AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಐಟಂ ಹಾಡಿಗೆ ಸೊಂಟ ಕುಣಿಸಲಿದ್ದಾರೆ ‘ಅತ್ತಿಗೆ 2’

‘ಪುಷ್ಪ’ ಸಿನಿಮಾದಲ್ಲಿ ‘ಊ ಅಂಟಾವ’ ಐಟಂ ಹಾಡು ಸಖತ್ ಹಿಟ್ ಆಗಿತ್ತು. ಇದೀಗ ‘ಪುಷ್ಪ 2’ ಸಿನಿಮಾದಲ್ಲಿಯೂ ಐಟಂ ಹಾಡಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದ್ದು, ಇದಕ್ಕಾಗಿ ಬಾಲಿವುಡ್​ನ ಹೊಸ ಬೆಡಗಿಯನ್ನು ಕರೆತರಾಗುತ್ತಿದೆ.

‘ಪುಷ್ಪ 2’ ಐಟಂ ಹಾಡಿಗೆ ಸೊಂಟ ಕುಣಿಸಲಿದ್ದಾರೆ ‘ಅತ್ತಿಗೆ 2’
ಮಂಜುನಾಥ ಸಿ.
|

Updated on: May 23, 2024 | 6:59 PM

Share

ಪುಷ್ಪ’ (Pushpa) ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಹೈಪ್ ಹುಟ್ಟಿಸಿದ್ದು ಅದರ ಹಾಡುಗಳಿಂದ. ಅದರಲ್ಲೂ ಆ ಸಿನಿಮಾದ ಐಟಂ ಹಾಡು ‘ಊ ಅಂಟಾವ ಮಾವ ಊಹು ಅಂಟಾವ’ ಹಾಡಂತೂ ಭಾರಿ ಕ್ರೇಜ್ ಹುಟ್ಟಿಸಿತ್ತು. ಸಮಂತಾ (Samantha) ಮೊದಲ ಬಾರಿಗೆ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ‘ಪುಷ್ಪ’ ಸಿನಿಮಾ ಹಿಟ್ ಆದ ಕಾರಣಗಳಲ್ಲಿ ಐಟಂ ಸಹ ಒಂದು. ಇದೀಗ ‘ಪುಷ್ಪ 2’ ಸಿನಿಮಾನಲ್ಲಿಯೂ ಐಟಂ ಸಾಂಗ್ ಇರಲಿದ್ದು, ಈ ಬಾರಿ ಯಾವ ಪ್ರಮುಖ ನಟಿಯನ್ನು ಐಟಂ ಹಾಡಿಗಾಗಿ ಕರೆತರಬೇಕು ಎಂದು ಚಿತ್ರತಂಡ ಹಲವು ತಿಂಗಳುಗಳಿಂದ ತಲೆ ಕೆಡಿಸಿಕೊಂಡಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಬಾಲಿವುಡ್​ನ ಹೊಸ ಕ್ರಶ್, ‘ಬಾಬಿ 2’ ಕನ್ನಡದಲ್ಲಿ ‘ಅತ್ತಿಗೆ 2’ ಅನ್ನು ಕರೆತರಲಾಗುತ್ತಿದೆ.

ಬಾಲಿವುಡ್ ಬೆಡಗಿ ತೃಪ್ತಿ ದಿಮ್ರಿಗೆ ‘ಬಾಬಿ 2’ ಎಂಬ ಅಡ್ಡ ಹೆಸರಿದೆ. ರಣ್​ಬೀರ್ ಕಪೂರ್ ನಟಿಸಿದ್ದೌ ‘ಅನಿಮಲ್’ ಸಿನಿಮಾನಲ್ಲಿ ನಾಯಕ ರಣ್​ವಿಜಯ್ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡ ಯುವತಿಯ ಪಾತ್ರದಲ್ಲಿ ತೃಪ್ತಿ ನಟಿಸಿದ್ದರು, ಹಾಗಾಗಿ ತೃಪ್ತಿಗೆ ‘ಬಾಬಿ 2’ ಎಂಬ ಅಡ್ಡ ಹೆಸರಿನಿಂದ ನೆಟ್ಟಿಗರು ಕರೆದಿದ್ದರು. ‘ಅನಿಮಲ್’ ಸಿನಿಮಾನಲ್ಲಿ ತಮ್ಮ ನಟನೆಯ ಜೊತೆಗೆ ಗ್ಲಾಮರ್​ನಿಂದಲೂ ತೃಪ್ತಿ ಸಖತ್ ಗಮನ ಸೆಳೆದಿದ್ದರು. ತೃಪ್ತಿ ಹಾಗೂ ರಣ್​ಬೀರ್​ರ ಬೆಡ್​ರೂಂ ಸೀನ್ ನಾಟಿ ಪ್ರೇಕ್ಷಕರಿಗೆ ಬಲು ಇಷ್ಟವಾಗಿತ್ತು.

ಅದನ್ನೇ ಗಮನದಲ್ಲಿಟ್ಟುಕೊಂಡು ಇದೀಗ ‘ಪುಷ್ಪ 2’ ಸಿನಿಮಾದ ನಿರ್ದೇಶಕ ಸುಕುಮಾರ್ ತೃಪ್ತಿ ದಿಮ್ರಿಯನ್ನು ತಮ್ಮ ಸಿನಿಮಾಕ್ಕೆ ಕರೆತರುತ್ತಿದ್ದಾರೆ. ‘ಪುಷ್ಪ 2’ ಸಿನಿಮಾನಲ್ಲಿ ಐಟಂ ಹಾಡು ಬಹಳ ಪ್ರಮುಖವಾದದ್ದಾಗಿದ್ದು, ಈ ಹಾಡಿಗೆ ಅಲ್ಲು ಅರ್ಜುನ್ ಜೊತೆಗೆ ತೃಪ್ತಿ ದಿಮ್ರಿ ನರ್ತಿಸಲಿದ್ದಾರೆ. ತೃಪ್ತಿ ದಿಮ್ರಿ ಒಳ್ಳೆಯ ನಟಿ, ಗ್ಲಾಮರ್ ಕ್ವೀನ್ ಆಗಿರುವ ಜೊತೆಗೆ ಒಳ್ಳೆಯ ಡ್ಯಾನ್ಸರ್ ಸಹ ಆಗಿದ್ದಾರೆ. ಅಲ್ಲು ಅರ್ಜುನ್ ಸಹ ಒಳ್ಳೆಯ ಡ್ಯಾನ್ಸರ್ ಆಗಿದ್ದು, ಈ ಇಬ್ಬರ ಜೋಡಿ ತೆರೆಯ ಮೇಲೆ ಚೆನ್ನಾಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:‘ಪುಷ್ಪ 2’ ಸಿನಿಮಾಕ್ಕೆ ಸಂಕಷ್ಟ, ತಂಡ ತೊರೆದ ಪ್ರಮುಖ ತಂತ್ರಜ್ಞ

ವಿಶೇಷವೆಂದರೆ ‘ಅನಿಮಲ್’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದರು, ಅಲ್ಲಿ ತೃಪ್ತಿ ದಿಮ್ರಿ ಗ್ಲಾಮರ್ ಗೊಂಬೆಯಾಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಈಗ ‘ಪುಷ್ಪ 2’ ಸಿನಿಮಾದಲ್ಲಿಯೂ ರಶ್ಮಿಕಾ ಮಂದಣ್ಣ ನಾಯಕಿ, ಈಗ ಈ ಸಿನಿಮಾದಲ್ಲಿಯೂ ತೃಪ್ತಿ ಗ್ಲಾಮರ್ ಗೊಂಬೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಸಹ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಅಲ್ಲು ಅರ್ಜುನ್ ಅಭಿಮಾನಿಗಳ ಲೆಕ್ಕಾಚಾರ.

‘ಅನಿಮಲ್’ ಸಿನಿಮಾದ ಬಳಿಕ ತೃಪ್ತಿ ದಿಮ್ರಿಗೆ ಹಲವು ಹೊಸ ಅವಕಾಶಗಳು ಅರಸಿ ಬರುತ್ತಿವೆ. ‘ಬ್ಯಾಡ್ ಬಾಯ್ಜ್’, ‘ವಿಕ್ಕಿ ವಿದ್ಯಾ ಕಾ ಓ ವಾಲಾ ವಿಡಿಯೋ’, ‘ಭೂಲ್ ಭುಲಯ್ಯ 3’ ಸಿನಿಮಾಗಳಲ್ಲಿ ತೃಪ್ತಿ ನಟಿಸುತ್ತಿದ್ದಾರೆ. ಇದರಲ್ಲಿ ‘ಬಾಡ್ ಬಾಯ್ಜ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ