AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನನ್ನ ಆಸ್ತಿಯ ಶೇ.50 ಅಲ್ಲ ಶೇ.5 ಭಾಗ ಕೂಡಾ ಯಾರಿಗೂ ಸಿಗೋಲ್ಲ; ವೈರಲ್‌ ಆಯ್ತು ಹಾರ್ದಿಕ್ ಪಾಂಡ್ಯ ಹಳೆಯ ಸಂದರ್ಶನ ವಿಡಿಯೋ

ಟೀಮ್‌ ಇಂಡಿಯಾ ಸ್ಟಾರ್‌ ಕ್ರಿಕೆಟರ್‌ ಹಾರ್ದಿಕ್‌ ಪಾಂಡ್ಯ ಸದ್ಯ ತಮ್ಮ ವೈಯಕ್ತಿಯ ವಿಚಾರಗಳ ಮೂಲಕನೇ ಸುದ್ದಿಯಲ್ಲಿದ್ದಾರೆ. ಪಾಂಡ್ಯ ಮತ್ತು ನತಾಶಾ ಡಿವೋರ್ಸ್‌ ಗಾಸಿಪ್‌ ಜೋರಾಗಿ ಹಬ್ಬಿದ್ದು, ಹಾರ್ದಿಕ್‌ ತಮ್ಮ ಆಸ್ತಿಯ ಶೇಕಡಾ 70% ಭಾಗವನ್ನು ಪತ್ನಿ ನತಾಶಾಗೆ ನೀಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ಬೆನ್ನಲ್ಲೇ ಪಾಂಡ್ಯ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral Video: ನನ್ನ ಆಸ್ತಿಯ ಶೇ.50 ಅಲ್ಲ ಶೇ.5 ಭಾಗ ಕೂಡಾ ಯಾರಿಗೂ ಸಿಗೋಲ್ಲ;  ವೈರಲ್‌ ಆಯ್ತು ಹಾರ್ದಿಕ್ ಪಾಂಡ್ಯ ಹಳೆಯ ಸಂದರ್ಶನ ವಿಡಿಯೋ
ಹಾರ್ದಿಕ್ ಪಾಂಡ್ಯ
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on: May 26, 2024 | 10:52 AM

Share

ಯಾಕೋ ಏನೋ ಈ ವರ್ಷ ಸ್ಟಾರ್‌ ಕ್ರಿಕೆಟರ್‌ ಹಾರ್ದಿಕ್‌ ಪಾಂಡ್ಯ ಅವರ ಟೈಮ್‌ ಸರಿಯಿಲ್ಲ ಎಂದು ಕಾಣಿಸುತ್ತೆ. ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾಗಿ ಆಯ್ಕೆಯಾದಾಗಿನಿಂದಲೂ ಹಾರ್ದಿಕ್‌ ಟೀಕೆಗಳಿಗೆ ಗುರಿಯಾಗಿ ಜರ್ಜರಿತಗಾರಿದ್ದಾರೆ. ಇದೀಗ ಇವರು ತಮ್ಮ ವೈಯಕ್ತಿಕ ವಿಚಾರದಿಂದಲೇ ಸುದ್ದಿಯಲ್ಲಿದ್ದಾರೆ. ಹೌದು ಈ ನಡುವೆ ಪಾಂಡ್ಯ ಮತ್ತು ನತಾಶಾ ಡಿವೋರ್ಸ್‌ ಗಾಸಿಪ್‌ ಜೋರಾಗಿ ಹಬ್ಬಿದ್ದು, ಈ ವಿಷಯದ ಬಗ್ಗೆ ಇಬ್ಬರೂ ಈವರೆಗೆ ಏನನ್ನೂ ಹೇಳದಿದ್ದರೂ ಡಿವೋರ್ಸ್‌ ಬಳಿಕ ಹಾರ್ದಿಕ್‌ ಅವರ ಆಸ್ತಿಯಲ್ಲಿ 70% ಭಾಗವನ್ನು ನತಾಶಾಗೆ ನೀಡಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ಸುದ್ದಿಯ ಬೆನ್ನಲ್ಲೇ ಇದೀಗ “ನನ್ನ ಆಸ್ತಿಯ 50% ಅಲ್ಲ 5% ಭಾಗ ಕೂಡಾ ಯಾರಿಗೂ ಸಿಗೋಲ್ಲ” ಎಂದು ಹೇಳಿರುವ ಹಾರ್ದಿಕ್‌ ಪಾಂಡ್ಯ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

@Bhai_saheb ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಹಳೆಯ ಸಂದರ್ಶನವೊಂದರ ವಿಡಿಯೋ ತುಣುಕನ್ನು ಶೇಕ್‌ ಮಾಡಲಾಗಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ಸಂದರ್ಶನದಲ್ಲಿ ಪಾಂಡ್ಯ ನನ್ನ ಅಪ್ಪನ ಅಕೌಂಟ್‌ನಲ್ಲಿ ಅಮ್ಮನ ಹೆಸರಿದೆ, ಅಣ್ಣ ಹಾಗೂ ನನ್ನ ಅಕೌಂಟ್‌ನಲ್ಲಿಯೂ ಕೂಡಾ ಅಮ್ಮನ ಹೆಸರಿದೆ. ನಮ್ಮ ಮನೆಯ ಕಾರು, ಆಸ್ತಿಗಳಿಂದ ಹಿಡಿದು ಎಲ್ಲವೂ ಕೂಡಾ ಅಮ್ಮನ ಹೆಸರಿನಲ್ಲಿದ್ದು, ನಮ್ಮೆಲ್ಲರ 50% ಅಕೌಂಟ್‌ ಪಾರ್ಟ್ನರ್‌ಶಿಪ್‌ ಅಮ್ಮನ ಹೆಸರಿನಲ್ಲಿದೆ. ಹೀಗಿರುವಾಗ ನನ್ನ ಆಸ್ತಿಯ 50% ಅಲ್ಲ 5% ಭಾಗ ಕೂಡಾ ಯಾರಿಗೂ ಸಿಗೋಕೆ ಸಾಧ್ಯವಿಲ್ಲ ಎಂದು ಹೇಳಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಪತ್ನಿ ಯಾರು? ಆಕೆಯ ಹಿನ್ನೆಲೆ ಏನು?

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಮನುಷ್ಯ ತುಂಬಾನೇ ಸ್ಮಾರ್ಟ್‌ ಎಂದು ಹಾರ್ದಿಕ್‌ ಪಾಂಡ್ಯ ಅವರು ತೆಗೆದುಕೊಂಡ ಈ ನಿರ್ಧಾರಕ್ಕೆ ನೆಟ್ಟಿಗರು ಭೇಷ್‌ ಎಂದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ