ತಗ್ಗಿದ ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಕಲೆಕ್ಷನ್; ಬಾಕ್ಸ್​ ಆಫೀಸ್​ ಗಳಿಕೆ​ ಬಗ್ಗೆ ಇಲ್ಲಿದೆ ಮಾಹಿತಿ

ತಮಿಳುನಾಡಿನಲ್ಲೂ ಚಿತ್ರದ ಕಲೆಕ್ಷನ್​ ಇಳಿಕೆ ಆಗಿದೆ. ಮೊದಲ ದಿನ ಈ ಸಿನಿಮಾ 10 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ಊಹಿಸಲಾಗಿತ್ತು. ಆದರೆ, ಚಿತ್ರ ಗಳಿಕೆ ಮಾಡಿದ್ದು ಕೇವಲ 4 ಕೋಟಿ ರೂಪಾಯಿ ಮಾತ್ರ.

ತಗ್ಗಿದ ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಕಲೆಕ್ಷನ್; ಬಾಕ್ಸ್​ ಆಫೀಸ್​ ಗಳಿಕೆ​ ಬಗ್ಗೆ ಇಲ್ಲಿದೆ ಮಾಹಿತಿ
ಅಲ್ಲು ಅರ್ಜುನ್​-ರಶ್ಮಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 18, 2021 | 1:37 PM

‘ಪುಷ್ಪ’ ಸಿನಿಮಾ (Pushpa Movie) ಡಿಸೆಂಬರ್​ 17ರಂದು ತೆರೆಗೆ ಬಂದಿದೆ. ಈ ಚಿತ್ರದ ಎದುರು ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್​ ಆಗದ ಕಾರಣ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಆದಾಗ್ಯೂ ಬಾಕ್ಸ್​ ಆಫೀಸ್​ ಕಲೆಕ್ಷನ್ (Pushpa Movie Box Office Collection)ಅಂದುಕೊಂಡ ಮಟ್ಟದಲ್ಲಿ ಆಗಿಲ್ಲ. ‘ಪುಷ್ಪ’ಕ್ಕೆ ಪೈರಸಿ ಕಾಟ ಅಂಟಿದ್ದು ಒಂದು ಕಡೆಯಾದರೆ, ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿಲ್ಲ. ಹೀಗಾಗಿ, ಸಿನಿಮಾ ಅಂದುಕೊಂಡ ಮಟ್ಟಿಗೆ ಕಲೆಕ್ಷನ್​ ಮಾಡಿಲ್ಲ. ಹಾಗಾದರೆ, ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಿದೆ? ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಪುಷ್ಪ’ ಆಂಧ್ರ ಪ್ರದೇಶದ ನಿಜಾಮ್​ ಭಾಗದಲ್ಲಿ11.44 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಉಳಿದಂತೆ ಕೃಷ್ಣ ಭಾಗದಲ್ಲಿ ಒಂದು ಕೋಟಿ ರೂಪಾಯಿ, ಗುಂಟೂರು ಭಾಗದಲ್ಲಿ 2.28 ಕೋಟಿ ರೂಪಾಯಿ ಸೇರಿದಂತೆ ಒಟ್ಟೂ 24.90 ಕೋಟಿಯನ್ನು ಈ ಚಿತ್ರ ಕಲೆಕ್ಷನ್ ಮಾಡಿದೆ. ‘ಪುಷ್ಪ’ ಮೊದಲ ದಿನ 30-35 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ಸಿನಿಪಂಡಿತರು ಅಂದಾಜಿಸಿದ್ದರು. ಆದರೆ, ಹಾಗಾಗಿಲ್ಲ. ತಮಿಳುನಾಡಿನಲ್ಲೂ ಚಿತ್ರದ ಕಲೆಕ್ಷನ್​ ಇಳಿಕೆ ಆಗಿದೆ. ಮೊದಲ ದಿನ ಈ ಸಿನಿಮಾ 10 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ಊಹಿಸಲಾಗಿತ್ತು. ಆದರೆ, ಚಿತ್ರ ಗಳಿಕೆ ಮಾಡಿದ್ದು ಕೇವಲ 4 ಕೋಟಿ ರೂಪಾಯಿ ಮಾತ್ರ.

‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಪಕ್ಕಾ ಹಳ್ಳಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ರಕ್ತ ಚಂದನದ ಕಳ್ಳ ಸಾಗಾಣಿಕೆಯ ಬಗ್ಗೆ ಹೇಳಲಾಗಿದೆ. ಅಲ್ಲು ಅರ್ಜುನ್ ಲುಕ್​ ಬಗ್ಗೆ, ಸಿನಿಮಾ ಮೇಕಿಂಗ್​ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಸಿನಿಮಾದ ಅವಧಿ ದೀರ್ಘ ಎನಿಸುತ್ತದೆ. ಸಿನಿಮಾ ಬಗ್ಗೆ ನೆಗೆಟಿವ್​ ಮಾತನಾಡಿದವರೇ ಹೆಚ್ಚು. ಈ ಕಾರಣಕ್ಕೆ ಅನೇಕರು ಈ ಸಿನಿಮಾ ಟ್ರೋಲ್​ ಮಾಡುತ್ತಿದ್ದಾರೆ.

ಈ ಮೊದಲು ‘ಪುಷ್ಪ’ ಬಗ್ಗೆ ಮಾತನಾಡಿದ್ದ ‘ಉಪ್ಪೇನಾ’ ನಿರ್ದೇಶಕ ಬುಚಿ ಬಾಬು, ‘ನಾನು ಸಿನಿಮಾದ ಮೊದಲ ಭಾಗವನ್ನು ವೀಕ್ಷಣೆ ಮಾಡಿದ್ದೇನೆ. ಈ ಚಿತ್ರ 10 ಕೆಜಿಎಫ್​ಗೆ ಸಮ. ಸಿನಿಮಾದಲ್ಲಿ ಬರುವ ಪಾತ್ರಗಳು ತುಂಬಾನೇ ಅದ್ಭುತವಾಗಿ ಮೂಡಿ ಬಂದಿವೆ. ನಾನು ಇದನ್ನು ಅತಿಶಯೋಕ್ತಿಯಾಗಿ ಹೇಳುತ್ತಿಲ್ಲ. ಸಿನಿಮಾ ನೋಡಿದ ಮೇಲೆ ನಿಮಗೇ ತಿಳಿಯಲಿದೆ’ ಎಂದಿದ್ದರು. ಈಗ ಚಿತ್ರ ರಿಲೀಸ್​ ಆಗಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕನ್ನಡಿಗರು ಹೇಳುತ್ತಿದ್ದಾರೆ.

ಇದನ್ನೂ ಓದಿ: 

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್