RCB vs CSK: ಚೆನ್ನೈ ವಿರುದ್ಧ ಗೆದ್ದ ಬಳಿಕ ಆರ್ಸಿಬಿಯಿಂದ ಬೆಳಗಿನ ಜಾವ 5 ಗಂಟೆವರೆಗೆ ಪಾರ್ಟಿ: ಶಾಕಿಂಗ್
RCB Party, IPL 2024: ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27 ರನ್ಗಳಿಂದ ಗೆದ್ದು ಪ್ಲೇ ಆಫ್ಗೆ ಪ್ರವೇಶ ಪಡೆದಿತ್ತು. ಈ ರೋಚಕ ಜಯದ ಬಳಿಕ ಆರ್‌ಸಿಬಿ ಆಟಗಾರರು ಭರ್ಜರಿ ಪಾರ್ಟಿ ಮಾಡಿದ್ದಾರೆ ಎಂದು ಯಶ್ ದಯಾಳ್ ತಂದೆ ಹೇಳಿದ್ದಾರೆ.
ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ 2024 ರಲ್ಲಿ ಅದ್ಭುತ ಪ್ರದರ್ಶನ ನೀಡಿತು. ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳಲಿದೆ ಎನ್ನಲಾಗಿದ್ದ ತಂಡ ಪ್ಲೇ ಆಫ್ ತಲುಪಿ ಎಲ್ಲರನ್ನೂ ಅಚ್ಚರಿಗೊಳಿಸಿತು. ಆರಂಭದಲ್ಲಿ ಸತತ 6 ಪಂದ್ಯಗಳನ್ನು ಸೋತರೆ, ನಂತರ ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ ಆಫ್ ತಲುಪಿತು. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ ಅದ್ಭುತವಾಗಿ ಆಡಿತು. ಬೌಲರ್ ಯಶ್ ದಯಾಳ್ ಕೊನೆಯ ಓವರ್‌ನಲ್ಲಿ ಬೌಲಿಂಗ್ ಮಾಡಿ ಆರ್‌ಸಿಬಿ ಗೆಲುವನ್ನು ಖಚಿತಪಡಿಸಿದರು. ಇದೀಗ ಯಶ್ ತಂದೆ ಚೆನ್ನೈ ವಿರುದ್ಧದ ಈ ದೊಡ್ಡ ಗೆಲುವಿನ ನಂತರ ಇಡೀ ತಂಡ ಬೆಳಗಿನ ಜಾವ 5 ಗಂಟೆಯವರೆಗೂ ಪಾರ್ಟಿ ಮಾಡಿದೆ ಎಂದು ಬಹಿರಂಗಪಡಿಸಿದ್ದಾರೆ.
ಚೆನ್ನೈ ತಂಡವನ್ನು ಸೋಲಿಸಿದ ನಂತರ ಇಡೀ ತಂಡವು ಮುಂಜಾನೆ 5 ಗಂಟೆಯವರೆಗೆ ಪಾರ್ಟಿ ಮಾಡಿದೆ ಎಂದು ಆರ್‌ಸಿಬಿ ವೇಗದ ಬೌಲರ್ ಯಶ್ ದಯಾಳ್ ತಂದೆ ಚಂದ್ರಪಾಲ್ ದಯಾಲ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ”ಚೆನ್ನೈ ತಂಡವನ್ನು ಸೋಲಿಸಿದ ಆರ್‌ಸಿಬಿ ತಂಡವು ಗೆಲುವಿನ ಸಂಭ್ರಮದಲ್ಲಿ ಮುಳುಗಿತ್ತು. ಇಡೀ ರಾತ್ರಿ ನಿದ್ದೆ ಮಾಡದೆ ಬೆಳಗಿನ ಜಾವ 5 ಗಂಟೆಯವರೆಗೂ ಪಾರ್ಟಿ ಮಾಡಿತ್ತು. ಆರ್‌ಸಿಬಿ ಪ್ಲೇಯರ್ಸ್ ತುಂಬಾ ಸಂತೋಷಪಟ್ಟರು,” ಎಂದು ಹೇಳಿದ್ದಾರೆ.
ಪೋಸ್ಟ್ ಮ್ಯಾಚ್ನಲ್ಲಿ ಆರ್‌ಸಿಬಿ ಸೋಲಿಗೆ ನಾಯಕ ಡುಪ್ಲೆಸಿಸ್ ದೂರಿದ್ದು ಯಾರನ್ನ?
ಈ ಪಂದ್ಯದ 20ನೇ ಓವರ್ನ ಯಶ್ ಬೌಲಿಂಗ್ನ ಮೊದಲ ಎಸೆತದಲ್ಲಿ ಧೋನಿ ಸಿಕ್ಸರ್ ಬಾರಿಸಿದಾಗ ಸೋಲುವ ಭೀತಿ ಎದುರಾಯಿತು. ನಂತರ ದಯಾಳ್ ತಮ್ಮ ಬೌಲಿಂಗ್‌ನತ್ತ ಗಮನ ಹರಿಸಿ ಕ್ರೀಸ್‌ನಲ್ಲಿ ಯಾರು ಇದ್ದಾರೆ ಎಂಬುದನ್ನು ಗಮನಿಸದೆ ಬೌಲಿಂಗ್ ಮಾಡಿದರು ಎಂದು ಅವರು ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. ಮೇ 22ರ ರಾತ್ರಿ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಿತು. ಎಲಿಮಿನೇಟರ್ ಪಂದ್ಯವನ್ನು ಆರ್‌ಆರ್ 4 ವಿಕೆಟ್‌ಗಳಿಂದ ಗೆದ್ದುಕೊಂಡ ಪರಿಣಾಮ ಆರ್‌ಸಿಬಿ ಟೂರ್ನಿಯಿಂದ ಹೊರಬಿತ್ತು.
ಐಪಿಎಲ್ನಲ್ಲಿಂದು ಹೈದರಾಬಾದ್-ರಾಜಸ್ಥಾನ್ ನಡುವೆ 2ನೇ ಕ್ವಾಲಿಫೈಯರ್ ಪಂದ್ಯ: ಗೆದ್ದ ತಂಡ ಫೈನಲ್ಗೆ ಲಗ್ಗೆ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 172 ರನ್ ಗಳಿಸಿತು. 173 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದೀಗ ಎರಡನೇ ಕ್ವಾಲಿಫೈಯರ್ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಮೇ 24 ರಂದು ಚೆನ್ನೈನಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ