AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗೂ ಮೊದಲೇ ಶ್ರೀದೇವಿ ಗರ್ಭಿಣಿಯಾಗಿದ್ರಾ? ಬೋನಿ ಕಪೂರ್ ಹೇಳಿದ್ರು ಅಸಲಿ ಕಥೆ

ಮದುವೆಗೂ ಮುನ್ನವೇ ಗರ್ಭಿಣಿಯಾಗುವುದು ಬಾಲಿವುಡ್​​ನಲ್ಲಿ ಇತ್ತೀಚೆಗೆ ಸಾಮಾನ್ಯ. ಆಲಿಯಾ ಭಟ್,  ಸ್ವರಾ ಭಾಸ್ಕರ್ ಸೇರಿ ಅನೇಕರು ಈ ಸಾಲಿನಲ್ಲಿದ್ದಾರೆ. ಆದರೆ 90ರ ದಶಕದಲ್ಲಿ ಈ ರೀತಿಯ ವಿಷಯಗಳನ್ನು ನಟಿಯರು ಹೇಳಿಕೊಳ್ಳುತ್ತಿರಲಿಲ್ಲ. ಹೇಳಿದರೂ ಅಭಿಮಾನಿಗಳು ಒಪ್ಪಿಕೊಳ್ಳುತ್ತಿರಲಿಲ್ಲ. ಶ್ರೀದೇವಿ ಅವರು ಮದುವೆಗೂ ಮೊದಲೇ ಗರ್ಭಿಣಿ ಆಗಿದ್ದರು ಎನ್ನಲಾಗಿತ್ತು.

ಮದುವೆಗೂ ಮೊದಲೇ ಶ್ರೀದೇವಿ ಗರ್ಭಿಣಿಯಾಗಿದ್ರಾ? ಬೋನಿ ಕಪೂರ್ ಹೇಳಿದ್ರು ಅಸಲಿ ಕಥೆ
ಜಾನ್ವಿ, ಬೋನಿ, ಶ್ರೀದೇವಿ
ರಾಜೇಶ್ ದುಗ್ಗುಮನೆ
|

Updated on:Oct 04, 2023 | 7:08 AM

Share

ಶ್ರೀದೇವಿ (Sridevi) ಮೃತಪಟ್ಟು ಹಲವು ವರ್ಷ ಕಳೆದಿದೆ. ಅವರ ಸಾವಿನ ವಿಚಾರ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಇಷ್ಟು ವರ್ಷ ಶ್ರೀದೇವಿ ವಿಚಾರದಲ್ಲಿ ಮೌನ ತಾಳಿದ್ದ ಪತಿ ಬೋನಿ ಕಪೂರ್ ಅವರು ಈಗ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಶ್ರೀದೇವಿ (Sridevi) ಸಾವಿನ ವಿಚಾರದಲ್ಲಿ ಹಲವು ಅನುಮಾನಗಳು ಇದ್ದವು. ಆ ಬಗ್ಗೆ ಬೋನಿ ಕಪೂರ್ ಅವರು ಸ್ಪಷ್ಟನೆ ನೀಡಿದ್ದರು. ಶ್ರೀದೇವಿ ಮದುವೆಗೂ ಮೊದಲೇ ಗರ್ಭಿಣಿ ಆಗಿದ್ರಾ? ಆ ವಿಚಾರದ ಬಗ್ಗೆ ಬೋನಿ ಕಪೂರ್ ಅವರು ಮಾತನಾಡಿದ್ದಾರೆ.

ಮದುವೆಗೂ ಮುನ್ನವೇ ಗರ್ಭಿಣಿಯಾಗುವುದು ಬಾಲಿವುಡ್​​ನಲ್ಲಿ ಇತ್ತೀಚೆಗೆ ಸಾಮಾನ್ಯ. ಆಲಿಯಾ ಭಟ್,  ಸ್ವರಾ ಭಾಸ್ಕರ್ ಸೇರಿ ಅನೇಕರು ಈ ಸಾಲಿನಲ್ಲಿದ್ದಾರೆ. ಆದರೆ 90ರ ದಶಕದಲ್ಲಿ ಈ ರೀತಿಯ ವಿಷಯಗಳನ್ನು ನಟಿಯರು ಹೇಳಿಕೊಳ್ಳುತ್ತಿರಲಿಲ್ಲ. ಹೇಳಿದರೂ ಅಭಿಮಾನಿಗಳು ಒಪ್ಪಿಕೊಳ್ಳುತ್ತಿರಲಿಲ್ಲ. ಶ್ರೀದೇವಿ ಅವರು ಮದುವೆಗೂ ಮೊದಲೇ ಗರ್ಭಿಣಿ ಆಗಿದ್ದರು ಎನ್ನಲಾಗಿತ್ತು.

ಶ್ರೀದೇವಿ ಅವರು ಇದ್ದಕ್ಕಿದ್ದಂತೆ ಬೋನಿ ಕಪೂರ್ ಅವರನ್ನು ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಮದುವೆಯಾದ ಕೆಲವು ತಿಂಗಳ ಬಳಿಕೆ ಶ್ರೀದೇವಿ ತಾಯಿ ಆಗಲಿದ್ದಾರೆ ಎಂದು ಕಪೂರ್ ಕುಟುಂಬ ಘೋಷಿಸಿತು. ಆ ಸಮಯದಲ್ಲಿ ಈ ವಿಚಾರ ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು. ಮದುವೆಗೂ ಮುನ್ನವೇ ಶ್ರೀದೇವಿ ಗರ್ಭಿಣಿಯಾಗಿದ್ದರು ಎಂದು ಹಲವರು ಪಿಸುಗುಟ್ಟಿದ್ದರು. ಆದರೆ, ಅದು ಸುಳ್ಳು ಎಂದಿದ್ದಾರೆ ಬೋನಿ.

‘ನನ್ನ ಎರಡನೇ ಮದುವೆ 1996ರ ಜೂನ್ 2ರಂದು ಶಿರಡಿಯಲ್ಲಿ ನಡೆಯಿತು. ಮುಂದಿನ ವರ್ಷ ಜನವರಿಯಲ್ಲಿ ಶ್ರೀದೇವಿ ಗರ್ಭಿಣಿಯಾದಳು. ನಮ್ಮ ಮದುವೆಗೂ ಮುನ್ನವೇ ಶ್ರೀದೇವಿ ಗರ್ಭಿಣಿಯಾಗಿದ್ದಾರೆ ಎಂದು ಕೆಲವರು ವದಂತಿ ಹಬ್ಬಿಸಿದ್ದರು. ನಮ್ಮ ಮದುವೆಗೂ ಮುನ್ನವೇ ಜಾನ್ವಿ ಹುಟ್ಟಿದ್ದಾಳೆ ಎಂಬ ಮಾತೂ ಶುರುವಾಗಿದ್ದವು. ಆದರೆ ಅದು ನಿಜವಲ್ಲ. ಧಾರ್ಮಿಕತೆ ಬಗ್ಗೆ ನಮಗೆ ಸಂಪೂರ್ಣ ನಂಬಿಕೆಯಿದೆ. ನನ್ನ ಮಗಳು ಜಾನ್ವಿ, ನಾನು ಮತ್ತು ನಮ್ಮ ಕುಟುಂಬ ಮೂರು ತಿಂಗಳಿಗೊಮ್ಮೆ ತಿರುಪತಿಗೆ ಭೇಟಿ ನೀಡುತ್ತೇವೆ. ನನ್ನ ಪತ್ನಿ ಶ್ರೀದೇವಿ ಪ್ರತಿ ಹುಟ್ಟುಹಬ್ಬದಂದು ತಿರುಪತಿಗೆ ಬರುತ್ತಿದ್ದಳು’ ಎಂದಿದ್ದಾರೆ ಬೋನಿ.

ಇದನ್ನೂ ಓದಿ: Boney Kapoor: ‘ಶ್ರೀದೇವಿಯದ್ದು ಸಹಜ ಸಾವಲ್ಲ’: ಕೊನೆಗೂ ಮೌನ ಮುರಿದು ಕಾರಣ ತಿಳಿಸಿದ ಪತಿ ಬೋನಿ ಕಪೂರ್​

ಬೋನಿ ಹಾಗೂ ಶ್ರೀದೇವಿಗೆ ಇಬ್ಬರು ಮಕ್ಕಳು. ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಎಂದು ಇವರಿಗೆ ಹೆಸರು ಇಡಲಾಗಿದೆ. ಜಾನ್ವಿ ಈಗಾಗಲೇ ಬಾಲಿವುಡ್​ನಲ್ಲಿ ಹೆಸರು ಮಾಡಿದ್ದಾರೆ. ಖುಷಿ ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ನಟಿ ಶ್ರೀದೇವಿ 2018ರ ಫೆಬ್ರವರಿಯಲ್ಲಿ ದುಬೈನ ಹೋಟೆಲ್‌ನ ಬಾತ್‌ಟಬ್‌ ಒಳಗೆ ಆಕಸ್ಮಿಕವಾಗಿ ಜಾರಿಬಿದ್ದು ಸಾವನ್ನಪ್ಪಿದರು. ಸಂಬಂಧಿಕರ ಮದುವೆಗೆ ಇಡೀ ಕುಟುಂಬ ದುಬೈಗೆ ತೆರಳಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:08 am, Wed, 4 October 23