‘ನಿಮ್ಮ ಬುದ್ಧಿ ಶುದ್ಧವಿಲ್ಲ’ ಎನಿಸಿಕೊಂಡ್ರೂ ಕೇಕೆ ಹಾಕಿ ಕುಣಿದ ಗಂಡಸರನ್ನು ನೋಡಿ ಸಮಂತಾ ಹೇಳಿದ್ದೇನು?

Samantha: ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಚಿತ್ರಕ್ಕೆ ಈ ಪರಿ ಹೈಪ್​ ಸೃಷ್ಟಿ ಆಗಲು ‘ಹು ಅಂತಿಯಾ ಮಾವ ಊಹೂ ಅಂತಿಯಾ ಮಾವ’ ಹಾಡು ಕೂಡ ಕಾರಣ. ಅದರ ಯಶಸ್ಸಿನಿಂದ ಸಮಂತಾ ಖುಷಿ ಆಗಿದ್ದಾರೆ.

‘ನಿಮ್ಮ ಬುದ್ಧಿ ಶುದ್ಧವಿಲ್ಲ’ ಎನಿಸಿಕೊಂಡ್ರೂ ಕೇಕೆ ಹಾಕಿ ಕುಣಿದ ಗಂಡಸರನ್ನು ನೋಡಿ ಸಮಂತಾ ಹೇಳಿದ್ದೇನು?
ಸಮಂತಾ
Follow us
TV9 Web
| Updated By: ಮದನ್​ ಕುಮಾರ್​

Updated on: Dec 18, 2021 | 2:11 PM

ನಟಿ ಸಮಂತಾ (Samantha) ಅವರ ಚಾರ್ಮ್​ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ವಿಚ್ಛೇದನ ಪಡೆದುಕೊಂಡ ಬಳಿಕ ಅವರ ಸಿನಿಮಾ ಆಯ್ಕೆಗಳು ಬದಲಾಗಿವೆ. ಇತ್ತೀಚೆಗಂತೂ ಅವರು ಬೋಲ್ಡ್​ ಪಾತ್ರಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ರಿಲೀಸ್​ ಆಗಿರುವ ‘ಪುಷ್ಪ’ (Pushpa Movie) ಸಿನಿಮಾದಲ್ಲಿ ಸಮಂತಾ ಐಟಂ ಡ್ಯಾನ್ಸ್​ ಮಾಡಿದ್ದಾರೆ. ‘ಹೂ ಅಂತಿಯಾ ಮಾವ.. ಊಹೂ ಅಂತಿಯಾ ಮಾವ..’ ಹಾಡಿನಲ್ಲಿ ಅವರು ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಆ ಹಾಡಿನ ಸಾಹಿತ್ಯಕ್ಕೆ ಕೆಲವರು ತಕರಾರು ತೆಗೆದಿದ್ದರು. ಆ ವಿವಾದ ಏನೇ ಇದ್ದರೂ ಹಾಡಿನ ಕ್ರೇಜ್​ ಕಮ್ಮಿ ಆಗಿಲ್ಲ. ಚಿತ್ರಮಂದಿರಲ್ಲಿ ಈ ಹಾಡಿಗೆ ಪ್ರೇಕ್ಷಕರು ಹುಚ್ಚೆದು ಕುಣಿಯುತ್ತಿದ್ದಾರೆ. ಅದನ್ನು ಕಂಡು ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ.

ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಚಿತ್ರಕ್ಕೆ ಈ ಪರಿ ಹೈಪ್​ ಸೃಷ್ಟಿ ಆಗಲು ‘ಹು ಅಂತಿಯಾ ಮಾವ ಊಹೂ ಅಂತಿಯಾ ಮಾವ’ ಹಾಡು ಕೂಡ ಪ್ರಮುಖ ಕಾರಣ. ಚಿತ್ರಮಂದಿರದಲ್ಲಿ ಈ ಹಾಡು ಬಿತ್ತರ ಆಗುತ್ತಿದ್ದಂತೆಯೇ ಜನರು ಬಿಂದಾಸ್​ ಆಗಿ ಕುಣಿಯುತ್ತಿದ್ದಾರೆ. ಆ ವಿಡಿಯೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿರುವ ಸಮಂತಾ ಅವರು ‘ಇದೊಂದು ಹುಚ್ಚು’ ಎಂದು ಕ್ಯಾಪ್ಷನ್​ ನೀಡಿದ್ದಾರೆ. ತಮ್ಮ ಹಾಡಿಗೆ ಇಷ್ಟೊಂದು ಸಕ್ಸಸ್​ ಸಿಕ್ಕಿದ್ದಕ್ಕೆ ಅವರಿಗೆ ಖುಷಿ ಆಗಿದೆ.

ಈ ಹಾಡಿನಲ್ಲಿದೆ ವಿವಾದಾತ್ಮಕ ಸಾಹಿತ್ಯ!

ಯಾವುದೇ ರೀತಿಯ ಮಹಿಳೆಯರನ್ನು ಕಂಡರೂ ಕೂಡ ಗಂಡಸರು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ ಎಂಬ ಅರ್ಥ ಬರುವಂತಹ ಸಾಲುಗಳು ಈ ಹಾಡಿನಲ್ಲಿ ಇವೆ. ಅದರ ವಿರುದ್ಧ ಇತ್ತೀಚೆಗೆ ಪುರುಷರ ಸಂಘಟನೆಯೊಂದು ದೂರು ನೀಡಿತ್ತು. ಗಂಡಸರ ಬಗ್ಗೆ ಅವಹೇಳನಕಾರಿಯಾಗಿ ಹಾಡು ಬರೆಯಲಾಗಿದೆ ಎಂದು ಆರೋಪಿಸಲಾಗಿತ್ತು. ಅದೇ ಹಾಡಿಗೆ ಈಗ ಗಂಡಸರು ಹುಚ್ಚೆದ್ದು ಕುಣಿಯುತ್ತಿರುವುದು ಕಂಡು ಸಮಂತಾ ಫುಲ್​ ಖುಷ್​ ಆಗಿದ್ದಾರೆ.

ಮೊದಲ ದಿನ ‘ಪುಷ್ಪ’ ಸಿನಿಮಾ ಭಾರಿ ಕಲೆಕ್ಷನ್​ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಚಿತ್ರಕ್ಕೆ ಆದಾಯ ಹರಿದುಬಂದಿಲ್ಲ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಸಿನಿಮಾ ಪೈರಸಿ ಕಾಟಕ್ಕೆ ತುತ್ತಾಯಿತು. ಅದು ಕೂಡ ಚಿತ್ರದ ಕಲೆಕ್ಷನ್​ಗೆ ಪೆಟ್ಟು ಕೊಟ್ಟಿರುವ ಸಾಧ್ಯತೆ ಇದೆ.

ಇದನ್ನೂ ಓದಿ:

‘ಕುಟುಂಬಕ್ಕೆ ಮುಜುಗರ ತರುವ ಪಾತ್ರ ಮಾಡಲ್ಲ’; ಸಮಂತಾ ವಿಚ್ಛೇದನಕ್ಕೆ ಪರೋಕ್ಷವಾಗಿ ಕಾರಣ ನೀಡಿದ ನಾಗ ಚೈತನ್ಯ

ಮೊದಲ ದಿನವೇ ಲೀಕ್​ ಆಯ್ತು ರಶ್ಮಿಕಾ, ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ; ಕಲೆಕ್ಷನ್​ ಮೇಲೆ ಬೀಳಲಿದೆ ಪೆಟ್ಟು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ