AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕಕಾಲಕ್ಕೆ ಮೂರು ಒಟಿಟಿಗಳಿಗೆ ಮಾರಾಟವಾದ ‘ಕಲ್ಕಿ 2898 ಎಡಿ’

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಭಾರತದ ಬಹು ನಿರೀಕ್ಷೆಯ ಸಿನಿಮಾ ಆಗಿದೆ. ಈ ಸಿನಿಮಾದ ಡಿಜಿಟಲ್ ಹಕ್ಕನ್ನು ಮೂರು ಒಟಿಟಿಗಳು ಭಾರಿ ಮೊತ್ತದ ಹಣ ನೀಡಿ ಖರೀದಿ ಮಾಡಿವೆ.

ಏಕಕಾಲಕ್ಕೆ ಮೂರು ಒಟಿಟಿಗಳಿಗೆ ಮಾರಾಟವಾದ ‘ಕಲ್ಕಿ 2898 ಎಡಿ’
ಮಂಜುನಾಥ ಸಿ.
|

Updated on:May 28, 2024 | 6:29 PM

Share

ಪ್ರಭಾಸ್ (Prabhas) ನಟಿಸಿರುವ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಸದ್ಯಕ್ಕೆ ಭಾರತದ ಅತಿ ನಿರೀಕ್ಷೆಯ ಸಿನಿಮಾ. ಹಾಲಿವುಡ್​ನ ‘ಡ್ಯೂನ್’, ‘ಐ ರೋಬಾಟ್’ ಸಿನಿಮಾಗಳನ್ನು ನೆನಪಿಸುವಂತಿರುವ ‘ಕಲ್ಕಿ’ ಕತೆ, ನಿರ್ಮಾಣ, ಬಹುತಾರಾಗಣ ಇನ್ನೂ ಹಲವಾರು ಕಾರಣಗಳಿಗೆ ಗಮನ ಸೆಳೆದಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಹಾಲಿವುಡ್ ಸಿನಿಮಾಗಳನ್ನು ಮೀರಿಸುವಂತಿದೆ ದೃಶ್ಯಗಳು. ಭಾರಿ ಬಜೆಟ್ ಸಿನಿಮಾ, ಬಿಡುಗಡೆಗೆ ಮುನ್ನವೇ ಸಿನಿಮಾದ ಕೆಲವು ಹಕ್ಕುಗಳನ್ನು ಮಾರಾಟ ಮಾಡಿದ್ದು, ಇದರಿಂದ ಭಾರಿ ಮೊತ್ತವನ್ನೇ ನಿರ್ಮಾಪಕರು ಮರಳಿ ಪಡೆದಿದ್ದಾರೆ. ವಿಶೇಷವೆಂದರೆ ‘ಕಲ್ಕಿ’ ಸಿನಿಮಾ ಒಟ್ಟೊಟ್ಟಿಗೆ ಮೂರು ಒಟಿಟಿಗಳಿಗೆ ಮಾರಾಟವಾಗಿದೆ!

‘ಕಲ್ಕಿ 2898 ಎಡಿ’ ಸಿನಿಮಾ ಒಂದೇ ಬಾರಿಗೆ ಮೂರು ಒಟಿಟಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ‘ಆರ್​ಆರ್​ಆರ್’ ಸಿನಿಮಾ ನೆಟ್​ಫ್ಲಿಕ್ಸ್​ ಅದರ ನಂತರ ಜೀ 5ಗೆ ಮಾರಾಟವಾಗಿ ದಾಖಲೆ ಬರೆದಿತ್ತು. ಈಗ ‘ಕಲ್ಕಿ 2898 ಎಡಿ’ ಸಿನಿಮಾ ಒಟ್ಟಿಗೆ ಮೂರು ಒಟಿಟಿಗೆ ಮಾರಾಟವಾಗಿದೆ ಅದೂ ದಾಖಲೆ ಬೆಲೆಗೆ. ಒಟ್ಟಿಗೆ ಮೂರು ಒಟಿಟಿಗೆ ಮಾರಾಟವಾಗುವ ಮೂಲಕ ಮುಂದೆ ಬರಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಒಂದು ಮಾದರಿಯನ್ನು ಸಹ ಹಾಕಿಕೊಟ್ಟಿದೆ.

ಮೂಲಗಳ ಪ್ರಕಾರ, ‘ಕಲ್ಕಿ 2898 ಎಡಿ’ ಸಿನಿಮಾ ನೆಟ್​ಫ್ಲಿಕ್ಸ್, ಜೀ 5 ಹಾಗೂ ಅಮೆಜಾನ್ ಪ್ರೈಂ ಮೂರು ಪ್ರಮುಖ ಒಟಿಟಿಗಳಿಗೆ ಡಿಜಿಟಲ್ ಹಕ್ಕು ಮಾರಾಟ ಮಾಡಿದೆ. ನೆಟ್​ಫ್ಲಿಕ್ಸ್​ನಲ್ಲಿ ಹಿಂದಿ, ಇಂಗ್ಲೀಷ್ ಹಾಗೂ ಕೆಲವು ವಿದೇಶಿ ಭಾಷೆಗಳಲ್ಲಿ ‘ಕಲ್ಕಿ’ ಸಿನಿಮಾ ಪ್ರದರ್ಶನವಾಗಲಿದೆ. ಅಮೆಜಾನ್ ಹಾಗೂ ಜೀ 5 ನಲ್ಲಿ ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಕಲ್ಕಿ’ ಸಿನಿಮಾ ಸ್ಟ್ರೀಂ ಆಗಲಿದೆ. ನೆಟ್​ಫ್ಲಿಕ್ಸ್, ಅಮೆಜಾನ್ ಮೂಲಕ ಅಂತರಾಷ್ಟ್ರೀಯ ವೀಕ್ಷಕರನ್ನು ಹಾಗೂ ಜೀ5 ಮೂಲಕ ಭಾರತದ ವೀಕ್ಷಕರನ್ನು ಪರಿಣಾಮಕಾರಿಯಾಗಿ ತಲುಪುವ ಯೋಜನೆ ಚಿತ್ರತಂಡದ್ದು.

ಇದನ್ನೂ ಓದಿ:‘ಕಲ್ಕಿ’ ಚಿತ್ರದಲ್ಲಿ ಬಳಕೆಯಾದ ಕಾರಿಗಿದೆ ಆಳೆತ್ತರದ ಟೈಯರ್; ಈ ಕಾರನ್ನು ತಯಾರಿಸಿದ್ದು ಭಾರತದ ಕಂಪನಿ

‘ಕಲ್ಕಿ 2898 ಎಡಿ’ ಸಿನಿಮಾದ ಡಿಜಿಟಲ್ ಹಕ್ಕು ಸುಮಾರು 100 ಕೋಟಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ‘ಆರ್​ಆರ್​ಆರ್’ ಸಿನಿಮಾದ ದಾಖಲೆಯನ್ನು ಮುರಿದು ‘ಕಲ್ಕಿ’ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆ. ಜಪಾನ್, ಫ್ರೆಂಚ್ ಇನ್ನಿತರೆ ಕೆಲವು ವಿದೇಶಿ ಭಾಷೆಗಳಿಗೂ ಈ ಸಿನಿಮಾ ಡಬ್ ಆಗುತ್ತಿದ್ದು, ಅಲ್ಲಿನ ಪ್ರೇಕ್ಷಕರೂ ಪ್ರಭಾಸ್​ರ ಈ ಸಿನಿಮಾವನ್ನು ನೋಡುವ ಸಾಧ್ಯತೆ ದಟ್ಟವಾಗಿರುವ ಕಾರಣ ಭಾರಿ ಮೊತ್ತಕ್ಕೆ ಸಿನಿಮಾವನ್ನು ನೆಟ್​ಫ್ಲಿಕ್ಸ್ ಹಾಗೂ ಇತರೆ ಒಟಿಟಿಗಳು ಖರೀದಿಸಿವೆ.

‘ಕಲ್ಕಿ 2898 ಎಡಿ’ ಸಿನಿಮಾವು ಬಹುತಾರಾಗಣದ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ ಹಾಗೂ ದಿಶಾ ಪಟಾನಿ ನಾಯಕಿಯರಾಗಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರು ಮಾತ್ರವೇ ಅಲ್ಲದೆ ಹಲವು ಪ್ರಮುಖ ಪೋಷಕ ನಟರುಗಳು ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ‘ಮಹಾನಟಿ’ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಕತೆಯನ್ನು ನಾಗ್ ಅಶ್ವಿನ್ ಹಾಗೂ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಒಟ್ಟಿಗೆ ಮಾಡಿದ್ದಾರೆ. ಸಿನಿಮಾ ಜೂನ್ 27ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Tue, 28 May 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್