AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಖಿ ಸಹೋದರನ ಬಂಧನ

ಬಾಲಿವುಡ್​ನ ಬೇಡಿಕೆಯ ನಟ ನವಾಜುದ್ಧೀನ್ ಸಿದ್ಧಿಖಿ ಚಿತ್ರರಂಗದಲ್ಲಿ ಭಾರಿ ಯಶಸ್ಸು ಗಳಿಸಿದ್ದಾರೆ, ಗಳಿಸುತ್ತಲೇ ಇದ್ದಾರೆ ಆದರೆ ವೈಯಕ್ತಿಕ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಾಣುತ್ತಿದ್ದಾರೆ. ಇದೀಗ ಅವರ ಸಹೋದರನ ಬಂಧನವಾಗಿದೆ.

ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಖಿ ಸಹೋದರನ ಬಂಧನ
ಮಂಜುನಾಥ ಸಿ.
|

Updated on: May 23, 2024 | 3:35 PM

Share

ನವಾಜುದ್ಧೀನ್ ಸಿದ್ಧಿಖಿ (Nawazuddin Siddiqui) ಬಾಲಿವುಡ್​ನ ಅತ್ಯಂತ ಬೇಡಿಕೆಯ ನಟ. ಪೋಷಕ ಪಾತ್ರ, ವಿಲನ್, ನಾಯಕನ ಪಾತ್ರಗಳಲ್ಲಿಯೂ ಮಿಂಚಿರುವ, ಮಿಂಚುತ್ತಿರುವ ನವಾಜುದ್ಧೀನ್ ಸಿದ್ಧಿಖಿಯ ಖಾಸಗಿ ಜೀವನ ಮಾತ್ರ ಹಲವು ಏಳು-ಬೀಳುಗಳನ್ನು ಕಾಣುತ್ತಲೇ ಇದೆ. ಪತ್ನಿಯೊಂದಿಗೆ ಸುದೀರ್ಘ ಕಾನೂನು ಸಮರ ಮತ್ತು ವೈಯಕ್ತಿಕ ಮಟ್ಟದಲ್ಲಿಯೂ ನಡೆಯುತ್ತಲೇ ಇದೆ. ಇದರ ಜೊತೆಗೆ ಇದೀಗ ನವಾಜುದ್ಧೀನ್ ಸಿದ್ಧಿಖಿಯ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.

ನವಾಜುದ್ಧೀನ್ ಸಿದ್ಧಿಖಿಯ ಅಣ್ಣ ಅಯಾಜುದ್ಧೀನ್ ಸಿದ್ಧಿಖಿಯನ್ನು ಉತ್ತರ ಪ್ರದೇಶದ ಮುಝಫರ್​ನಗರ ಜಿಲ್ಲೆಯ ಬುಧಾನಾ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ. ಅಯಾಜುದ್ಧೀನ್ ವಿರುದ್ಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಲು ಯತ್ನಿಸಿರುವ ಆರೋಪ ಹೊರಿಸಲಾಗಿದೆ. ಅಯಾಜುದ್ಧೀನ್, ಸ್ಥಳೀಯ ನ್ಯಾಯಾಲಯಕ್ಕೆ, ನಕಲಿ ಜಿಲ್ಲಾಧಿಕಾರಿಗಳ ಆದೇಶದ ಪ್ರತಿಯೊಂದನ್ನು ನೀಡಿದ್ದಾರೆ ಎನ್ನಲಾಗಿದೆ.

ಅಯಾಜುದ್ಧೀನ್ ಹಾಗೂ ಇಕ್ಬಾಲ್ ಎಂಬುವರ ನಡುವೆ ಜಮೀನು ಕುರಿತಾದಂತೆ ವ್ಯಾಜ್ಯ ಬಹಳ ಸಮಯದಿಂದಲೂ ನಡೆಯುತ್ತಿದ್ದು, ಇತ್ತೀಚೆಗೆ ಜಿಲ್ಲಾಧಿಕಾರಿಗಳು ಜಮೀನಿನ ಕುರಿತಾಗಿ ಮಾಡಿದ್ದಾರೆ ಎನ್ನಲಾದ ಆದೇಶವೊಂದನ್ನು ನವಾಜುದ್ಧೀನ್ ಸಹೋದರ ಅಯಾಜುದ್ಧೀನ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಇದು ನಕಲಿ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ಪೊಲೀಸರು ಅಯಾಜುದ್ಧೀನ್ ಅನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ:Nawazuddin Siddiqui: ‘ನನ್ನ ಅಪ್ರಾಪ್ತ ಮಗಳನ್ನು ನಿಮ್ಮ ಮ್ಯಾನೇಜರ್​ ಕೆಟ್ಟದಾಗಿ ತಬ್ಬಿಕೊಂಡ’: ಸ್ಟಾರ್​ ನಟನ ವಿರುದ್ಧ ಪತ್ನಿ ಗರಂ

ಮಾರ್ಚ್ 2024ರಂದು ಜಿಲ್ಲಾಧಿಕಾರಿಗಳೇ ಅಯಾಜುದ್ಧೀನ್ ವಿರುದ್ಧ ಪ್ರಕರಣ ದಾಖಲಿಸಿ, ತಮ್ಮ ದಾಖಲೆಯನ್ನು ನಕಲಿ ಮಾಡಿದ ಆರೋಪ ಹೊರಿಸಿದ್ದರು. ಐಪಿಸಿ ಸೆಕ್ಷನ್​ಗಳಾದ 420, 467, 468, 471 ಗಳನ್ನು ಅಯಾಜುದ್ಧೀನ್ ಮೇಲೆ ಹೊರಿಸಲಾಗಿದೆ. 2018ರಲ್ಲಿಯೂ ಸಹ ಅಯಾಜುದ್ಧೀನ್ ಮೇಲೆ ಪ್ರಕರಣ ದಾಖಲಾಗಿತ್ತು, ಆಗ ಅಯಾಜುದ್ಧೀನ್, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ನವಾಜುದ್ದೀನ್ ಕಿರಿಯ ಸಹೋದರ ಶಮಾಸ್ ವಿರುದ್ಧವೂ ಸಹ ಈ ಹಿಂದೆ ಪ್ರಕರಣ ದಾಖಲಾಗಿತ್ತು. ನವಾಜುದ್ಧೀನ್​ರ ಪತ್ನಿ ಆಲಿಯಾ, ನವಾಜುದ್ಧೀನ್​ರ ಕಿರಿಯ ಸಹೋದರ ಶಮಾಸ್ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ದಾಖಲಿಸಿದ್ದರು. ನವಾಜುದ್ಧೀನ್ ತಾಯಿಯ ವಿರುದ್ಧವೂ ಸಹ ದೂರು ದಾಖಲಾಗಿತ್ತು. ಆಲಿಯಾ, ನವಾಜುದ್ಧೀನ್​ಗೆ ವಿಚ್ಛೇದನದ ನೊಟೀಸ್ ಕಳಿಸಿದ್ದರು. ಮನೆಯ ಬಳಿ ಗಲಾಟೆ ಸಹ ಮಾಡಿದ್ದರು. ಆದರೆ ಇತ್ತೀಚೆಗೆ ಈ ಇಬ್ಬರು ಮತ್ತೆ ಒಂದಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ