ಅನಿಲ್ ಕಪೂರ್ ಕುಟುಂಬ ಎಷ್ಟು ದೊಡ್ಡದು ಗೊತ್ತಾ? ಇಲ್ಲಿದೆ ಫ್ಯಾಮಿಲಿ ಟ್ರೀ

ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಇರುವ ಕಪೂರ್ ಕುಟುಂಬ ತುಂಬಾನೇ ದೊಡ್ಡದು. ಇವರಲ್ಲಿ ಅನೇಕರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಅನಿಲ್ ಕಪೂರ್ ಕುಟುಂಬ ಎಷ್ಟು ದೊಡ್ಡದು ಗೊತ್ತಾ? ಇಲ್ಲಿದೆ ಫ್ಯಾಮಿಲಿ ಟ್ರೀ
ಅನಿಲ್ ಕಪೂರ್
Follow us
ರಾಜೇಶ್ ದುಗ್ಗುಮನೆ
|

Updated on: Jul 12, 2023 | 1:34 PM

ಚಿತ್ರರಂಗದಲ್ಲಿ ನೆಪೋಟಿಸಂ ಎಂಬುದು ಮೊದಲಿನಿಂದಲೂ ಇದೆ. ಇದನ್ನು ಟೀಕಿಸುವವರು ಅನೇಕರಿದ್ದಾರೆ. ಆದರೆ, ನೆಪೋಟಿಸಂ ನಿಂತಿಲ್ಲ. ಚಿತ್ರರಂಗದ ಹಿನ್ನೆಲೆಯಿಂದ ಬಂದು ಅದನ್ನು ದುರ್ಬಳಕೆ ಮಾಡಿಕೊಳ್ಳದೆ ಯಶಸ್ಸು ಕಂಡ ಅನೇಕರಿದ್ದಾರೆ. ಆ ಸಾಲಿಗೆ ಅನಿಲ್ ಕಪೂರ್ (Anil Kapoor) ಕುಟುಂಬ ಕೂಡ ಸೇರ್ಪಡೆ ಆಗುತ್ತದೆ. ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಇರುವ ಕಪೂರ್ ಕುಟುಂಬ ತುಂಬಾನೇ ದೊಡ್ಡದು. ಇವರಲ್ಲಿ ಅನೇಕರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಸುರೇಂದರ್ ಕಪೂರ್: ಸುರೇಂದರ್ ಕಪೂರ್ ನಿರ್ಮಾಪಕರು. ಇವರು 1955ರಲ್ಲಿ ನಿರ್ಮಲ ಕಪೂರ್ ಅವರನ್ನು ಮದುವೆ ಆದರು. ಇವರಿಗೆ ಬೋನಿ ಕಪೂರ್, ಅನಿಲ್ ಕಪೂರ್, ಸಂಜಯ್ ಕಪೂರ್, ರೀನಾ ಕಪೂರ್ ಹೆಸರಿನ ಮಕ್ಕಳಿದ್ದಾರೆ.

ಅನಿಲ್ ಕಪೂರ್: ಅನಿಲ್ ಕಪೂರ್ 1984ರಲ್ಲಿ ಸುನೀತಾ ಅವರನ್ನು ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದಾರೆ. ಸೋನಮ್ ಮತ್ತು ರಿಯಾ ಹೆಣ್ಣಮಕ್ಕಳು. ಓರ್ವ ಮಗ ಹರ್ಷವರ್ಧನ್. ಸೋನಂ ಬಾಲಿವುಡ್​ನಲ್ಲಿ ಯಶಸ್ವಿ ಆಗಿದ್ದಾರೆ. ರಿಯಾ ನಿರ್ಮಾಪಕಿ ಆಗಿದ್ದಾರೆ. ಹರ್ಷವರ್ಧನ್ ಕಪೂರ್ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಸೋನಮ್ ಕಪೂರ್ ಅವರು ಆನಂದ್ ಅಹೂಜಾ ಅವರನ್ನು ಮದುವೆ ಆಗಿದ್ದು, ವಾಯು ಹೆಸರಿನ ಮಗ ಇದ್ದಾನೆ.

ಬೋನಿ ಕಪೂರ್: ಇವರು ಯಶಸ್ವಿ ನಿರ್ಮಾಪಕ. ಖ್ಯಾತ ನಟಿಯಾಗಿದ್ದ ಶ್ರೀದೇವಿ ಅವರು ಬೋನಿ ಕಪೂರ್ ಮದುವೆ ಆಗಿದ್ದರು. ಇವರಿಗೆ ಜಾನ್ವಿ ಮತ್ತು ಖುಷಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ಬೋನಿಯ ಮೊದಲ ಪತ್ನಿ ಮೋನಾ, ಅವರಿಗೆ ಅರ್ಜುನ್ ಕಪೂರ್ ಮತ್ತು ಅಂಶುಲಾ ಕಪೂರ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಅರ್ಜುನ್ ಹಾಗೂ ಜಾನ್ವಿ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಖುಷಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಮಲೈಕಾ ಅರೋರಾ ಜೊತೆ ಅರ್ಜುನ್ ಕಪೂರ್ ಲಿವಿನ್ ರಿಲೇಶನ್​ಶಿಪ್​ನಲ್ಲಿದ್ದಾರೆ.

ಸಂಜಯ್ ಕಪೂರ್: ಸಂಜಯ್ ಬಾಲಿವುಡ್‌ನಲ್ಲಿ ನಟನಾಗಿ ಕೆಲಸ ಗುರುತಿಸಿಕೊಂಡಿದ್ದಾರೆ. ಈಗ ಅವರು ನಿರ್ಮಾಪಕರೂ ಹೌದು. ಸಂಜಯ್ ಪತ್ನಿಯ ಹೆಸರು ಮಹಿಪ್ ಸಂಧು. ಇವರಿಗೆ ಮಗಳು ಶನಯಾ ಮತ್ತು ಮಗ ಜಹಾನ್ ಇದ್ದಾರೆ.

ಇದನ್ನೂ ಓದಿ:  ಪಕ್ಕಾ ಫ್ಯಾಮಿಲಿ ಮ್ಯಾನ್ ಅನಿಲ್ ಕಪೂರ್; 65ನೇ ವಸಂತಕ್ಕೆ ಕಾಲಿಟ್ಟ ನಟನ ಅಪರೂಪದ ಚಿತ್ರಗಳು ಇಲ್ಲಿವೆ

ರೀನಾ: ರೀನಾ ಅವರು ಸಂದೀಪ್ ಮರ್ವಾಹ್ ಅವರನ್ನು ವಿವಾಹವಾದರು. ರೀನಾ ಸಿನಿಮಾಗಳಿಂದ ದೂರ ಉಳಿದಿದ್ದರು. ಆದರೆ ಅವರ ಮಗ ಮೋಹಿತ್ ‘ಫಗ್ಲಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ