Karnataka Bandh; ನಾಡು-ಜಲ-ನೆಲದ ವಿಷಯದಲ್ಲಿ ಯಾವುದೇ ರಾಜಿಯಿಲ್ಲ, ಕಾವೇರಿ ನಮ್ಮದು: ತನ್ವೀರ್ ಪಾಶಾ, ಓಲಾ-ಊಬರ್ ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ

Karnataka Bandh; ನಾಡು-ಜಲ-ನೆಲದ ವಿಷಯದಲ್ಲಿ ಯಾವುದೇ ರಾಜಿಯಿಲ್ಲ, ಕಾವೇರಿ ನಮ್ಮದು: ತನ್ವೀರ್ ಪಾಶಾ, ಓಲಾ-ಊಬರ್ ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 28, 2023 | 11:39 AM

Karnataka Bandh: ನಾಳೆ ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಕ್ಯಾಬ್ ಗಳನ್ನು ರಸ್ತೆಗಿಳಿಸದೆ ಸೇವೆಗಳನ್ನು ನಿಲ್ಲಿಸಲಾಗುವುದು ಎಂದು ಪಾಶಾ ಹೇಳಿದರು. ಅವರು ಹೇಳುವ ಪ್ರಕಾರ ಶುಕ್ರವಾರದಂದು ಓಲಾ ಮತ್ತು ಊಬರ್ ಸಂಸ್ಥೆಗಳಿಗೆ ಸೇರಿದ ಸುಮಾರು 1 ಲಕ್ಷ 25 ಸಾವಿರ ಆಟೋಗಳು ಹಾಗೂ ಸುಮಾರು 50,000 ಕ್ಯಾಬ್ ಗಳು ಪಾರ್ಕ್ ಆದ ಸ್ಥಳಗಳಿಂದ ಕದಲುವುದಿಲ್ಲ.

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಕನ್ನಡ ಪರ ಸಂಘಟನೆಗಳು (Pro Kannada organisations) ನಾಳೆ ಅಖಂಡ ಕರ್ನಾಟಕ ಬಂದ್ ಗೆ (Karnataka Bandh) ಕರೆ ನೀಡಿದ್ದು ಬಹುತೇಕ ಸೇವೆಗಳು ಸ್ತಬ್ಧಗೊಳ್ಳಲಿವೆ. ಌಪ್-ಆಧಾರಿತ ಕ್ಯಾಬ್ ಗಳು ನಾಳೆ ರಸ್ತೆಗಿಳಿಯಲ್ಲ ಎಂದು ಓಲಾ-ಊಬರ್ ಕ್ಯಾಬ್ ಚಾಲಕರ ಸಂಘದ ರಾಜ್ಯಾಧ್ಯಕ್ಷ ತನ್ವೀರ್ ಪಾಶಾ (Tanveer Pasha ) ಹೇಳಿದ್ದಾರೆ. ನಾಳಿನ ಹೋರಾಟ ರಾಜ್ಯದ ಜೀವನದಿ ಕಾವೇರಿಯ ನೀರಿಗಾಗಿ ನಡೆಸಲಾಗುತ್ತಿದೆ, ನಾಡು-ಜಲ-ನೆಲದ ವಿಷಯ ಬಂದಾಗ ಯಾವುದೇ ರಾಜಿಯಿಲ್ಲ, ಓಲಾ-ಊಬರ್ ಸಂಸ್ಥೆಗಳು ಹೋರಾಟದಲ್ಲಿ ಪಾಲ್ಗೊಂಡು ಕಾವೇರಿ ನೀರು ನಮ್ಮದು ಅಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಿವೆ, ನಾಳೆ ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಕ್ಯಾಬ್ ಗಳನ್ನು ರಸ್ತೆಗಿಳಿಸದೆ ಸೇವೆಗಳನ್ನು ನಿಲ್ಲಿಸಲಾಗುವುದು ಎಂದು ಪಾಶಾ ಹೇಳಿದರು. ಅವರು ಹೇಳುವ ಪ್ರಕಾರ ಶುಕ್ರವಾರದಂದು ಓಲಾ ಮತ್ತು ಊಬರ್ ಸಂಸ್ಥೆಗಳಿಗೆ ಸೇರಿದ ಸುಮಾರು 1 ಲಕ್ಷ 25 ಸಾವಿರ ಆಟೋಗಳು ಹಾಗೂ ಸುಮಾರು 50,000 ಕ್ಯಾಬ್ ಗಳು ಪಾರ್ಕ್ ಆದ ಸ್ಥಳಗಳಿಂದ ಕದಲುವುದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ