ಬೆಂಗಳೂರು: ಆಗಸ್ಟ್ ತಿಂಗಳಲ್ಲಿ ಟಿಕೆಟ್ ಇಲ್ಲದೆ ಪಯಾಣಿಸಿದ 3208 ಪ್ರಯಾಣಿಕರಿಗೆ ದಂಡ ಹಾಕಿದ ಕೆಎಸ್ಆರ್ಟಿಸಿ; ಬಂದ ಮೊತ್ತವೆಷ್ಟು ಗೊತ್ತಾ?
ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 69 ಸಾವಿರ ರೂಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದು, ತಪ್ಪಿತಸ್ಥರ ವಿರುದ್ಧ ಇಲಾಖಾ ರೀತ್ಯಾ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಲಾಗಿದೆ. ಪ್ರಯಾಣಿಕರು, ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್ ಅಥವಾ ಪಾಸ್ ಪಡೆದು ಪ್ರಯಾಣ ಮಾಡುವಂತೆ, ನಿಗಮವು ಈ ಮೂಲಕ ಪ್ರಯಾಣಿಕರಲ್ಲಿ ಮನವಿ ಮಾಡಿದೆ.
ಬೆಂಗಳೂರು, ಸೆ.13: ಆಗಸ್ಟ್ ತಿಂಗಳಲ್ಲಿ ಕೆಎಸ್ಆರ್ಟಿಸಿ (KSRTC) ನಿಗಮವು ಟಿಕೆಟ್ ಇಲ್ಲದೆ ಪಯಾಣಿಸಿದ 3208 ಪ್ರಯಾಣಿಕರಿಗೆ ದಂಡ ಹಾಕಿದೆ. ಹೌದು, ತನ್ನ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ, ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ ಬರೊಬ್ಬರಿ 44,416 ವಾಹನಗಳನ್ನು ತನಿಖೆಗೊಳಪಡಿಸಿ 3020 ಪ್ರಕರಣಗಳನ್ನು ಪತ್ತೆಹಚ್ಚಿ, 3208 ಪ್ರಯಾಣಿಕರಿಗೆ 4ಲಕ್ಷದ 70 ಸಾವಿರ ರೂ ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ನಿಗಮದ ಆದಾಯದಲ್ಲಿ ಸೋರಿಕೆಯಾಗುತ್ತಿದ್ದ ಸಾವಿರಾರು ರೂಪಾಯಿ ಹಣ ಪತ್ತೆ
ಹೌದು, ದಂಡ ಹಾಕಿದಲ್ಲದೆ, ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 69 ಸಾವಿರ ರೂಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದು, ತಪ್ಪಿತಸ್ಥರ ವಿರುದ್ಧ ಇಲಾಖಾ ರೀತ್ಯಾ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು, ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್ ಅಥವಾ ಪಾಸ್ ಪಡೆದು ಪ್ರಯಾಣ ಮಾಡುವಂತೆ, ನಿಗಮವು ಈ ಮೂಲಕ ಪ್ರಯಾಣಿಕರಲ್ಲಿ ಮನವಿ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ:ಪ್ಯಾಕೆಟ್ನಲ್ಲಿ ಒಂದೇ ಒಂದು ಬಿಸ್ಕತ್ ಕಡಿಮೆ ಕೊಟ್ಟು.. ಒಂದು ಲಕ್ಷ ರೂಪಾಯಿ ದಂಡ ಕಟ್ಟಿದ ಸನ್ ಫೀಸ್ಟ್!
ಬೆಂಗಳೂರು ಬಂದ್ ಕರೆ ಕೊಟ್ಟಿತ್ತು. ಇದರಿಂದ ಬಿಎಂಟಿಸಿಗೆ ಕೋಟಿ ಕೋಟಿ ಆದಾಯ ಹರಿದು ಬಂದಿದೆ ಎಂದು ಟಿವಿ9 ಗೆ ಬಿಎಂಟಿಸಿಯ ಹಿರಿಯ ಅಧಿಕಾರಿಗಳ ಮಾಹಿತಿ ನೀಡಿದ್ದರು. ಬಂದ್ ಇರುವ ಹಿನ್ನಲೆ ಖಾಸಗಿ ಸಾರಿಗೆಗಳನ್ನು ಅವಲಂಬಿಸುತ್ತಿದ್ದವರು, ನಿನ್ನೆ ಸಾರಿಗೆ ಬಸ್ಗಳನ್ನು ಅವಲಂಬಿಸುವಂತಾಗಿತ್ತು. ಹೀಗಾಗಿ ಬಿಎಂಟಿಸಿ ಬಸ್ಗಳಿಗೆ ಡಿಮಾಂಡ್ ಹೆಚ್ಚಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಿಎಂಟಿಸಿ ಕಡೆ ಮುಖ ಮಾಡಿದ್ದರು.
ಇನ್ನು ಈ ಕುರಿತು ಹೇಳಿದ್ದ ಅಧಿಕಾರಿಯೊಬ್ಬರು ‘ಯಾವಾಗಲೂ 2400 ರಿಂದ 2500 ಶೆಡ್ಯುಲ್ ಅಪರೇಟ್ ಮಾಡುತ್ತಿದ್ದೇವೂ, ನಿನ್ನೆ 384 ಶೆಡ್ಯುಲ್ ಹೆಚ್ಚುವರಿ ಸಂಚಾರ ಮಾಡಿ, 1600 ಟ್ರಿಪ್ ಹೆಚ್ಚುವರಿಯಾಗಿ ಮಾಡಲಾಗಿತ್ತು. ಜೊತೆಗೆ ಏರ್ಪೋರ್ಟ್ಗೆ ವಿಶೇಷವಾಗಿ ಸುಮಾರು 55 ರಿಂದ 60 ಹೆಚ್ಚುವರಿ ಟ್ರಿಪ್ಗಳನ್ನು ಮಾಡಲಾಗಿದ್ದು, 12 ಸಾವಿರ ಜನ ಯಾವಾಗಲೂ ಏರ್ಪೋರ್ಟ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಬಂದ್ ದಿನ ಏರ್ಪೋರ್ಟ್ ರಸ್ತೆಯಲ್ಲಿ ಬರೊಬ್ಬರಿ 22,371 ಜನ ಓಡಾಟ ನಡೆಸಿದ್ದಾರೆ. ಇದರಿಂದ ಒಂದೇ ದಿನ60 ಲಕ್ಷ ರೆವಿನ್ಯೂ ಏರ್ಪೋರ್ಟ್ ಬಸ್ಗಳಿಂದ ಬಂದಿದೆ ಎಂದಿದ್ದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ