AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೂ ಬರಲಿದೆ ‘ಕಲ್ಕಿ’ ಸಿನಿಮಾದ ಕಾರು; ಯಾರಿಗೆಲ್ಲ ಸಿಗುತ್ತೆ ಓಡಿಸೋ ಅವಕಾಶ?

ಭಾರತದ ಪ್ರಮುಖ ನಗರಗಳಲ್ಲಿ ಇದನ್ನು ಪ್ರದರ್ಶಿಸಲು ಸಿನಿಮಾ ತಂಡ ಮುಂದಾಗಿದೆ. ಈ ವೇಳೆ ಫ್ಯಾನ್ಸ್​ಗೆ ಸೆಲ್ಫಿ ತೆಗೆದುಕೊಳ್ಳಲು ತಂಡ ಅವಕಾಶ ನೀಡುತ್ತಿದೆ. ಇದೇ ವೇಳೆ ಪ್ರಮುಖ ಸೆಲೆಬ್ರಿಟಿಗಳಿಗೆ ಡ್ರೈವ್ ಮಾಡಲು ಅವಕಾಶ ನೀಡಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಬೆಂಗಳೂರಿಗೂ ಬರಲಿದೆ ‘ಕಲ್ಕಿ’ ಸಿನಿಮಾದ ಕಾರು; ಯಾರಿಗೆಲ್ಲ ಸಿಗುತ್ತೆ ಓಡಿಸೋ ಅವಕಾಶ?
ರಾಜೇಶ್ ದುಗ್ಗುಮನೆ
|

Updated on:May 27, 2024 | 12:12 PM

Share

ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಈ ಸಿನಿಮಾದಲ್ಲಿ ಬಳಕೆ ಆದ ‘ಬುಜ್ಜಿ’ ಕಾರು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಕಾರನ್ನು ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದಾರೆ. ಸೆಲೆಬ್ರಿಟಿಗಳಿಗೂ ಕಾರು ಫೇವರಿಟ್ ಎನಿಸಿಕೊಂಡಿದೆ. ಇತ್ತೀಚೆಗೆ ಟಾಲಿವುಡ್​ನ ಸ್ಟಾರ್ ನಟ ನಾಗ ಚೈತನ್ಯ ಇದನ್ನು ರೈಡ್ ಮಾಡಿದ್ದರು. ಈಗ ಈ ಕಾರು ಬೆಂಗಳೂರಿಗೆ ಬರುತ್ತಿದ್ದು, ಕನ್ನಡದ ಸೆಲೆಬ್ರಿಟಿಗಳು ಇದನ್ನು ರೈಡ್ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

‘ಕಲ್ಕಿ 2898 ಎಡಿ’ ಸಿನಿಮಾಗೋಸ್ಕರ ವಿಶೇಷವಾಗಿ ಕಾರು ತಯಾರಿಸಲಾಗಿದೆ. ಇದನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ರಿವೀಲ್ ಮಾಡಲಾಗಿತ್ತು. ಹಲವು ಆಟೋಮೊಬೈಲ್ ವಿಮರ್ಶಕರು ಈ ಬಗ್ಗೆ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ಐದು ಕೋಟಿ ರೂಪಾಯಿ ಬೆಲೆಯ ಈ ಕಾರನ್ನು ನಾಗ ಚೈತನ್ಯ ಕೂಡ ಡ್ರೈವ್ ಮಾಡಿದ್ದರು. ಈ ಕಾರನ್ನು ವಿವಿಧ ನಗರಗಳಿಗೆ ಕೊಂಡೊಯ್ಯಲು ತಂಡ ನಿರ್ಧರಿಸಿದೆ.

ಭಾರತದ ಪ್ರಮುಖ ನಗರಗಳಲ್ಲಿ ಇದನ್ನು ಪ್ರದರ್ಶಿಸಲು ಸಿನಿಮಾ ತಂಡ ಮುಂದಾಗಿದೆ. ಈ ವೇಳೆ ಫ್ಯಾನ್ಸ್​ಗೆ ಸೆಲ್ಫಿ ತೆಗೆದುಕೊಳ್ಳಲು ತಂಡ ಅವಕಾಶ ನೀಡುತ್ತಿದೆ. ಇದೇ ವೇಳೆ ಪ್ರಮುಖ ಸೆಲೆಬ್ರಿಟಿಗಳಿಗೆ ಡ್ರೈವ್ ಮಾಡಲು ಅವಕಾಶ ನೀಡಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಒಂದೊಮ್ಮೆ ಈ ಅವಕಾಶ ಕೊಟ್ಟರೆ ಸಿನಿಮಾಗೆ ಭರ್ಜರಿ ಪ್ರಚಾರ ಸಿಕ್ಕಂತೆ ಆಗಲಿದೆ.

ಸ್ಯಾಂಡಲ್​ವುಡ್​ನಲ್ಲಿ ನಟ ದರ್ಶನ್ ಅವರು ಕಾರಿನ ಬಗ್ಗೆ ವಿಶೇಷ ಕ್ರೇಜ್ ಹೊಂದಿದ್ದಾರೆ. ಅವರ ಬಳಿ ಹಲವು ಸೂಪರ್ ಕಾರುಗಳಿವೆ. ಅವರು ಕೂಡ ಇದನ್ನು ಓಡಿಸಬಹುದು. ಕಿಚ್ಚ ಸುದೀಪ್​, ಯಶ್, ಧ್ರುವ ಸರ್ಜಾ, ಶಿವರಾಜ್​ಕುಮಾರ್​ಗೂ ಕಾರಿನ ಬಗ್ಗೆ ಕ್ರೇಜ್ ಇದೆ. ಅವರಿಗೂ ಈ ಕಾರನ್ನು ಓಡಿಸೋ ಅವಕಾಶ ಸಿಗಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಪ್ರಮೋಷನ್​​ಗೆ ಖರ್ಚು ಮಾಡ್ತಿರೋ ಹಣದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು

ನಾಗ್ ಅಶ್ವಿನ್ ಅವರ ಕಲ್ಪನೆಯಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಮೂಡಿ ಬಂದಿದೆ. ಕಾರಿನ ಕಲ್ಪನೆಯನ್ನೂ ಕೂಡ ಅವರೇ ನೀಡಿದ್ದಾರೆ. ಮಹಿಂದ್ರಾ ಸಂಸ್ಥೆಯವರು ಈ ಕಾರನ್ನು ನಿರ್ಮಾಣ ಮಾಡಿದ್ದಾರೆ. ಜೂನ್ 27ರಂದು ಈ ಸಿನಿಮಾ ರಿಲೀಸ್ ಆಗಲಿದೆ.  ಈ ಚಿತ್ರ ಬಿಡುಗಡೆಗೆ ಇನ್ನು ಇರೋದು ಕೇವಲ ಒಂದು ತಿಂಗಳು ಮಾತ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:12 pm, Mon, 27 May 24

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಮೈಸೂರಿನಲ್ಲಿ ಟಿಟಿ ವಾಹನದ ಮೇಲೆ ಬಿದ್ದ ದೀಪಾಲಂಕಾರದ ಕಟೌಟ್
ಮೈಸೂರಿನಲ್ಲಿ ಟಿಟಿ ವಾಹನದ ಮೇಲೆ ಬಿದ್ದ ದೀಪಾಲಂಕಾರದ ಕಟೌಟ್
3705.30 ಕೋಟಿ ರೂ. ಬರ ಪರಿಹಾರಕ್ಕೆ ಸಿಎಂ ಡಿಕೆ ಶಿವಕುಮಾರ್ ಮನವಿ
3705.30 ಕೋಟಿ ರೂ. ಬರ ಪರಿಹಾರಕ್ಕೆ ಸಿಎಂ ಡಿಕೆ ಶಿವಕುಮಾರ್ ಮನವಿ
ಟಾರ್ಚ್ ಬಾಯ್ ಆಗಿದ್ದ ‘ಪ್ರೇಮದ ಊರಲಿ’ ನಿರ್ದೇಶಕ ಮನೋಜ್ ಕುಮಾರ್
ಟಾರ್ಚ್ ಬಾಯ್ ಆಗಿದ್ದ ‘ಪ್ರೇಮದ ಊರಲಿ’ ನಿರ್ದೇಶಕ ಮನೋಜ್ ಕುಮಾರ್
ಹಸಿ ಕಸದ ಜೊತೆ ಪ್ಲಾಸ್ಟಿಕ್ ಹಾಕಬೇಡಿ ಎಂದಿದ್ದಕ್ಕೆ ನಿವೃತ್ತ ಅಧಿಕಾರಿಯ ದರ್ಪ
ಹಸಿ ಕಸದ ಜೊತೆ ಪ್ಲಾಸ್ಟಿಕ್ ಹಾಕಬೇಡಿ ಎಂದಿದ್ದಕ್ಕೆ ನಿವೃತ್ತ ಅಧಿಕಾರಿಯ ದರ್ಪ