‘ಪುಷ್ಪ’ ಚಿತ್ರದ ‘ತಗ್ಗೋದೆ ಇಲ್ಲ’ ಡೈಲಾಗ್ನ ಕಾಪಿ ಮಾಡಿದ ಹಾಲಿವುಡ್ ಗಾಯಕ
ಎಡ್ ಶೀರನ್ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಭಾಗಿ ಆಗಿದ್ದರು. ನೆಟ್ಫ್ಲಿಕ್ಸ್ ಒಟಿಟಿ ಮೂಲಕ ಈ ಶೋ ಪ್ರಸಾರ ಕಾಣುತ್ತಿದೆ. ಇದರಲ್ಲಿ ಕಪಿಲ್ ಶರ್ಮಾ ಅವರು ಭಾರತದ ಬಗ್ಗೆ, ಭಾರತೀಯ ಸಂಸ್ಕೃತಿ ಬಗ್ಗೆ, ಭಾರತದ ಸಿನಿಮಾಗಳ ಬಗ್ಗೆ ಎಡ್ ಶೀರನ್ ಬಳಿ ಮಾತನಾಡಿದ್ದಾರೆ. ಆಗ ಅವರು ‘ತಗ್ಗದೆಲೆ’ ಡೈಲಾಗ್ ಹೇಳಿಕೊಟ್ಟಿದ್ದಾರೆ.
ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ ಸಿನಿಮಾ ಮಾಡಿದ ದಾಖಲೆ ತುಂಬಾನೇ ದೊಡ್ಡದು. ಈ ಚಿತ್ರ ಒಳ್ಳೆಯ ರೀತಿಯಲ್ಲಿ ಬಿಸ್ನೆಸ್ ಮಾಡಿತ್ತು. ಈ ಚಿತ್ರದ ‘ತಗ್ಗೆದೆಲೆ’ (ಕನ್ನಡದಲ್ಲಿ ತಗ್ಗೋದೆ ಇಲ್ಲ, ಹಿಂದಿಯಲ್ಲಿ ಜುಕೇಗಾ ನಹಿ ಸಾಲಾ) ಡೈಲಾಗ್ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಇದರ ಹವಾ ಇನ್ನೂ ಕಡಿಮೆ ಆಗಿಲ್ಲ. ಹಾಲಿವುಡ್ ಸಿಂಗರ್ ಎಡ್ ಶೀರನ್ ಕೂಡ ಈ ಡೈಲಾಗ್ನ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಎಡ್ ಶೀರನ್ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಭಾಗಿ ಆಗಿದ್ದರು. ನೆಟ್ಫ್ಲಿಕ್ಸ್ ಒಟಿಟಿ ಮೂಲಕ ಈ ಶೋ ಪ್ರಸಾರ ಕಾಣುತ್ತಿದೆ. ಇದರಲ್ಲಿ ಕಪಿಲ್ ಶರ್ಮಾ ಅವರು ಭಾರತದ ಬಗ್ಗೆ, ಭಾರತೀಯ ಸಂಸ್ಕೃತಿ ಬಗ್ಗೆ, ಭಾರತದ ಸಿನಿಮಾಗಳ ಬಗ್ಗೆ ಎಡ್ ಶೀರನ್ ಬಳಿ ಮಾತನಾಡಿದ್ದಾರೆ. ಆಗ ಅವರು ‘ತಗ್ಗದೆಲೆ’ (ತಗ್ಗೋದೆ ಇಲ್ಲ) ಡೈಲಾಗ್ ಹೇಳಿಕೊಟ್ಟಿದ್ದಾರೆ.
ಇದನ್ನೂ ಓದಿ: ‘ಪುಷ್ಪ 2’ ರಿಲೀಸ್ ದಿನಾಂಕ ಬದಲಾಗತ್ತಾ? ಅನುಮಾನಕ್ಕೆ ಕಾರಣವಾದ ಎರಡು ಅಂಶಗಳು
‘ಪುಷ್ಪ’ ಸಿನಿಮಾದಲ್ಲಿ ಪುಷ್ಪರಾಜ್ (ಅಲ್ಲು ಅರ್ಜುನ್) ಆಗಾಗ ಗಡ್ಡದ ಬಳಿ ಕೈ ಇಟ್ಟುಕೊಂಡು ‘ತಗ್ಗೋದೆ ಇಲ್ಲ’ ಎನ್ನುತ್ತಿರುತ್ತಾನೆ. ಈ ಡೈಲಾಗ್ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದೆ. ಈ ಡೈಲಾಗ್ನ ಕಪಿಲ್ ಶರ್ಮಾ ಅವರು ಎಡ್ ಶೀರನ್ಗೆ ಹೇಳಿಕೊಟ್ಟಿದ್ದಾರೆ. ಇದನ್ನು ಪರ್ಫೆಕ್ಟ್ ಆಗಿ ಕಾಪಿ ಮಾಡಿದ್ದಾರೆ ಎಡ್ ಶೀರನ್. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
The Great Indian Kapil Sharma Show on Netflix feat Ed Sheeran:
Kapil to Ed – I have some popular dialogues from Bollywood movies, I will teach you
Then went on to teach Ed, the iconic Allu Arjun’s dialogue from Telugu film Pushpa: The Rise
India Cinema doesn’t mean Bollywood pic.twitter.com/YPLx6B0FcG
— KhabriBhai (@RealKhabriBhai) May 19, 2024
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಮೊದಲ ಪಾರ್ಟ್ ಹಿಟ್ ಆದ ಕಾರಣ ಎರಡನೇ ಪಾರ್ಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಸುಕುಮಾರ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ‘ಮೈತ್ರಿ ಮೂವೀ ಮೇಕರ್ಸ್’ ಇದನ್ನು ನಿರ್ಮಿಸುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.