರಿನ ಜನರಿಗೆ ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ಕುಳಿತುಕೊಂಡು ಧಿಮಾಕು ಮಾಡಿಕೊಂಡು ನೀರು ನೀರು ಕೊಡಿ ಅಂತೇಳಿ ಹೇಳುತ್ತಿದ್ದರೆ ನೀರು ಕೊಡಲು ಹೇಗೆ ಸಾಧ್ಯ. ನೀವೇನಾದ್ರು ಕಾವೇರಿ ‌ನೀರು ನಿರ್ವಹಣಾ ಮಂಡಳಿ ಆದೇಶವನ್ನು ಪಾಲಿಸಿ ನೀರು ಬಿಟ್ಟರೆ, ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಭುಗಿಲೇಳುತ್ತದೆ. ಶನಿವಾರ ಜೈಲ್ ಬರೋ ಚಳವಳಿ ಮಾಡ್ತಿವಿ, ಎಲ್ಲಾ ಕಡೆಗಳಲ್ಲಿ ಮುತ್ತಿಗೆ ಹಾಕ್ತಿವಿ. ಎಷ್ಟು ಜನರನ್ನು ಜೈಲಿಗೆ ಈ ಸರ್ಕಾರ ಹಾಕುತ್ತದೋ ಹಾಕಲಿ ಎಂದರು.

ಇದನ್ನೂ ಓದಿ:ಕಾವೇರಿ ನದಿ ನೀರು ವಿವಾದ: ಇಂದು ತುರ್ತು ಸಭೆ ಕರೆದ ಸಿದ್ದರಾಮಯ್ಯ, ಪ್ರತಿಪಕ್ಷಗಳ ನಾಯಕರಿಗೂ ಆಹ್ವಾನ

ಸಿದ್ದರಾಮಯ್ಯ ಈ ಸಮಯದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ನಮ್ಮ ಎಂಪಿಗಳಿಗೆ ನಾಚಿಕೆ ಆಗಬೇಕು ನರಸತ್ತಂತೆ ಕುಳಿತುಕೊಂಡಿದ್ದಾರೆ. ಒಬ್ಬ ಎಂಪಿ‌ ಮಾತಾಡ್ತಿಲ್ಲ ಬಿಜೆಪಿಯಿಂದ 25 ಎಂಪಿಗಳಿದ್ದಾರೆ. ಎಲ್ಲಾ ಎಂಪಿಗಳು ಕೂಡ ಯಾರು ಮಾತಾಡ್ತಿಲ್ಲ, ಪ್ರಧಾನಿಗಳನ್ನು ಭೇಟಿ ಮಾಡ್ತಿಲ್ಲ. ರಣಹೇಡಿ ಎಂಪಿಗಳು ಸುಮ್ಮನೆ ಕುಳಿತುಕೊಂಡಿದ್ದಾರೆ. ನೀವು ಬಾಯಿ ಬಿಡಬೇಕು. ಕರ್ನಾಟಕ ಎಂಪಿಗಳ ನಿಯೋಗ ಹೋಗಿ ಪ್ರಧಾನಿ ಭೇಟಿ ಮಾಡಿ. ಕರ್ನಾಟಕ ಕಾವೇರಿಗಾಗಿ ಎಲ್ಲರೂ ಒಂದಾಗಿ‌ ನಾಯಿ ನರಿಗಳಂತೆ‌ ಕಚ್ಚಾಡುವುದು ಬೇಡ ಎಂದು ಹೇಳಿದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Wed, 13 September 23

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ