AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hardik Pandya: ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಶಾಕ್: ಪತ್ನಿ ನತಾಶ ಜೊತೆ ಬಿರುಕು: ಡಿವೋರ್ಸ್​ಗೆ ಮುಂದಾದ ಸ್ಟಾರ್ ಆಲ್ರೌಂಡರ್?

Hardik Pandya - Natasa Stankovic divorce: ಹಾರ್ದಿಕ್ ಪಾಂಡ್ಯ ವೈಯಕ್ತಿಕ ಜೀವನದಲ್ಲಿ ದೊಡ್ಡ ಸಮಸ್ಯೆಗಳು ತಲೆದೋರಿದಂತಿದೆ. ಹಾರ್ದಿಕ್ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಎಲ್ಲವೂ ಸರಿಯಿಲ್ಲ ಎಂಬಂತೆ ಗೋಚರಿಸುತ್ತಿದೆ. ಇವರಿಬ್ಬರ ನಡುವೆ ಮನಸ್ತಾಪವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Hardik Pandya: ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಶಾಕ್: ಪತ್ನಿ ನತಾಶ ಜೊತೆ ಬಿರುಕು: ಡಿವೋರ್ಸ್​ಗೆ ಮುಂದಾದ ಸ್ಟಾರ್ ಆಲ್ರೌಂಡರ್?
Hardik Pandya - Natasa Stankovic divorce
Vinay Bhat
|

Updated on: May 24, 2024 | 9:34 AM

Share

ಐಪಿಎಲ್ 2024 ಮುಂಬೈ ಇಂಡಿಯನ್ಸ್ ಪಾಲಿಗೆ ಅತ್ಯಂತ ಕೆಟ್ಟ ಟೂರ್ನಿ ಎಂದೇ ಹೇಳಬಹುದು. ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಎಂಐ ಅತ್ಯಂತ ಕಳಪೆ ಪ್ರದರ್ಶನ ತೋರಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸದ್ಯ ಹಾರ್ದಿಕ್ ಪಾಂಡ್ಯ ಅವರು ಕ್ರಿಕೆಟ್ ಜೀವನದಲ್ಲಿ ಕೆಟ್ಟ ಸಮಯವನ್ನು ಕಳೆದಯುತ್ತಿದ್ದಾರೆ ಎಂದೂ ಹೇಳಬಹುದು. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಾಗಿನಿಂದ ಹಾರ್ದಿಕ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅದು ಯಾವುದೂ ನಡೆಯಲಿಲ್ಲ. ಐದು ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಲೀಗ್ ಸುತ್ತಿನಲ್ಲೇ ಹೊರಬಿತ್ತು. ಇವೆಲ್ಲದರ ನಡುವೆ ಪಾಂಡ್ಯಗೆ ಮತ್ತೊಂದು ಆಘಾತ ಉಂಟಾಗಿದೆ.

ಹಾರ್ದಿಕ್ ಪಾಂಡ್ಯ ವೈಯಕ್ತಿಕ ಜೀವನದಲ್ಲಿ ದೊಡ್ಡ ಸಮಸ್ಯೆಗಳು ತಲೆದೋರಿದಂತಿದೆ. ಹಾರ್ದಿಕ್ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಎಲ್ಲವೂ ಸರಿಯಿಲ್ಲ ಎಂಬಂತೆ ಗೋಚರಿಸುತ್ತಿದೆ. ಇವರಿಬ್ಬರ ನಡುವೆ ಮನಸ್ತಾಪವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇವರಿಬ್ಬರು ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ. 2020 ರಲ್ಲಿ ವಿವಾಹವಾದ ಹಾರ್ದಿಕ್-ನತಾಶಾ ಕ್ರಿಕೆಟ್‌ ಲೋಕದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಜೋಡಿ. ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರು ಜೊತೆಗೆ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಅಗಸ್ತ್ಯ ಎಂಬ ಮಗ ಕೂಡ ಇದ್ದಾನೆ. ಆದರೆ, ಇವರ ಸಂಬಂಧದ ಬಗ್ಗೆ ವದಂತಿಗಳು ಹಬ್ಬಿವೆ.

ಚೆನ್ನೈ ವಿರುದ್ಧ ಗೆದ್ದ ಬಳಿಕ ಆರ್​ಸಿಬಿಯಿಂದ ಬೆಳಗಿನ ಜಾವ 5 ಗಂಟೆವರೆಗೆ ಪಾರ್ಟಿ: ಶಾಕಿಂಗ್

ನತಾಶ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಫೋಟೋ:

View this post on Instagram

A post shared by @natasastankovic__

View this post on Instagram

A post shared by @natasastankovic__

ಐಪಿಎಲ್ 2024 ರ ಸಂಪೂರ್ಣ ಋತುವಿನಲ್ಲಿ ನತಾಶಾ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿದ್ದರೂ, ನತಾಶಾ ಒಂದೇ ಒಂದು ಪಂದ್ಯ ವೀಕ್ಷಣೆಗೆ ಬಂದಿಲ್ಲ. ನತಾಶಾ ಏಕೆ ಮೈದಾನಕ್ಕೆ ಬಂದಿಲ್ಲ ಎಂಬ ಪ್ರಶ್ನೆಗಳಿವೆ. ಮಾರ್ಚ್ 4 ನತಾಶಾ ಅವರ ಜನ್ಮದಿನ. ಆಗ ಹಾರ್ದಿಕ್ ಪಾಂಡ್ಯ ಸೋಷಿಯಲ್ ಮೀಡಿಯಾದಲ್ಲೂ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರಲಿಲ್ಲ. ಇದು ಬ್ರೇಕಪ್ ವದಂತಿಗಳಿಗೆ ಮತ್ತಷ್ಟು ಬಲ ನೀಡಿದೆ.

ಪೋಸ್ಟ್ ಮ್ಯಾಚ್​ನಲ್ಲಿ ಆರ್​ಸಿಬಿ ಸೋಲಿಗೆ ನಾಯಕ ಡುಪ್ಲೆಸಿಸ್ ದೂರಿದ್ದು ಯಾರನ್ನ?

View this post on Instagram

A post shared by @natasastankovic__

ಮತ್ತೊಂದೆಡೆ, ನತಾಶಾ ತನ್ನ ಇನ್​ಸ್ಟಾಗ್ರಾಮ್ ಬಯೋದಿಂದ ಪಾಂಡ್ಯ ಉಪನಾಮವನ್ನು ತೆಗೆದುಹಾಕಿದ್ದಾರೆ. ಅಲ್ಲದೇ ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಜೊತೆಗಿನ ಫೋಟೋಗಳು ಶೇರ್ ಆಗುತ್ತಿಲ್ಲ. ಹೀಗಾಗಿ ಇವರಿಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಆದರೆ, ಈ ಬಗ್ಗೆ ಇಬ್ಬರೂ ಅಧಿಕೃತ ಮಾಹಿತಿ ನೀಡಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ