15 ದಿನದಲ್ಲಿ ಟೊಮೆಟೊ ಬೆಳೆಯಿರಿ: ರಾಖಿ ಸಾವಂತ್ ಕೊಟ್ಟರು ಐಡಿಯಾ

Rakhi Sawanth: ಟೊಮೆಟೊ ಬೆಲೆ ಗಗನಕ್ಕೇರಿದೆ. ಆದರೆ ನಟಿ ರಾಖಿ ಸಾವಂತ್, ಹದಿನೈದು ದಿನಗಳಲ್ಲಿ ಟೊಮೆಟೊ ಬೆಳೆಯುವುದು ಹೇಗೆಂದು ಹೇಳಿಕೊಡುತ್ತಿದ್ದಾರೆ.

15 ದಿನದಲ್ಲಿ ಟೊಮೆಟೊ ಬೆಳೆಯಿರಿ: ರಾಖಿ ಸಾವಂತ್ ಕೊಟ್ಟರು ಐಡಿಯಾ
ರಾಖಿ ಸಾವಂತ್
Follow us
ಮಂಜುನಾಥ ಸಿ.
|

Updated on: Jul 11, 2023 | 11:39 PM

ಟೊಮೆಟೊ (Tomato) ಬೆಲೆ ಗಗನಕ್ಕೇರಿದೆ, ಪೆಟ್ರೋಲ್ (Petrol) ದರವನ್ನೂ ಮೀರಿ ಟೊಮೆಟೊ ಮೇಲೆ ಹೋಗಿದ್ದು ಸಾಮಾನ್ಯ ನಾಗರೀಕ ಪರದಾಡುವಂತಾಗಿದೆ. ಇನ್ನು ಟೊಮೆಟೊ ಬೆಳೆದಿರುವ ರೈತರು, ಮಧ್ಯವರ್ತಿಗಳಂತೂ ಬಹು ಖುಷಿಯಲ್ಲಿದ್ದಾರೆ. ಟೊಮೆಟೊ ಇಲ್ಲದ ಸಾಂಬಾರು, ಟೊಮೆಟೊ ಇಲ್ಲದ ರೈಸ್ ಬಾತಿಗೆ ನಾಲಗೆಯನ್ನು ಒಗ್ಗಿಸಿಕೊಳ್ಳುತ್ತಿದ್ದಾರೆ ಜನ. ಟೊಮೆಟೊ ಬೆಲೆ ಯಾವಾಗ ಕೆಳಗಿಳಿಯುತ್ತದೆ ಎಂದು ಸಾಮಾನ್ಯ ಜನ ಯೋಚಿಸುತ್ತಿರುವಾಗಲೆ ನಟಿ ರಾಖಿ ಸಾವಂತ್ (Rakhi Sawanth) ಹೊಸ ಐಡಿಯಾ ತೆಗೆದುಕೊಂಡು ಬಂದಿದ್ದಾರೆ.

ಸದಾ ತಮ್ಮ ಚಿತ್ರ, ವಿಚಿತ್ರ ಹೇಳಿಕೆ, ಫ್ಯಾಷನ್​ಗಳಿಂದ ಸುದ್ದಿಯಲ್ಲಿರುವ ರಾಖಿ ಸಾವಂತ್ ಈಗ ಟೊಮೆಟೊ ಬೆಲೆ ಗಗನಕ್ಕೇರಿರುವ ಬೆನ್ನಲ್ಲೆ ಸಮಸ್ಯೆಗೆ ತಮ್ಮದೇ ರೀತಿಯ ಪರಿಹಾರವೊಂದನ್ನು ತಂದಿದ್ದಾರೆ. ಟೊಮೆಟೊ ಹಣ್ಣುಗಳನ್ನು ಮಣ್ಣಿನ ಕುಂಡದೊಳಗೆ ಹಾಕಿ ಅದರ ಮೇಲೆ ಟೊಮೆಟೊ ಗಿಡ ನೆಟ್ಟಿರುವ ರಾಖಿ ಸಾವಂತ್ ನೋಡುತ್ತಿರಿ ಇನ್ನು ಹದಿನೈದು ದಿನದಲ್ಲಿ ಈ ಗಿಡ ಟೊಮೆಟೊ ಹಣ್ಣುಗಳನ್ನು ಬಿಡುತ್ತದೆ ಎಂದಿದ್ದಾರೆ. ರಾಖಿ ಸಾವಂತ್ ಟೊಮೆಟೊ ಗಿಡವನ್ನು ನೆಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ವಿಡಿಯೋಕ್ಕೆ ಪ್ರತಿಕ್ರಿಯಿಸಿರುವ ಹಲವರು ರಾಖಿಗೆ ಪೂರ್ತಿ ಹುಚ್ಚು ಹಿಡಿದಿದೆ ಎಂದಿದ್ದಾರೆ. ಇನ್ನು ಕೆಲವರು ಮಣ್ಣಿನ ಕುಂಡದೊಳಗೆ ಒಳ್ಳೆಯ ಟೊಮೆಟೊಗಳನ್ನು ಹಾಕಿದ್ದಕ್ಕೆ ರಾಖಿಯನ್ನು ನಿಂದಿಸಿದ್ದಾರೆ. ಕಾಲು ಕೆಜಿ ಟೊಮೆಟೊ ರಾಖಿ ಹಾಳು ಮಾಡಿದಳು ಎಂದಿದ್ದಾರೆ. ರಾಖಿಗೆ ಇವೆಲ್ಲ ಹೊಸದಲ್ಲ. ಸದಾ ಸುದ್ದಿಯಲ್ಲಿರುವ ಇಂಥಹಾ ಚಿತ್ರ ವಿಚಿತ್ರ ಸ್ಟಂಟ್​ಗಳನ್ನು ರಾಖಿ ಸಾವಂತ್ ಆಗಾಗ್ಗೆ ಮಾಡುತ್ತಲೇ ಇರುತ್ತಾರೆ.

ಇದನ್ನೂ ಓದಿ:ಕೊಲೆ ಬೆದರಿಕೆ ಬಂದಿದೆ ಎಂದು ಹೆಲ್ಮೆಟ್ ಧರಿಸಿ ಓಡಾಡಿದ ರಾಖಿ ಸಾವಂತ್​; ನಾಟಕ ನಿಲ್ಲಿಸಿ ಎಂದ ಫ್ಯಾನ್ಸ್

ಕಳೆದ ವರ್ಷ ಮೈಸೂರಿನ ಆದಿಲ್ ಅನ್ನು ವಿವಾಹವಾಗಿದ್ದ ರಾಖಿ ಸಾವಂತ್ ಆ ಬಳಿಕ ಅವರಿಂದ ದೂರಾಗಿದ್ದಾರೆ. ಮೈಸೂರಿನ ತನ್ನ ಪತಿಯ ಮನೆಯ ಬಳಿಯೂ ಬಂದು ಡ್ರಾಮಾ ಮಾಡಿ ಹೋಗಿದ್ದ ರಾಖಿ ಆ ಬಳಿಕ ಪತಿಯ ವಿರುದ್ಧ ದೂರು ನೀಡಿದ್ದರು. ರಾಖಿ ದೂರಿನ ಆಧಾರದಲ್ಲಿ ಆದಿಲ್ ಅನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ತನ್ನ ತಾಯಿಯ ಸಾವಿಗೆ ಆದಿಲ್ ಕಾರಣ ಎಂದು ರಾಖಿ ಆರೋಪಿಸಿದ್ದರು.

1997 ರಿಂದಲೂ ಚಿತ್ರರಂಗದಲ್ಲಿರುವ ರಾಖಿ ಸಾವಂತ್ ಪೋಷಕ ನಟಿ, ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿಯೂ ಮಿಂಚಿದರು. ಬಳಿಕ ಹಲವು ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿಯೂ ರಾಖಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ನಟಿಸಿರುವ ಮೈ ಹೂನಾ ಸಿನಿಮಾದಲ್ಲಿಯೂ ರಾಖಿ ನಟಿಸಿದ್ದಾರೆ. ಆದರೆ ಬರ ಬರುತ್ತಾ ಪ್ರಚಾರದ ಹುಚ್ಚು ಹೆಚ್ಚಾಗಿ ಪ್ರಚಾರಕ್ಕಾಗಿ ವಿವಿಧ ವೇಷಗಳನ್ನು, ಚಿತ್ರ ವಿಚಿತ್ರ ಹೇಳಿಕೆಗಳನ್ನು ನೀಡಲು ಆರಂಭಿಸಿದರು ರಾಖಿ ಆ ಬಳಿಕ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಯಿತು. ಆದರೆ ಬಿಗ್​ಬಾಸ್ ಸೇರಿದಂತೆ ಇತರೆ ರಿಯಾಲಿಟಿ ಶೋಗಳಲ್ಲಿ ಈಗಲೂ ರಾಖಿ ಸಾವಂತ್ ಚಾಲ್ತಿಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ