ಪ್ರಭಾಸ್ ಡ್ರೈವ್ ಮಾಡಿದ್ದ ‘ಬುಜ್ಜಿ’ ಕಾರನ್ನು ಓಡಿಸಿ ಶಾಕ್ ಆದ ನಾಗ ಚೈತನ್ಯ
‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಪ್ರಭಾಸ್ ಓಡಿಸಿರುವ ಭಿನ್ನ ಮಾದರಿಯ ಕಾರನ್ನು ನಟ ನಾಗ ಚೈತನ್ಯ ಓಡಿಸಿದ್ದು, ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಅಕ್ಕಿನೇನಿ ನಾಗ ಚೈತನ್ಯ (Naga Chaithanya) ಅವರಿಗೆ ಕಾರುಗಳ ಬಗ್ಗೆ ಇರೋ ಕ್ರೇಜ್ ತುಂಬಾನೇ ದೊಡ್ಡದು. ಅವರ ಬಳಿ ಸಾಕಷ್ಟು ಕಾರುಗಳು ಇವೆ. ಇತ್ತೀಚೆಗೆ ಅವರ ಮನೆಯಲ್ಲಿ ಕಾರನ್ನು ಪಾರ್ಕ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈಗ ಅವರು ಒಂದು ಹೊಸ ಅನುಭವ ಪಡೆದಿದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರದ ‘ಬುಜ್ಜಿ’ನ ಅವರ ಡ್ರೈವ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಓಡಿಸೋ ಕಾರಿಗೆ ‘ಬುಜ್ಜಿ’ ಎಂದು ಹೆಸರು ಇಡಲಾಗಿದೆ. ಈ ಕಾರನ್ನು ಇತ್ತೀಚೆಗೆ ರಿವೀಲ್ ಮಾಡಲಾಗಿದೆ. ಈ ಕಾರು ಸಾಕಷ್ಟು ಗಮನ ಸೆಳೆಯುತ್ತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕಾರನ್ನು ಫ್ಯಾನ್ಸ್ ಜೊತೆಗೆ ಸೆಲೆಬ್ರಿಟಿಗಳು ಕೂಡ ಇಷ್ಟಪಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ಕಾರಿನ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಾರ್ ಲವರ್ ಆಗಿರೋ ಅವರಿಗೆ ಈ ಕಾರು ಸಖತ್ ಇಷ್ಟ ಆಗಿದೆ.
ರೇಸ್ ಟ್ರ್ಯಾಕ್ನಲ್ಲಿ ‘ಬುಜ್ಜಿ’ಯನ್ನು ಓಡಿಸಿದ್ದಾರೆ ನಾಗ ಚೈತನ್ಯ. ಆ ಬಳಿಕ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ‘ನಾನು ಈ ಕಾರನ್ನು ನೋಡಿ ಇನ್ನೂ ಶಾಕ್ನಲ್ಲಿ ಇದ್ದೇನೆ. ನಿರ್ದೇಶಕ ನಾಗ್ ಅಶ್ವಿನ್ ಅವರು ಈ ಕಾರನ್ನು ನಿರ್ಮಿಸಲು ಇಂಜಿನಿಯರಿಂಗ್ ನಿಯಮಗಳನ್ನು ಮೀರಿದ್ದಾರೆ’ ಎಂದು ನಾಗ ಚೈತನ್ಯ ಹೇಳಿದ್ದಾರೆ. ಅವರು ಈ ಕಾರನ್ನು ರೈಡ್ ಮಾಡುವಾಗ ಸಖತ್ ಎಂಜಾಯ್ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಈ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ನಾಗ ಚೈತನ್ಯ ಕಾರ್ ಕಲೆಕ್ಷನ್
ಅಕ್ಕಿನೇನಿ ನಾಗ ಚೈತನ್ಯ ಬಳಿ ಹಲವು ಕಾರುಗಳು ಇವೆ. ಅವರು ಸ್ಪೋರ್ಟ್ಸ್ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ‘ಮರ್ಸೀಡಿಸ್ ಬೆಂಜ್ ಜಿ63 ಎಎಂಜಿ, ಫೆರಾರಿ 488 ಜಿಟಿಬಿ ಕಾರುಗಳು ಇವೆ. ಇತ್ತೀಚೆಗೆ ಅವರು ಪೋರ್ಷಾ 992 ಜಿಟಿ3 ಕಾರನ್ನು ಖರೀದಿ ಮಾಡಿದ್ದಾರೆ. ಇದರ ಬೆಲೆ 4 ಕೋಟಿ ರೂಪಾಯಿಗೂ ಮೀರಿದೆ.
‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ
‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್ ಜೊತೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿಗೂ ಅಧಿಕವಾಗಿದೆ. ಈ ಚಿತ್ರದ ಪ್ರಚಾರದ ಬಜೆಟ್ 60 ಕೋಟಿ ರೂಪಾಯಿ ಇದೆ.
ಕಾರನ್ನು ನಿರ್ಮಿಸಿದವರು ಮಹಿಂದ್ರಾ
ಈ ಕಾರಿನ ವೀಲ್ಸ್ ಸಾಕಷ್ಟು ಗಮನ ಸೆಳೆದಿದೆ. ಇದರ ಟಯರ್ಗಳನ್ನು CEAT ಕಂಪನಿ ವಿಶೇಷವಾಗಿ ಸಿದ್ಧಪಡಿಸಿದ್ದಾರೆ. ಈ ಕಾರಿನ ತೂಕ 6 ಟನ್ ಇದೆ. ‘ಕಲ್ಕಿ 2898 ಎಡಿ’ ಚಿತ್ರ ಭವಿಷ್ಯದ ಕಥೆಯನ್ನು ಹೊಂದಿದೆ. ಹೀಗಾಗಿ, ಇದು ಭವಿಷ್ಯದ ಕಾರು ಎನ್ನುವ ಪರಿಕಲ್ಪನೆಯಲ್ಲಿ ಸಿದ್ಧಪಡಿಸಲಾಗಿದೆ. ಸಿನಿಮಾದಲ್ಲಿ ಪ್ರಭಾಸ್ ಅವರೇ ತಮ್ಮ ಕೈಯ್ಯಾರೆ ಈ ಕಾರನ್ನು ಸಿದ್ಧಪಡಿಸುವ ರೀತಿಯಲ್ಲಿ ತೋರಿಸಿದ್ದಾರೆ. ಈ ಕಾರಿನ ಟೈಯರ್ಗಳು ಎಲ್ಲಾ ದಿಕ್ಕಿನಲ್ಲೂ ತಿರುಗುತ್ತವೆ. ಸಾಮಾನ್ಯ ವ್ಯಕ್ತಿಯ ಭುಜಕ್ಕೆ ಈ ಕಾರಿನ ಟೈಯರ್ ಬರುತ್ತದೆ. ಈ ಕಾರಿನ ಉದ್ದ 6070 ಮಿಲಿ ಮೀಟರ್, ಅಗಲ 3380 ಮಿಲಿ ಮೀಟರ್ ಹಾಗೂ ಎತ್ತರ 2186 ಮಿಲಿ ಮೀಟರ್ ಇದೆ. ಮಹಿಂದ್ರಾ ಹಾಗೂ ಜಯೇಮ್ ಆಟೋಮೇಟಿವ್ ಕೊಯಿಮತ್ತೂರಿನಲ್ಲಿ ಸಿದ್ಧಪಡಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:41 pm, Sun, 26 May 24