ಕರ್ನಾಟಕ ಸರ್ಕಾರಕ್ಕೆ ಸ್ವಾಭಿಮಾನ ಇದ್ದರೆ ಎಂಇಎಸ್ ನಿಷೇಧಿಸಲಿ; ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಹೇಳಿಕೆ
ಪಾಕಿಸ್ತಾನದ ಗಡಿಯ ಹಾಗೆ ಬೆಳಗಾವಿಯಲ್ಲಿ ನಡೆದುಕೊಳ್ತಿದ್ದಾರೆ. ಬೆಳಗಾವಿಯಲ್ಲಿ ಎಮ್ಇಸಿ ಪುಂಡರು ಉಗ್ರರಂತೆ ನಡೆದುಕೊಳ್ಳುತ್ತಿದ್ದಾರೆ. ಬೆಳಗಾವಿ ಜಿಲ್ಲೆ ರಾಜಕಾರಣಿಗಳು ತೆವಲಿಗಾಗಿ ಸಹಿಸಿಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನವರು ಎಮ್ಇಎಸ್ ಸಹಿಸಿಕೊಂಡಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಸ್ವಾಭಿಮಾನ ಇದ್ದರೆ ಎಂಇಎಸ್ ನಿಷೇಧಿಸಲಿ. ಎಂಇಎಸ್ ಗೂಂಡಾಗಿರಿ ಮಾಡುತ್ತಿದೆ, ದೌರ್ಜನ್ಯ ಮಾಡುತ್ತಿದೆ. ಎಂಇಎಸ್ ಪುಂಡರು ಕನ್ನಡಿಗರ ಸ್ವಾಭಿಮಾನ ಕೆರಳಿಸುತ್ತಿದ್ದಾರೆ. ಕನ್ನಡಿಗರ ಮನೆಗಳಿಗೆ ಬೆಂಕಿ ಹಚ್ಚಿ ಪುಂಡಾಟಿಕೆ ಮಾಡುತ್ತಿದ್ದಾರೆ. ಎಲ್ಲವನ್ನೂ ಸಹಿಸಿಕೊಂಡಿರುವ ಇದು ರಣಹೇಡಿ ಸರ್ಕಾರ. ಗೂಂಡಾ ಕಾಯ್ದೆಯಡಿ ಎಂಇಎಸ್ ಪುಂಡರನ್ನು ಬಂಧಿಸಬೇಕು ಅಂತ ಬೆಂಗಳೂರಿನಲ್ಲಿ ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಆಗ್ರಹಿಸಿದ್ದಾರೆ.
ಪಾಕಿಸ್ತಾನದ ಗಡಿಯ ಹಾಗೆ ಬೆಳಗಾವಿಯಲ್ಲಿ ನಡೆದುಕೊಳ್ತಿದ್ದಾರೆ. ಬೆಳಗಾವಿಯಲ್ಲಿ ಎಮ್ಇಸಿ ಪುಂಡರು ಉಗ್ರರಂತೆ ನಡೆದುಕೊಳ್ಳುತ್ತಿದ್ದಾರೆ. ಬೆಳಗಾವಿ ಜಿಲ್ಲೆ ರಾಜಕಾರಣಿಗಳು ತೆವಲಿಗಾಗಿ ಸಹಿಸಿಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನವರು ಎಮ್ಇಎಸ್ ಸಹಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಜಕೀಯ ನಾಯಕರು ರಣಹೇಡಿಗಳಾ? ಸೋಮವಾರ ಸದನದಲ್ಲಿ ಮಾತಾಡದಿದ್ದರೆ ಅವರು ರಣಹೇಡಿಗಳು ಅಂತ ನಾರಾಯಣಗೌಡ ಆಕ್ರೋಶ ಹೊರಹಾಕಿದ್ದಾರೆ.
ರಾಜಕಾರಣಿಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು. ಗೂಂಡಾಗಿರಿ ಮಾಡುವ ಎಂಇಎಸ್ ಹುಚ್ಚರಿಗೆ ಪಾಠ ಕಲಿಸಬೇಕು. ಎಂಇಎಸ್ ನಿಷೇಧದ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯದಲ್ಲಿ ಕರವೇ ಬೃಹತ್ ಹೋರಾಟ ಮಾಡಲಿದೆ ಅಂತ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಬಾವುಟ ಸುಟ್ಟಿದ್ದು ಕ್ಷಮಿಸಲಾರದ ಅಪರಾಧ; ವಾಟಾಳ್ ನಾಗರಾಜ್ ಬೆಳಗಾವಿಯಲ್ಲಿ ಎಮ್ಇಎಸ್ ಪುಂಡಾಟ, ಗೂಂಡಾಗಿರಿ, ರೌಡಿತನ ಜಾಸ್ತಿಯಾಗಿದೆ. ಶಿವಸೇನೆ ಕನ್ನಡದ ಬಾವುಟ ಸುಟ್ಟಿದ್ದು ಕ್ಷಮಿಸಲಾರದ ಅಪರಾಧ. ಇದನ್ನು ಕನ್ನಡ ಚಳವಳಿ ವಾಟಾಳ್ ಪಕ್ಷ ತೀವ್ರವಾಗಿ ಖಂಡಿಸುತ್ತೆ. ಇಂದಿನಿಂದ ಎನ್ಇಎಸ್, ಶಿವಸೇನೆ ವಿರುದ್ಧ ರಾಜ್ಯಾದ್ಯಂತ ಹೋರಾಟ ಹೋರಾಟ ಮಾಡಲಿದೆ. ಕರ್ನಾಟಕ ಸರ್ಕಾರ ಬದುಕಿಲ್ಲ, ಸಂಪೂರ್ಣ ಹೋಗಿದೆ. ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳು ಮಾತ್ರ ಉಳಿದಿವೆ. ನಾಳೆ ರಾಮನಗರದಲ್ಲಿ ಪ್ರತಿಭಟನೆ ಮಾಡುತ್ತೇವೆ. ಸೋಮವಾರ ಎನ್ಇಎಸ್ ವಿರುದ್ಧ ಕರಾಳ ದಿನಾಚರಣೆ ಮಾಡಲಾಗುತ್ತದೆ ಅಂತ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಇದನ್ನೂ ಓದಿ
ತಗ್ಗಿದ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಕಲೆಕ್ಷನ್; ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಇಲ್ಲಿದೆ ಮಾಹಿತಿ
ಸಚ್ಚಿದಾನಂದ ಆಶ್ರಮದಲ್ಲಿ ಕಾರ್ಯಸಿದ್ಧಿ ಹನುಮಾನ್ ದೇವಾಲಯ ಉದ್ಘಾಟನೆ ಮಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ