AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿವೋರ್ಸ್ ರೂಮರ್ಸ್ ಬೆನ್ನಲ್ಲೇ ಖ್ಯಾತ ನಟನ ಜೊತೆ ಹಾರ್ದಿಕ್ ಪಾಂಡ್ಯ ಪತ್ನಿ ಸುತ್ತಾಟ!

ಹಾರ್ದಿಕ್‌ ಪಾಂಡ್ಯ ವಿಚ್ಛೇದನ ವದಂತಿ ಸದ್ಯ ಎಲ್ಲೆಡೆ ಹರಿದಾಡುತ್ತಿದ್ದಂತೆ ಇದೀಗ ದಿಶಾ ಪಟಾನಿ ಬಾಯ್‌ಫ್ರೆಂಡ್‌ ಜೊತೆ ಹಾರ್ದಿಕ್‌ ಪಾಂಡ್ಯ ಪತ್ನಿ ನತಾಶಾ ಕಾಣಿಸಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

ಡಿವೋರ್ಸ್ ರೂಮರ್ಸ್ ಬೆನ್ನಲ್ಲೇ ಖ್ಯಾತ ನಟನ ಜೊತೆ ಹಾರ್ದಿಕ್ ಪಾಂಡ್ಯ ಪತ್ನಿ ಸುತ್ತಾಟ!
Natasa Hardik Divorce
Follow us
ಅಕ್ಷತಾ ವರ್ಕಾಡಿ
|

Updated on:May 26, 2024 | 11:49 AM

ಸ್ಟಾರ್​ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ವಿಚ್ಛೇದನ ವದಂತಿ ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಈ ಸುದ್ದಿಗಳನ್ನು ಪುಷ್ಠೀಕರಿಸುವಂತೆ ಇದೀಗ ದಿಶಾ ಪಟಾನಿಯ ಆಪ್ತ ಸ್ನೇಹಿತ ಅಲೆಕ್ಸಾಂಡರ್ ಅಲೆಕ್ಸ್ ಜೊತೆ ಹಾರ್ದಿಕ್‌ ಪಾಂಡ್ಯ ಪತ್ನಿ ನತಾಶಾ ಕಾಣಿಸಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ನತಾಶಾ ಗುಲಾಬಿ ಬಣ್ಣದ ಉಡುಪು, ಬಿಳಿ ಸ್ಕರ್ಟ್​​ ಗುಲಾಬಿ ಬಣ್ಣದ ಕ್ರಾಕ್ಸ್​​ ಧರಿಸಿ ಅಲೆಕ್ಸಾಂಡರ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಇವರಿಬ್ಬರ ನಡುವಿನ ಗೆಳೆತನ ಪಾಂಡ್ಯ ಜೊತೆಗೆ ಡಿವೋರ್ಸ್ಗೆ ಕಾರಣವಾಗಿರಬಹುದು ಎಂದು ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿದೆ.

ಪ್ರತೀ ಮ್ಯಾಚ್​​​ ಸಮಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ನತಾಶಾ, ಈ ಬಾರಿ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಪಾಂಡ್ಯ ಪಾದಾರ್ಪಣೆ ಮಾಡಿದರೂ, ನತಾಶಾ ಮಾತ್ರ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ​ ಯಾವುದೇ ಪಂದ್ಯವನ್ನು ವೀಕ್ಷಿಸಲು ಅವರು ಆಗಮಿಸಿರಲಿಲ್ಲ. ಇದೀಗ ಮತ್ತೊಬ್ಬನೊಂದಿಗೆ ಕಾಣಿಸಿಕೊಂಡಿದ್ದು, ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಇಬ್ಬರು ಡೈವೋರ್ಸ್ ಆಗಲಿದ್ದಾರೆ ಎಂದು ವದಂತಿಗಳು ಹರಿದಾಡುತ್ತಿದೆ.

ಇದನ್ನೂ ಓದಿ: ನನ್ನ ಆಸ್ತಿಯ ಶೇ.50 ಅಲ್ಲ ಶೇ.5 ಭಾಗ ಕೂಡಾ ಯಾರಿಗೂ ಸಿಗೋಲ್ಲ; ವೈರಲ್‌ ಆಯ್ತು ಹಾರ್ದಿಕ್ ಪಾಂಡ್ಯ ಹಳೆಯ ಸಂದರ್ಶನ ವಿಡಿಯೋ

ಡಿವೋರ್ಸ್‌ ಗಾಸಿಪ್‌ ಎಲ್ಲೆಡೆ ಹರಿದಾಡುತ್ತಿದ್ದರೂ ಕೂಡ ಈ ವಿಷಯದ ಬಗ್ಗೆ ಹಾರ್ದಿಕ್​​ ಪಾಂಡ್ಯ ಹಾಗೂ ಪತ್ನಿ ನತಾಶಾ ಈವರೆಗೆ ಎಲ್ಲಿಯೂ ಕೂಡ ಏನನ್ನೂ ಹೇಳಿಕೊಂಡಿಲ್ಲ. ಆದರೆ ಡಿವೋರ್ಸ್‌ ಬಳಿಕ ಹಾರ್ದಿಕ್‌ ಅವರ ಆಸ್ತಿಯಲ್ಲಿ ಶೇ. 70ರಷ್ಟು ಭಾಗ ನತಾಶಾಗೆ ಹೋಗಲಿದೆ ಎಂಬ ಸುದ್ದಿಯೂ ಪ್ರಕಟವಾಗಿತ್ತು. ಈ ಸುದ್ದಿಯ ಬೆನ್ನಲ್ಲೇ “ನನ್ನ ಆಸ್ತಿಯ ಶೇ.50ಅಲ್ಲ 5ರಷ್ಟು ಭಾಗ ಕೂಡಾ ಯಾರಿಗೂ ಸಿಗೋಲ್ಲ” ಎಂದು ಹೇಳಿರುವ ಹಾರ್ದಿಕ್‌ ಪಾಂಡ್ಯ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಗಿ ವೈರಲ್‌ ಆಗುತ್ತಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:34 am, Sun, 26 May 24